ಮುಂದಿನ ಮೂರು ದಿನಗಳು 5 ರಾಶಿಯವರಿಗೆ ವರದಾನವಿದ್ದಂತೆ.! ಪ್ರತಿ ಕೆಲಸದಲ್ಲೂ ಯಶಸ್ಸು ನೀಡುತ್ತಾನೆ ಅಂಗಾರಕ

ಮುಂಬರುವ ಮೂರು ದಿನಗಳವರೆಗೆ ಕೆಲವು ರಾಶಿಯವರ ಮೇಲೆ ಮಂಗಳನ ವಿಶೇಷ ಆಶೀರ್ವಾದ ಇರಲಿದೆ. ಈ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. 

Written by - Ranjitha R K | Last Updated : Nov 10, 2022, 12:48 PM IST
  • ಮಂಗಳ ಗ್ರಹನನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ.
  • ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸಿರುವ ಮಂಗಳ
  • ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ
 ಮುಂದಿನ ಮೂರು ದಿನಗಳು  5 ರಾಶಿಯವರಿಗೆ ವರದಾನವಿದ್ದಂತೆ.! ಪ್ರತಿ ಕೆಲಸದಲ್ಲೂ ಯಶಸ್ಸು ನೀಡುತ್ತಾನೆ ಅಂಗಾರಕ  title=
mars transit effect (file photo)

ಬೆಂಗಳೂರು : ಮಂಗಳ ಗ್ರಹನನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಹಾಗಾಗಿ ವ್ಯಕ್ತಿಯ ಜಾತಕದಲ್ಲಿ ಮಂಗಳನ ಸ್ಥಾನ ಬಹಳ ಮುಖ್ಯವಾಗಿರುತ್ತದೆ.  ಅಕ್ಟೋಬರ್ 16 2022 ರಂದು ಮಧ್ಯಾಹ್ನ 12:04 ಕ್ಕೆ ಮಂಗಳ ಗ್ರಹವು ವೃಷಭ ರಾಶಿಯಿಂದ ಮಿಥುನ ರಾಶಿಗೆ ತನ್ನ ಸ್ಥಾನವನ್ನು ಬದಲಾಯಿಸಿತ್ತು. ಇನ್ನೂ ಮೂರು ದಿನಗಳ ಕಾಲ ಅಂದರೆ ನವೆಂಬರ್ 13ರವರೆಗೆ  ಮಂಗಳ ಮಿಥುನ ರಾಶಿಯಲ್ಲಿಯೇ ಇರಲಿದ್ದಾನೆ.  ಹೀಗಾಗಿ ಈ ಮೂರೂ ದಿನಗಳು ಕೆಳಗಿನ ಐದು ರಾಶಿಯವರಿಗೆ ಭಾರೀ ಅದೃಷ್ಟ ತರಲಿದೆ. ಒಂದರ್ಥದಲ್ಲಿ ಈ ಮೂರೂ ದಿನ  ಐದು ರಾಶಿಯವರ ಪಾಲಿಗೆ ವರದಾನವಿದ್ದಂತೆ. 

ಮೇಷ ರಾಶಿ- ಮೇಷ ರಾಶಿಯ ಮೂರನೇ ಮನೆಯಲ್ಲಿ ಮಂಗಳವು ಸಾಗಿತ್ತು.  ಹೀಗಿರುವಾಗ  ಉದ್ಯೋಗಿಗಳಿಗೆ ಬಡ್ತಿಯ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವೆನದು ಸಾಬೀತಾಗಲಿದೆ. ಸಹೋದರ ಸಹೋದರಿಯರ ಬೆಂಬಲ ಸಿಗಲಿದೆ.

ಇದನ್ನೂ ಓದಿ : Chanakya Niti : ಪತಿಯಿಂದ ಈ 5 ವಿಷಯಗಳನ್ನು ಯಾವಾಗಲು ಮುಚ್ಚಿಡುತ್ತಾಳೆ ಪತ್ನಿ!

ಸಿಂಹ ರಾಶಿ- ಮಂಗಳವು ಸಿಂಹ ರಾಶಿಯ ಹನ್ನೊಂದನೇ ಮನೆಗೆ ಪ್ರವೇಶಿಸಿತ್ತು.ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸದೃಢವಾಗಿರಲಿದೆ.  ಹೂಡಿಕೆಯಿಂದ ಲಾಭವಾಗಲಿದೆ. ಆಸ್ತಿಯಲ್ಲಿ ಹೂಡಿಕೆಗೆ ಅವಕಾಶವಿರುತ್ತದೆ. ವಾಹನ ಖರೀದಿ ಯೋಗ ಇರಲಿದೆ. 

ಕನ್ಯಾರಾಶಿ - ಕನ್ಯಾರಾಶಿಯ ಹತ್ತನೇ ಮನೆಯಲ್ಲಿ ಮಂಗಳ  ಗ್ರಹ ಸಾಗಿತ್ತು. ಮುಂಬರುವ ಮೂರು ದಿನಗಳಲ್ಲಿ ನಿಮ್ಮ ಆರ್ಥಿಕ  ಸ್ಥಿತಿ ಉತ್ತಮವಾಗಿರಲಿದೆ.  ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಪ್ರತಿಷ್ಠೆ ಹೆಚ್ಚಾಗಲಿದೆ.

ಇದನ್ನೂ ಓದಿ : Gemstone : ರಾಹುವಿನ ಕೆಟ್ಟ ಪರಿಣಾಮಗಳಿಗೆ ಪರಿಹಾರ ನೀಡುತ್ತೆ ಈ ರತ್ನ..!

ಮಕರ ರಾಶಿ - ಮಂಗಳ ಗ್ರಹ ಮಕರ ರಾಶಿಯ ಆರನೇ ಮನೆಯನ್ನು ಪ್ರವೇಶಿಸಿದೆ. ಮುಂದಿನ ಮೂರು ದಿನಗಳಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಉತ್ತಮ ಸಮಯ.

ಮೀನ ರಾಶಿ - ಮಂಗಳನು ಮೀನ ರಾಶಿಯ ನಾಲ್ಕನೇ ಮನೆಗೆ ಕಾಲಿಟ್ಟಿದೆ. ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭವಾಗಬಹುದು. ಉದ್ಯೋಗಸ್ಥರಿಗೆ  ಬಡ್ತಿ ದೊರೆಯಲಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಕೂಡಾ  ಯಶಸ್ವಿಯಾಗಲಿದ್ದಾರೆ.   

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News