Chandra Grahan 2021: ಚಂದ್ರಗ್ರಹಣದ ಪರಿಣಾಮ 15 ದಿನ ಇರುತ್ತದೆ, ಈ 6 ರಾಶಿಯವರು ಜಾಗರೂಕರಾಗಿರಿ

ಚಂದ್ರ ಗ್ರಹಣ 2021: ಚಂದ್ರಗ್ರಹಣವು ಕೆಲವು ಗಂಟೆಗಳು ಅಥವಾ ನಿಮಿಷಗಳವರೆಗೆ ಇರುತ್ತದೆ. ಆದರೆ ಇದರ ಪರಿಣಾಮವು ಹಲವಾರು ದಿನಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಕೆಲವು ರಾಶಿಯ ಜನರು ಜಾಗರೂಕರಾಗಿರಬೇಕು.

Written by - Puttaraj K Alur | Last Updated : Nov 20, 2021, 07:58 AM IST
  • ಚಂದ್ರಗ್ರಹಣ ಮುಗಿದ ನಂತರವೂ ಇದರ ಪರಿಣಾಮ ಇರುತ್ತದೆ
  • ಗ್ರಹಣ ಮುಗಿದರೂ 15 ದಿನ ನಕಾರಾತ್ಮಕ ಪರಿಣಾಮ ಇರುತ್ತದೆ
  • 6 ರಾಶಿಯ ಜನರ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು
Chandra Grahan 2021: ಚಂದ್ರಗ್ರಹಣದ ಪರಿಣಾಮ 15 ದಿನ ಇರುತ್ತದೆ, ಈ 6 ರಾಶಿಯವರು ಜಾಗರೂಕರಾಗಿರಿ title=
ಚಂದ್ರಗ್ರಹಣದ ಪರಿಣಾಮ

ನವದೆಹಲಿ: 2021ರ ಕೊನೆಯ ಚಂದ್ರಗ್ರಹಣ (Chandra Grahan 2021) ಶುಕ್ರವಾರ(ನ.19) ಕೊನೆಗೊಂಡಿದೆ. ಇದು ಎಲ್ಲಾ ರಾಶಿಯ ಜನರ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರಿದೆ. ಇದರ ದುಷ್ಪರಿಣಾಮ ತಪ್ಪಿಸಲು ಅನೇಕ ಜನರು ಮುನ್ನೆಚ್ಚರಿಕೆ ಸಹ ತೆಗೆದುಕೊಂಡಿದ್ದರು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಮುಗಿದ ನಂತರವೂ 15 ದಿನಗಳ ಕಾಲ ಅದರ ಋಣಾತ್ಮಕ ಪರಿಣಾಮ ಇರುತ್ತದೆ. ಇದರಿಂದ ಜನಜೀವನದ ಮೇಲೆ ಪರಿಣಾಮವುಂಟಾಗಲಿದೆ. ನವೆಂಬರ್ 19 ರಂದು ಸಂಭವಿಸಿದ ಈ ಗ್ರಹಣವು ಮುಂದಿನ 15 ದಿನಗಳ ಕಾಲ 6 ರಾಶಿಚಕ್ರ ಚಿಹ್ನೆಗಳ ಮೇಲೆ ತನ್ನ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರು ಜಾಗರೂಕರಾಗಿರಬೇಕು.

ಈ ರಾಶಿಯವರು ಸ್ವಲ್ಪ ಜಾಗರೂಕರಾಗಿರಿ

ಮೇಷ ರಾಶಿ: ಚಂದ್ರಗ್ರಹಣದ ನಂತರವೂ ಮೇಷ ರಾಶಿಯವರಿಗೆ ಜೀವನದಲ್ಲಿ ಹಣದ ಸಮಸ್ಯೆ ಕಾಡಬಹುದು. ಸಂಬಂಧಗಳ ವಿಷಯದಲ್ಲೂ ಜಾಗರೂಕರಾಗಿರಬೇಕು. ನಿಮಗೆ ಉದ್ವಿಗ್ನತೆ ಉಂಟಾಗಬಹುದು. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದೆ ಹೆಚ್ಚು ನೀರು ಕುಡಿಯಿರಿ ಮತ್ತು ಧ್ಯಾನ ಮಾಡಿರಿ.

ಇದನ್ನೂ ಓದಿ: New year 2022: ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗಿದೆ ವಿವಾಹ ಯೋಗ

ವೃಷಭ ರಾಶಿ: ವೃಷಭ ರಾಶಿಯಲ್ಲಿ ಮಾತ್ರ ಚಂದ್ರಗ್ರಹಣ ಇತ್ತು. ಆದ್ದರಿಂದ ಈ ರಾಶಿಯ ಜನರು ಬಹಳ ಜಾಗರೂಕರಾಗಿರಬೇಕು. ಮುಂದಿನ 15 ದಿನಗಳವರೆಗೆ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಯಾರ ಮೇಲೂ ಅತಿಯಾದ ವ್ಯಾಮೋಹ ಬೇಡ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ತಮ್ಮ ಶ್ರಮದ ಪೂರ್ಣ ಫಲ ಸಿಗುವುದಿಲ್ಲ. ಮಾಡುವ ಕೆಲಸದಲ್ಲಿಯೂ ಸಮಸ್ಯೆ ಕಂಡುಬರುತ್ತದೆ. ನಿಮಗೆ ಅತಿಯಾದ ಒತ್ತಡಮಯ ಪರಿಸ್ಥಿತಿಯೂ ಇರುತ್ತದೆ. ಬಜೆಟ್ ನೋಡಿಕೊಂಡು ಖರ್ಚು ಮಾಡಿ.

ತುಲಾ ರಾಶಿ: ತುಲಾ ರಾಶಿಯ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಪಘಾತಗಳು ಸಂಭವಿಸಬಹುದು, ಆದ್ದರಿಂದ ಎಚ್ಚರಿಕೆಯಿಂದಿರಿ. ಅನಗತ್ಯ ಹತಾಶೆಯ ಭಾವ ಇರುತ್ತದೆ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಅಥವಾ ಅನುಮಾನಗಳನ್ನು ತಪ್ಪಿಸಬೇಕು.

ವೃಶ್ಚಿಕ ರಾಶಿ: ಈ ರಾಶಿಯ ಜನರಿಗೆ ಧನ ನಷ್ಟ ಉಂಟಾಗಬಹುದು. ಕೆಲವು ಆಸ್ತಿ ಸಂಬಂಧಿತ ಸಮಸ್ಯೆ ಇರಬಹುದು. ಪಾಲುದಾರಿಕೆಯಲ್ಲಿ ಜಾಗರೂಕರಾಗಿರಿ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳಿರಬಹುದು. ಮೌಲ್ಯ ಕಳೆದು ಹೋಗಬಹುದು. ಹೂಡಿಕೆ ಮಾಡುವುದನ್ನು ತಪ್ಪಿಸಿ.

ಇದನ್ನೂ ಓದಿ: ಕಾರ್ತಿಕ ಹುಣ್ಣಿಮೆಯ ದಿನ ಏರ್ಪಡಲಿದೆ ಶುಭ ಸಂಯೋಗ, ಈ ಮುಹೂರ್ತದಲ್ಲಿ ಪೂಜೆ ಮಾಡಿದರೆ ಆಗಲಿದೆ ಧನಲಾಭ

ಕುಂಭ ರಾಶಿ: ನಿಮಗೆ ಉದ್ವೇಗ ಹೆಚ್ಚಾಗಲಿದೆ. ಕಾರ್ಯನಿರತತೆ ಹೆಚ್ಚಲಿದೆ. ಸ್ಥಳ ಬದಲಾಗಬಹುದು. ಆರೋಗ್ಯದ ಬಗ್ಗೆ ಗಮನ ಕೊಡುವುದು ಒಳಿತು. ಅನಗತ್ಯ ಕೆಲಸಗಳು ನಿಲ್ಲಬಹುದು.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News