Chanakya Niti: ವ್ಯಕ್ತಿ ಎಷ್ಟೇ ಬುದ್ಧಿಶಾಲಿಯಾಗಿರಲಿ ಅಥವಾ ವಿವೇಕಶಾಲಿಯಾಗಿರಲಿ, ಜೀವನದಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಬುದ್ಧಿಗೆ ಬೀಗ ಬೀಳುವ ಹಲವಾರು ಪ್ರಸಂಗಗಳು ಎದುರಾಗುತ್ತದೆ ಮತ್ತು ಆ ವ್ಯಕ್ತಿಯ ಯೋಚಿಸುವ ಶಕ್ತಿ ಶೂನ್ಯವಾಗಿಬಿಡುತ್ತದೆ. ಈ ಪರಿಸ್ಥಿತಿ ವ್ಯಕ್ತಿ ಬಯಸದೆ ಇದ್ದರೂ ಕೂಡ ಅವನನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ ಮತ್ತು ಸಮಸ್ಯೆಗಳಿಗೆ ಸಮಾಧಾನ ಸಿಗುವ ಬದಲು ಸಂಕಷ್ತಾಗಳು ಮತ್ತಷ್ಟು ಹೆಚ್ಚಾಗುತ್ತವೆ. ಯಾವುದೇ ಓರ್ವ ವ್ಯಕ್ತಿಯ ಬುದ್ಧಿ ಯಾವಾಗ ಭೃಷ್ಟವಾಗುತ್ತದೆ ಎಂಬುದನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ ಇಂತಹ ಸಂದರ್ಭಗಳು ಎದುರಾದಾಗ ವ್ಯಕ್ತಿ ಏನನ್ನು ಮಾಡಬೇಕು ಮತ್ತು ಸಂಕಷ್ಟದಿಂದ ಹೇಗೆ ಪಾರಾಗಬೇಕು ಎಂಬುದರ ಕುರಿತೂ ಕೂಡ ಹೇಳಿದ್ದಾರೆ. ಬನ್ನಿ ತಿಳಿದುಕೊಳ್ಳೋಣ.
ನ ನಿರ್ಮಿತಾ ಕೆನ ನ ದೃಷ್ಟಪೂರ್ವಾ ನ ಶ್ರುಯತೆ ಹೆಮಮಯಿ ಕುರುಡ್ಗ್ಯಿ.
ತಥಾಪಿ ತೃಷ್ಣಾ ರಘುನಂದನಸ್ಯ ವಿನಾಶಕಾಲೇ ವಿಪರೀತಬುದ್ಧಿ
>> ಜೀವನವು ಎಲ್ಲಾ ಕಡೆಯಿಂದ ಬಿಕ್ಕಟ್ಟಿನಿಂದ ಸುತ್ತುವರೆದಿರುವಾಗ, ಮನುಷ್ಯನ ಬುದ್ಧಿವಂತಿಕೆ ಮತ್ತು ಆತ್ಮಸಾಕ್ಷಿಯು ವಿನಾಶದ ಸಮಯದಲ್ಲಿ ಆತನನ್ನು ಬಿಟ್ಟುಹೋಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಪ್ರತಿಕೂಲ ಸಂದರ್ಭಗಳಲ್ಲಿ, ಬಹಳ ಬುದ್ಧಿವಂತ ವ್ಯಕ್ತಿ ಕೂಡ ಕೆಲವೊಮ್ಮೆ ಸರಿ ಮತ್ತು ತಪ್ಪು ಆಲೋಚನೆಗಳ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಅವನ ತಿಳುವಳಿಕೆಗೆ ಮೋಡ ಕವಿಯುತ್ತದೆ ಮತ್ತು ಅವನು ಸಾಕಷ್ಟು ಹಾನಿ ಮಾಡಿಕೊಳ್ಳುತ್ತಾನೆ.
>> ಶ್ಲೋಕದಲ್ಲಿ, ಚಾಣಕ್ಯ ಶ್ರೀರಾಮನ ಉದಾಹರಣೆಯನ್ನು ನೀಡುವ ಮೂಲಕ ಚಿನ್ನದ ಜಿಂಕೆ ಅಸ್ತಿತ್ವದಲ್ಲಿಲ್ಲ, ಯಾರೂ ನೋಡಿಲ್ಲ, ಆದರೆ ವನವಾಸದ ಸಮಯದಲ್ಲಿ ಸೀತೆಗಾಗಿ, ಶ್ರೀರಾಮನು ಜಿಂಕೆಯನ್ನು ಹಿಡಿಯಲು ಹಿಂದೆ ಹೋಗುತ್ತಾನೆ ಮತ್ತು ಅಲ್ಲಿ ರಾವಣನು ತಾಯಿ ಸೀತೆಯನ್ನು ಅಪಹರಿಸುತ್ತಾನೆ ಎಂದು ಹೇಳುತ್ತಾರೆ.
ಇದನ್ನೂ ಓದಿ-Chanakya Niti : ಸಂತೋಷದ ಕುಟುಂಬಕ್ಕಾಗಿ ಚಾಣಕ್ಯನ ಈ 4 ನೀತಿಗಳನ್ನು ಅನುಸರಿಸಿ!
>> ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ನಾಣ್ನುಡಿಯಂತೆ, ಕೆಟ್ಟ ಸಮಯ ಬಂದಾಗ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದೊಂದು ಸಾಮಾನ್ಯ ವಿಷಯವಾದರೂ ಕೂಡ ಬಿಕ್ಕಟ್ಟಿನ ಸಮಯದಲ್ಲಿ ಮನಸ್ಸನ್ನು ನಿಯಂತ್ರಿಸಿದರೆ, ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಚಾಣಕ್ಯ ಹೇಳುತ್ತಾರೆ. ಅಹಂಕಾರ, ದುರಾಸೆ ಮತ್ತು ಕ್ರೋಧ ಕೂಡ ವ್ಯಕ್ತಿಯ ಬುದ್ಧಿಮತ್ತೆಯನ್ನು ಕೆಡಿಸುತ್ತದೆ. ಇಂತಹ ಸಮಯದಲ್ಲಿ ತಾಳ್ಮೆಯಿಂದಿರಿ ಮತ್ತು ಸರಿಯಾದ ಸಮಯಕ್ಕಾಗಿ ಕಾಯಿರಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುವಿರಿ ಎಂದು ಆಚಾರ್ಯರು ಹೇಳುತ್ತಾರೆ.
ಇದನ್ನೂ ಓದಿ-Chanakya Niti : ತಪ್ಪಾಗಿಯೂ ತುಳಿಯಬೇಡಿ ಈ 5 ವಸ್ತುಗಳನ್ನು, ತಲೆಮಾರುಗಳವರೆಗೆ ತಪ್ಪಿತಸ್ಥರಾಗುತ್ತೀರಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.