Cow dung for Covid Cure: ಕೊರೊನಾದಿಂದ ಪಾರಾಗಲು ಹಸುವಿನ ಸಗಣಿ ಬಳಸುವ ಮುನ್ನ ಈ ಸುದ್ದಿ ಓದಿ

Cow dung for Covid Cure - ಹಲವು ಜನರು ವಾರಕ್ಕೊಮ್ಮೆ ತಮ್ಮ ದೇಹಕ್ಕೆ ಹಸುವಿನ ಸಗಣಿಯನ್ನು ಲೇಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದು ಕೊರೊನಾ ವೈರಸ್ ಸೋಂಕಿನ (Coronavirus Infection) ಅಪಾಯದಿಂದ ತಪ್ಪಿಸುತ್ತದೆ ಎಂಬುದು ಅವರ ಅನಿಸಿಕೆ. ಆದರೆ ಇದರಲ್ಲಿ ಎಷ್ಟು ನಿಜಾಂಶ ಇದೆ, ವೈದ್ಯರ ಸಲಹೆ ಏನು? ಬನ್ನಿ ತಿಳಿದುಕೊಳ್ಳೋಣ.  

Written by - Nitin Tabib | Last Updated : May 11, 2021, 02:28 PM IST
  • ಸಗಣಿ ಲೇಪ ಮೈಗೆ ಸವರಿಕೊಳ್ಳುವುದರಿಂದ ಇಮ್ಯೂನಿಟಿ ಹೆಚ್ಚಾಗುತ್ತದೆಯಾ?
  • ಹಸುವಿನ ಸಗಣಿ ಲೇಪ ನಮ್ಮನ್ನು ಕೊರೊನಾದಿಂದ ರಕ್ಷಿಸುತ್ತದೆಯಾ?
  • ಈ ಸಂಗತಿಯಲ್ಲಿ ಎಷ್ಟೊಂದು ನಿಜಾಂಶ ಇದೆ ಬನ್ನಿ ತಿಳಿದುಕೊಳ್ಳೋಣ.
Cow dung for Covid Cure: ಕೊರೊನಾದಿಂದ ಪಾರಾಗಲು ಹಸುವಿನ ಸಗಣಿ ಬಳಸುವ ಮುನ್ನ ಈ ಸುದ್ದಿ ಓದಿ title=
Cow Dung For Corona Cure (File Photo)

ನವದೆಹಲಿ: Cow dung for Covid Cure - ಕೊರೊನಾ ವೈರಸ್ ನ ಎರಡನೇಯ ಅಲೆ ಭಾರತದಲ್ಲಿ ಎಷ್ಟೊಂದು ವೇಗವಾಗಿ ಹರಡುತ್ತಿದೆಯೋ, ಅಷ್ಟೇ ವೇಗದಲ್ಲಿ ದಿನನಿತ್ಯ ಕೊರೊನಾ ವೈರಸ್ ನಿಂದ ಪಾರಾಗುವ ಮನೆಮದ್ದುಗಳ ಸಲಹೆ, ಉಪಾಯಗಳು ಹಬ್ಬುತ್ತಿವೆ. ಆದರೆ, ಪ್ರತಿಯೊಂದು ಮನೆಮದ್ದು ಅಥವಾ ಆಯುರ್ವೇದ ಉಪಾಯ ನಿಮಗೆ ಲಾಭ ನೀಡಲಿದೆ ಎಂದಲ್ಲ. ಹಸುವಿನ ಸಗಣಿಯ ಕುರಿತಾದ ಇಂತಹುದೇ ಒಂದು ಉಪಾಯ ಸೂಚಿಸಲಾಗುತ್ತಿದೆ

ಕೊರೊನಾದಿಂದ ರಕ್ಷಿಸಿಕೊಳ್ಳಲು ಜನರು ಮೈಗೆ ಸಗಣಿ ಲೆಪಿಸುತ್ತಿದ್ದಾರೆ (Cow Dung Therapy)
ಕೊರೊನಾದಿಂದ ರಕ್ಷಿಸಿಕೊಳ್ಳಲು ದೇಶದ ಹಲವು ಭಾಗಗಳಲ್ಲಿ ಜನರು ತಮ್ಮ ಶರೀರಕ್ಕೆ ಸಗಣಿಯನ್ನು ಲೇಪಿಸುತ್ತಿದ್ದಾರೆ ಎಂಬ ವರದಿಗಳು ಪ್ರಕಟಗೊಳ್ಳುತ್ತಿವೆ. ಇದರಿಂದ ಅವರ ಇಮ್ಯೂನಿಟಿ ಹೆಚ್ಚಾಗುತ್ತದೆ ಮತ್ತು ಅವರಿಗೆ ಕೊವಿಡ್-19 ಸೋಂಕು (Covid-19 Infection) ತಗಲುವುದಿಲ್ಲ ಎಂಬುದ ಅವರ ನಂಬಿಕೆಯಾಗಿದೆ. ಆದರೆ, ಹಸುವಿನ ಸಗಣಿಯ ಬಳಕೆ ಕುರಿತಂತೆ ವೈದ್ಯರು ಜನರನ್ನು ಎಚ್ಚರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ ಈ ಸಂಗತಿಯಲ್ಲಿ ಯಾವುದೇ ವೈಜ್ಞಾನಿಕ ತಥ್ಯಗಳಿಲ್ಲ ಹಾಗೂ ಸಗಣಿಯ ಬಳಕೆಯಿಂದ ಇತರೆ ಕಾಯಿಲೆಗಳು ಬರುವ ಅಪಾಯ ಕೂಡ ಇದೆ.

ಸಗಣಿ ಬಳಸಿದರೆ ಕೊರೊನಾ ವಿರುದ್ಧ ಇಮ್ಯೂನಿಟಿ ಹೆಚ್ಚಾಗುತ್ತದೆಯೇ?
ಗುಜರಾತ್ ನಲ್ಲಿ ಕೆಲ ಜನರು ವಾರದಲ್ಲಿ ಒಂದು ದಿನ ಗೋಶಾಲೆಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಶರೀರಕ್ಕೆ ಗೋಮೂತ್ರ (Cow Urine) ಹಾಗೂ ಸಗಣಿಯ ಲೇಪನವನ್ನು ತಮ್ಮ ಶರೀರಕ್ಕೆ ಹಚ್ಚಿಕೊಳ್ಳುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಅವರ ದೇಹದಲ್ಲಿ ರೋಗ ಪ್ರತಿಕಾರಕ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಇದರಿಂದ ವೈರಸ್ ಸೋಂಕು ತಗಲುವುದಿಲ್ಲ ಎಂಬುದು ಅವರ ನಂಬಿಕೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಹಸು, ಹಸುವಿನ ಸಗಣಿ ಹಾಗೂ ಗೋಮೂತ್ರವನ್ನು (Gomutra) ಅತ್ಯಂತ್ರ ಪವಿತ್ರ ಎಂದು ಹೇಳಲಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ನೂರಾರು ವರ್ಷಗಳಿಂದ ಗ್ರಾಮಗಳಲ್ಲಿ ಮನೆಗಳ ಗೋಡೆಗಳಿಗೆ ಸಗಣಿಯಿಂದ ತಯಾರಿಸಲಾಗಿರುವ ಲೇಪವನ್ನು ಸವರಲಾಗುತ್ತದೆ. ಅಷ್ಟೇ ಅಲ್ಲ ಪೂಜೆ, ಅರ್ಚನೆಯಲ್ಲಿಯೂ ಕೂಡ ಸಗಣಿ ಬಳಸಲಾಗುತ್ತದೆ. 

ಹಲವು ಜನರು ನಿಯಮಿತವಾಗಿ ಶರೀರಕ್ಕೆ ಸಗಣಿ ಲೆಪಿಸುತ್ತಿದ್ದಾರೆ
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಮತ್ತು ಔಷಧಿ ತಯಾರಕ ಕಂಪನಿಯೊಂದರಲ್ಲಿ ಅಸೋಸಿಯೇಟ್ ಮ್ಯಾನೇಜರ್ ಆಗಿರುವ ಗೌತಮ್ ಮಣಿಲಾಲ್, ಕಳೆದ ವರ್ಷ ನಾನು ಕೊವಿಡ್ ಸೋಂಕಿಗೆ ಗುರಿಯಾದ ಸಂದರ್ಭದಲ್ಲಿ ಸಾಗಣೆಯ ಲೇಪ ನನ್ನನ್ನು ಕೊರೊನಾದಿಂದ ರಕ್ಷಿಸಲು ಸಹಾಯ ಮಾಡಿತ್ತು. ಅಷ್ಟೇ ಯಾಕೆ ಹಲವು ವೈದ್ಯರೂ ಕೂಡ ಇಲ್ಲಿಗೆ ಭೇಟಿ ನೀಡುತ್ತಾರೆ ಮತ್ತು ಈ ರೀತಿ ಮಾಡುವುದರಿಂದ ಅವರ ಇಮ್ಯೂನಿಟಿ ಹೆಚ್ಚಾಗಿ, ಅವರು ಅಳುಕಿಲ್ಲದೆ ಕೊರೊನಾ ರೋಗಿಗಳ ಚಿಕಿತ್ಸೆ ಮಾಡಬಹುದು ಎಂಬುದನ್ನು ನಂಬುತ್ತಾರೆ" ಎಂದು ಗೌತಮ್ ಹೇಳುತ್ತಾರೆ. ಕಳೆದ ವರ್ಷ ಕೊವಿಡ್ ನಿಂದ ಚೇತರಿಸಿಕೊಂಡ ಬಳಿಕ ಗೌತಮ್ ನಿಯಮಿತವಾಗಿ ಶ್ರೀ ಸ್ವಾಮಿನಾರಾಯಣ್ ಗುರುಕುಲ್ ವಿಶ್ವವಿದ್ಯಾ ಪ್ರತಿಷ್ಠಾನಕ್ಕೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ-Ivermectin 12mg In Corona Treatment - 'Corona ಮಹಾಮಾರಿಯ ಅಂತ್ಯ ಹಾಡಲಿದೆ ಈ ಔಷಧಿ' ಎಂದ ವಿಜ್ಞಾನಿಗಳು, ಗೋವಾ ಸರ್ಕಾರದ ಅನುಮತಿ

ಬಳಿಕ ಹಾಲು ಅಥವಾ ಮಜ್ಜಿಗೆಯಿಂದ ಈ ಲೇಪ ತೊಳೆಯಲಾಗುತ್ತದೆ 
ಪ್ರತಿಷ್ಠಾನಕ್ಕೆ ಭೇಟಿ ನೀಡುವ ಜನರಿಗೆ ಹಸುವಿನ ಸಗಣಿ ಮತ್ತು ಗೋಮೂತ್ರ ಬೆರೆಸಿದ ಲೇಪವನ್ನು ತಯಾರಿಸಿ ಅವರ ಶರೀರಕ್ಕೆ ಲೇಪಿಸಲಾಗುತ್ತದೆ ಮತ್ತು ಅದು ಒಣಗುವವರೆಗೆ ಹಾಗೆಯೇ ಬಿಡಲಾಗುತ್ತದೆ. ಈ ಎಲ್ಲ ಜನರು ಗೋಶಾಲೆಗಳಲ್ಲಿ ಇರುವ ಹಸುಗಳನ್ನು ತಬ್ಬಿಕೊಳ್ಳುತ್ತಾರೆ ಹಾಗೂ ಯೋಗ ಮಾಡುತ್ತಾರೆ. ತಮ್ಮ ದೇಹದ ಊರ್ಜೆ ಹಾಗೆಯೇ ಉಳಿಯಬೇಕು ಎಂಬುದು ಅವರ ಉದ್ದೇಶ. ಸಗಣಿಯ ಲೇಪ ಒಂದೊಮ್ಮೆ ಒಣಗಿದ ಬಳಿಕ ಅದನ್ನು ಹಾಲು ಅಥವಾ ಮಜ್ಜಿಗೆಯ ಸಹಾಯದಿಂದ ತೊಳೆಯಲಾಗುತ್ತದೆ. ಈ ರೀತಿಯ ತಪ್ಪು ಉಪಾಯಗಳಿಂದ ಜನರ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಉಂಟಾಗುವ ಸಾಧ್ಯತೆಯನ್ನು ದೇಶಾದ್ಯಂತ ವೈದ್ಯರು ಹಾಗೂ ವಿಜ್ಞಾನಿಗಳು ವರ್ತಿಸುತ್ತಿದ್ದಾರೆ.

ಇದನ್ನೂ ಓದಿ- Right Way To Drink Water - ನೀವೂ ಕೂಡ ಬಾಟಲಿ ಮೂಲಕ ನೀರನ್ನು ಕುಡಿಯುತ್ತೀರಾ? ಹಾಗಾದ್ರೆ ಈ ಲೇಖನ ಓದಲು ಮರೆಯಬೇಡಿ

ಸಗಣಿ ಬಳಸದಿರಲು ವೈದ್ಯರ ಸಲಹೆ
ಈ ಕುರಿತು ಹೇಳುವ ಇಂಡಿಯಾ ಮೆಡಿಕಲ್ ಅಸ್ಸೋಸಿಯೇಶನ್ ನ ರಾಷ್ಟ್ರೀಯ ಅಧ್ಯಕ್ಷ ಡಾ. ಜೆ.ಎ. ಜಯಲಾಲ್, "ಕೊವಿಡ್-19 ವಿರುದ್ಧ ದೇಹದ ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಹಸುವಿನ ಸಗಣಿ ಹಾಗೂ ಗೋಮೂತ್ರ ಸಹಕರಿಸುತ್ತವೆ ಎಂಬುದಕ್ಕೆ ಯಾವುದೇ ವೈಜಾನಿಕ ಆಧಾರಗಳಿಲ್ಲ. ಜೊತೆಗೆ ಈ ರೀತಿಯ ಸಂಗತಿಗಳನ್ನು ಶರೀರಕ್ಕೆ ಲೇಪಿಸುವುದರಿಂದ ಇತರೆ ಸೋಂಕು ತಗಲುವ ಸಾಧ್ಯತೆ ಇದೆ. ಜಾನುವಾರುಗಳಿಂದ ಮನುಷ್ಯರಿಗೆ ಹರಡುವ ಹಲವು ಕಾಯಿಲೆಗಳಿಗೆ ಮನುಷ್ಯ ಗುರಿಯಾಗುವ ಸಾಧ್ಯತೆ ಇದೆ. ಇಂತಹ ಆಚರಣೆಯ ಸಂದರ್ಭದಲ್ಲಿ ಏಕಕಾಲಕ್ಕೆ ಹಲವು ಜನರು ಒಂದೆಡೆ ಗುಂಪುಗೂಡುವ ಕಾರಣ ಕೊರೊನಾ ಸೋಂಕು ಮತ್ತಷ್ಟು ವೇಗವಾಗಿ ಹರಡುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ- Covid-19 ನಿಂದ ರಕ್ಷಣೆ ಪಡೆಯಲು ಡಬಲ್ ಮಾಸ್ಕ್ ಅನಿವಾರ್ಯವೇ? ಇಲ್ಲಿದೆ ಇದರ ಹಿಂದ ವಾಸ್ತವಿಕತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News