Daily Horoscope: ಸೆಪ್ಟೆಂಬರ್ 6 ಈ ರಾಶಿಗಳ ಜನರಿಗೆ ಲಕ್ಕಿ ಸಾಬೀತಾಗಲಿದೆ, ಇಲ್ಲಿದೆ ಇಂದಿನ ರಾಶಿಫಲ

Daily Horoscope 6 September: ಮಾನಸಿಕ ನೆಮ್ಮದಿ ಇರಲಿದೆ, ನೌಕರಿಯಲ್ಲಿ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ಕಾರ್ಯಕ್ಷೇತ್ರ ಕೂಡ ವೃದ್ಧಿಯಾಗಲಿದೆ. ಕಠಿಣ ಪರಿಶ್ರಮವಿರಲಿದೆ. ಯಾತ್ರೆ ಕೈಗೊಳ್ಳುವ ಯೋಗವಿದೆ. ಸಂಯಮದಿಂದ ಇರಿ. ಅನಾವಶ್ಯಕ ವಾಗ್ವಾದದಿಂದ ದೂರವಿರಿ.

Written by - Nitin Tabib | Last Updated : Sep 5, 2022, 10:01 PM IST
  • ಮನಸ್ಸು ಸಂತೋಷದಿಂದ ಕೂಡಿರುತ್ತದೆ,
  • ಆದರೆ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
  • ಕುಟುಂಬದ ಬೆಂಬಲ ಸಿಗಲಿದೆ.
Daily Horoscope: ಸೆಪ್ಟೆಂಬರ್ 6 ಈ ರಾಶಿಗಳ ಜನರಿಗೆ ಲಕ್ಕಿ ಸಾಬೀತಾಗಲಿದೆ, ಇಲ್ಲಿದೆ ಇಂದಿನ ರಾಶಿಫಲ title=
Daily Horoscope 2022

Daily Horoscope 06 September: ಮಂಗಳವಾರ, ವಿದೇಶದಲ್ಲಿ ಕೆಲಸ ಮಾಡುವವರಿಗೆ ಸಮಯ ಚೆನ್ನಾಗಿದೆ, ವೃಶ್ಚಿಕ ರಾಶಿಯ ಉದ್ಯಮಿಗಳು ಇಂದು ಮಹಿಳಾ ಗ್ರಾಹಕರೊಂದಿಗೆ ಸೌಮ್ಯವಾಗಿ ವರ್ತಿಸಬೇಕು, ಮಹಿಳಾ ಗ್ರಾಹಕರು ಕೋಪಗೊಂಡು ಹಿಂದಿರುಗಿ ಹೋಗುವಂತೆ ಮಾಡಬೇಡಿ.

ಮೇಷ ರಾಶಿ -  ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕಲೆ ಅಥವಾ ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಸಮಚಿತ್ತದಿಂದಿರಿ. ಅನಗತ್ಯ ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ತಂದೆಯ ಬೆಂಬಲ ಸಿಗಲಿದೆ. ಸಂಸಾರದ ಸೌಕರ್ಯಗಳು ಹೆಚ್ಚಾಗಲಿವೆ. ಪ್ರವಾಸಕ್ಕೆ ಹೋಗಬೇಕಾಗಬಹುದು. ಸ್ನೇಹಿತರನ್ನು ಭೇಟಿ ಮಾಡುವಿರಿ.

ವೃಷಭ ರಾಶಿ - ಸಮಚಿತ್ತದಿಂದಿರಿ. ಅತಿಯಾದ ಕೋಪವನ್ನು ತಪ್ಪಿಸಿ. ಗೆಳೆಯ ಬರಬಹುದು. ಉಡುಗೊರೆಯಾಗಿ ಉಡುಪುಗಳನ್ನು ಪಡೆಯಬಹುದು. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಿ. ಸ್ಥಳ ಬದಲಾವಣೆ ಆಗಬಹುದು. ಮನಸ್ಸು ವಿಚಲಿತವಾಗುತ್ತದೆ. ಸ್ವಾವಲಂಬಿಯಾಗಿರಿ. ಮಕ್ಕಳ ಸಂತಸದಲ್ಲಿ ಹೆಚ್ಚಳವಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕಾರ್ಯಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಪರಿಶ್ರಮ ಇರಲಿದೆ. ತಾಯಿಯ ಬೆಂಬಲ ಸಿಗಲಿದೆ. ಧನಪ್ರಾಪ್ತಿಯ ಸಂಕೆತಗಳಿವೆ.

ಮಿಥುನ ರಾಶಿ - ಮನಃಶಾಂತಿ ಇರುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ, ಆದರೆ ಕಾರ್ಯಕ್ಷೇತ್ರದ ವ್ಯಾಪ್ತಿ ಹೆಚ್ಚಳವಾಗಬಹುದು. ಪರಿಶ್ರಮ ಇರಲಿದೆ. ಪ್ರವಾಸದ ಯೋಗವೂ ಇದೆ. ಸಮಚಿತ್ತದಿಂದಿರಿ ಅನಗತ್ಯ ಜಗಳ ಮತ್ತು ವಿವಾದಗಳನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರದ ಪರಿಸ್ಥಿತಿಗಳು ಸುಧಾರಿಸಲಿವೆ. ಲಾಭದ ಅವಕಾಶಗಳೂ ಇರುತ್ತವೆ. ಸಹೋದರರ ಸಹಕಾರದಿಂದ, ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅವಕಾಶವಿದೆ. ಲಾಭ ಇರಲಿದೆ.

ಕರ್ಕ ರಾಶಿ - ಧರ್ಮದ ಬಗ್ಗೆ ಗೌರವ ಹೆಚ್ಚಾಗಲಿದೆ. ವ್ಯಾಪಾರ ಸುಧಾರಣೆಯಾಗಲಿದೆ. ನೀವು ಪೋಷಕರಿಂದ ಹಣಕಾಸಿನ ನೆರವು ಪಡೆಯಬಹುದು. ಕುಟುಂಬದ ಹಿರಿಯರಿಂದ ಹಣ ಪಡೆಯಬಹುದು. ಮನಸ್ಸಿನಲ್ಲಿ ಹತಾಶೆ ಮತ್ತು ಅತೃಪ್ತಿಯ ಭಾವನೆ ಎರಡೂ ಇರಲಿದೆ. ಅನಗತ್ಯ ಕೋಪ ಮತ್ತು ವಾದಗಳನ್ನು ತಪ್ಪಿಸಿ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳು ಇರಬಹುದು. ಕೆಲಸದ ಹೊರೆ ಹೆಚ್ಚಾಗಲಿದೆ. ಮನಸ್ಸಿನಲ್ಲಿ ಗೊಂದಲಮಯ ಸ್ಥಿತಿ ಇರಲಿದೆ.

ಸಿಂಹ ರಾಶಿ - ಮಾತಿನ ಪ್ರಭಾವ ಹೆಚ್ಚಾಗಲಿದೆ. ಮನಸ್ಸಿಗೆ ಸಂತೋಷವಾಗುತ್ತದೆ. ಉದ್ಯೋಗ ಬದಲಾವಣೆಯ ಅವಕಾಶಗಳಿವೆ, ಆದರೆ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆತ್ಮವಿಶ್ವಾಸ ಹೆಚ್ಚಾಗಲಿದೆ, ಆದರೆ ಅತಿಯಾದ ಉತ್ಸಾಹದಿಂದ ದೂರವಿರಿ. ಸ್ವಾವಲಂಬಿಯಾಗಿರಿ. ಸ್ನೇಹಿತರ ಸಹಕಾರದಿಂದ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಲಾಭದ ಅವಕಾಶಗಳು ಕಂದುಬರಲಿವೆ. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು.

ಕನ್ಯಾ ರಾಶಿ -  ಮನಸ್ಸಿಗೆ ಸಂತೋಷವಾಗುತ್ತದೆ. ತಂದೆಯ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಆದಾಯ ಹೆಚ್ಚಾಗುತ್ತದೆ, ಆದರೆ ಪರಿಶ್ರಮ ಇರಲಿದೆ. ಖರ್ಚು ಕೂಡ ಅಧಿಕವಾಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಬರವಣಿಗೆ-ಬೌದ್ಧಿಕ ಕೆಲಸಗಳಲ್ಲಿ ತೊಡಗಿಕೊಳ್ಳುವಿಕೆ ಹೆಚ್ಚಾಗಬಹುದು. ಆದಾಯವೂ ಹೆಚ್ಚಾಗಲಿದೆ. ಬೌದ್ಧಿಕ ಕೆಲಸಗಳು ಗೌರವವನ್ನು ತಂದುಕೊಡುತ್ತವೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ.

ತುಲಾ ರಾಶಿ - ಮನಸ್ಸಿನಲ್ಲಿ ಏರಿಳಿತಗಳಿರುತ್ತವೆ. ಮನಸ್ಸಿಗೂ ತೊಂದರೆಯಾಗಬಹುದು. ಸ್ವಾವಲಂಬಿಯಾಗಿರಿ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ತೊಂದರೆಗಳಿರಬಹುದು. ವ್ಯರ್ಥ ಓಡಾಟ ಇರಲಿದೆ. ಸಮಚಿತ್ತದಿಂದಿರಿ. ಕೋಪ ಮತ್ತು ವಿವಾದಗಳನ್ನು ತಪ್ಪಿಸಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಾಯಿಯ ಬೆಂಬಲ ಸಿಗಲಿದೆ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ಸಿಗಲಿವೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು.

ವೃಶ್ಚಿಕ ರಾಶಿ - ಉದ್ಯೋಗ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿ ನೀವು ಯಶಸ್ಸನ್ನು ಕಾಣುವಿರಿ. ಘನತೆ-ಗೌರವವನ್ನು ಹೆಚ್ಚಾಗಲಿದೆ. ಆದಾಯ ಹೆಚ್ಚಾಗಲಿದೆ. ಭರವಸೆ ಮತ್ತು ಹತಾಶೆಯ ಭಾವನೆಗಳು ಮನಸ್ಸಿನಲ್ಲಿರಬಹುದು. ನೀವು ಹಳೆಯ ಸ್ನೇಹಿತರನ್ನು ಸಂಪರ್ಕಿಸಬಹುದು. ಕೆಲಸದ ಸ್ಥಳದಲ್ಲಿ ಪ್ರಗತಿಯ ಅವಕಾಶಗಳು ಇರುವ ಸಾಧತೆ ಇದೆ. ಅಧಿಕಾರಿಗಳ ಸಹಕಾರ ದೊರೆಯಲಿದೆ. ವ್ಯಾಪಾರದ ಸಂದರ್ಭದಲ್ಲಿ ನೀವು ವಿದೇಶಿ ಪ್ರವಾಸಕ್ಕೆ ಹೋಗಬೇಕಾಗಬಹುದು.

ಧನು ರಾಶಿ - ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೂ ತಾಳ್ಮೆಯಿಂದಿರಲು ಪ್ರಯತ್ನಿಸಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ  ಪ್ರವಾಸಕ್ಕೆ ಹೋಗಬಹುದು. ಕೆಲಸದ ಬಗ್ಗೆ ನಕಾರಾತ್ಮಕತೆಯ ಭಾವ ಇರಬಹುದು. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಉತ್ತಮ ಸ್ಥಿತಿಯಲ್ಲಿರಿ. ವ್ಯಾಪಾರಕ್ಕಾಗಿ ಪ್ರಯಾಣ ಲಾಭದಾಯಕವಾಗಿರುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ - ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಉದ್ಯೋಗದಲ್ಲಿ ಬದಲಾವಣೆಗೆ ಅವಕಾಶವಿರಬಹುದು. ಕೆಲಸದ ಕ್ಷೇತ್ರದಲ್ಲೂ ಬದಲಾವಣೆಯಾಗಬಹುದು. ಆದಾಯ ಹೆಚ್ಚಾಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಆಸ್ತಿ ಆದಾಯದ ಮೂಲವಾಗಬಹುದು. ನೀವು ಸ್ನೇಹಿತರ ಸಹಾಯವನ್ನು ಪಡೆಯಬಹುದು. ಖರ್ಚು ಹೆಚ್ಚಾಗಲಿದೆ. ನೀವು ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ತಾಯಿಯ ಬೆಂಬಲ ಮತ್ತು ಸಹಭಾಗಿತ್ವ ದೊರೆಯಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಧುರತೆ ಇರಲಿದೆ.

ಕುಂಭ ರಾಶಿ - ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೆ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಕುಟುಂಬದ ಬೆಂಬಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ತೊಂದರೆಗಳಿರಬಹುದು. ನೀವು ಸ್ನೇಹಿತರ ಬೆಂಬಲವನ್ನು ಪಡೆಯಬಹುದು. ಶೈಕ್ಷಣಿಕ ಕೆಲಸಗಳತ್ತ ಗಮನ ಹರಿಸಿ. ತೊಂದರೆಗಳು ಉಂಟಾಗಬಹುದು. ವ್ಯಾಪಾರ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ. ಕಟ್ಟಡ ಸಂತೋಷ ಹೆಚ್ಚಾಗಲಿದೆ. ಯೋಜನೇತರ ವೆಚ್ಚಗಳು ಹೆಚ್ಚಾಗಲಿವೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ನೇಹಿತರನ್ನು ಭೇಟಿ ಮಾಡುವಿರಿ.

ಇದನ್ನೂ ಓದಿ-Jyotish Upay: ಭಾಗ್ಯದ ಬಾಗಿಲಿಗೆ ಬಿದ್ದ ಬೀಗವನ್ನು ಕಿತ್ತೆಸೇಯುತ್ತೆ ಈ ಮಂತ್ರ, ಹೇಗೆ ಜಪಿಸಬೇಕು?

ಮೀನ ರಾಶಿ - ನೀವು ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ವಹಿಸುವಿರಿ. ನೀವು ಆಹ್ಲಾದಕರ ಫಲಿತಾಂಶಗಳನ್ನು ಸಹ ಪಡೆಯುತ್ತೀರಿ. ವಿದೇಶ ಪ್ರವಾಸಕ್ಕೂ ಹೋಗಬಹುದು. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ದಾಂಪತ್ಯ ಸುಖ ಹೆಚ್ಚಾಗಲಿದೆ. ಬಟ್ಟೆಯ ಮೇಲಿನ ಖರ್ಚು ಹೆಚ್ಚಾಗಬಹುದು. ವ್ಯಾಪಾರ ವೃದ್ಧಿಯಾಗಲಿದೆ. ಪರಿಶ್ರಮ ಇರಲಿದೆ. ಪ್ರಯಾಣ ಲಾಭದಾಯಕವಾಗಲಿದೆ. ರುಚಿಕರವಾದ ಆಹಾರದಲ್ಲಿ ಆಸಕ್ತಿ ಇರುತ್ತದೆ. ಸಂಗಾತಿಯೊಂದಿಗಿನ ಸಂಬಂಧಗಳಲ್ಲಿ ಕಹಿ ಉಂಟಾಗಬಹುದು. ಕೋಪವನ್ನು ತಪ್ಪಿಸಿ. 

ಇದನ್ನೂ ಓದಿ-Swapna Shastra: ಕನಸಿನಲ್ಲಿ ಹಲ್ಲಿ ಕಾಣಿಸಿಕೊಂಡರೆ ಶುಭವೋ? ಅಶುಭವೋ!!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News