Chanakya Niti In Kannada: ನೂರಾರು ವರ್ಷಗಳ ಹಿಂದೆ ರಚನೆಗೊಂಡಿರುವ ಆಚಾರ್ಯ ಚಾಣಕ್ಯರ ನೀತಿಗಳು ಇಂದಿಗೂ ಕೂಡ ಬಹಳ ಜನಪ್ರಿಯವಾಗಿವೆ. ಪ್ರಸಿದ್ದ ರಾಜತಾಂತ್ರಿಕ ಮತ್ತು ರಾಜನೀತಿಜ್ಞರಾಗಿದ್ದ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಚಾಣಕ್ಯ ನೀತಿಯಲ್ಲಿ ಮಹಿಳೆಯರ ಗುಣಗಳ ಬಗ್ಗೆಯೂ ವರ್ಣಿಸಲಾಗಿದ್ದು, ಇಂತಹ ಗುಣಗಳನ್ನು ಹೊಂದಿರುವರ ಹೆಣ್ಣು ಮಕ್ಕಳು ಗಂಡನ ಜೀವನದಲ್ಲಿ ಅದೃಷ್ಟದ ದೇವತೆ ಆಗಿರುತ್ತಾರೆ ಎಂದು ಹೇಳಲಾಗುತ್ತದೆ. ಆಚಾರ್ಯ ಚಾಣಕ್ಯರು, ತಮ್ಮ ಪತಿಗೆ ಯಾವ ರೀತಿಯ ಮಹಿಳೆಯರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ ಎಂಬುದನ್ನು ಕೂಡ ಬಹಳ ಸೊಗಸಾಗಿ ಉಲ್ಲೇಖಿಸಿದ್ದಾರೆ.
ಹೆಣ್ಣನ್ನು ಮನೆಯ ಕಣ್ಣು ಎಂದು ಬಣ್ಣಿಸಲಾಗುತ್ತದೆ. ಯಾವುದೇ ಒಂದು ಕುಟುಂಬದಲ್ಲಿ ಹೆಣ್ಣಿನ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ. ಒಂದು ಮನೆ ಉದ್ಧಾರವಾಗಲು ಹೆಣ್ಣಿನ ಪಾತ್ರ ಎಷ್ಟು ಪ್ರಮುಖವಾಗಿರುತ್ತದೆಯೋ, ಮನೆಯ ಅವನತಿಗೂ ಕೂಡ ಹೆಣ್ಣೇ ಕಾರಣಳಾಗಿರುತ್ತಾಳೆ.
ಇದ್ನನೂ ಓದಿ- Success Tips: ಈ ಅದ್ಭುತ ರತ್ನವು ಧರಿಸಿದ್ರೆ ಉತ್ತಮ ಯಶಸ್ಸು ದೊರೆಯುತ್ತದೆ!
ಆಚಾರ್ಯ ಚಾಣಕ್ಯರ ಪ್ರಕಾರ, ಒಂದು ಹೆಣ್ಣು ಮನಸ್ಸು ಮಾಡಿದರೆ ಆಕೆ ಬಿಕ್ಷುಕನನ್ನು ಲಕ್ಷಾಧಿಪತಿಯಾಗಿಯೂ ಮಾಡಬಹುದು. ಅಂತೆಯೇ, ಹೆಣ್ಣು ಒಳ್ಳೆಯ ಸ್ವಭಾವವನ್ನು ಹೊಂದಿಲ್ಲದಿದ್ದರೆ ಎಂತಹ ಕೋಟ್ಯಾಧೀಶ್ವರನನ್ನೂ ಕೂಡ ಬೀದಿಗೆ ತರಬಹುದು. ಚಾಣಕ್ಯರ ಪ್ರಕಾರ, ಹೆಣ್ಣಿನಲ್ಲಿರುವ ಕೆಲವು ಗುಣಗಳು ಆಕೆಯ ಪತಿಗೆ ಅದೃಷ್ಟವನ್ನು ತರುತ್ತದೆ. ಈ ರೀತಿಯ ಹೆಣ್ಣು ಮಕ್ಕಳು ಪತಿಯ ಬಾಳಿಗೆ ಅದೃಷ್ಟದ ದೇವತೆಯಾಗಿರುತ್ತಾರೆ ಎಂದು ಹೇಳಲಾಗುತ್ತದೆ.
ಈ ರೀತಿಯ ಹೆಣ್ಣು ಮಕ್ಕಳು ಪತಿಯ ಬಾಳಿಗೆ ಅದೃಷ್ಟದ ದೇವತೆಯಾಗಿರುತ್ತಾರೆ!
ಶಾಂತ ಸ್ವಭಾವದ ಹುಡುಗಿಯರು:
ತ ಸ್ವಭಾವದ ಹುಡುಗಿಯರು ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಹೆಣ್ಣಿನ ಶಾಂತ ಸ್ವಭಾವದಿಂದಾಗಿ ಮನೆಯಲ್ಲಿ ಜಗಳ, ಕದನಗಳು ಕ್ಷೀಣಿಸುತ್ತವೆ. ಇದು ಸುಖ ಸಂಸಾರಕ್ಕೆ ಮೊದಲ ಹಂತವಾಗಿದೆ.
ತಾಳ್ಮೆ:
ಕುಟುಂಬದಲ್ಲಿ ತಾಳ್ಮೆ ಬಹಳ ಮುಖ್ಯ. ಯಾವುದೇ ಕಠಿಣ ಸಮಯವನ್ನೂ ಕೂಡ ತಾಳ್ಮೆಯಿಂದ ನಿಭಾಯಿಸುವ ಗುಣ ಹೆಣ್ಣಿನಲ್ಲಿದ್ದರೆ ಆಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ತನ್ನ ಪತಿಗೂ ಪ್ರೇರೇಪಿಸುತ್ತಾಳೆ. ಅಷ್ಟೇ ಅಲ್ಲ, ಯಾವ ಹೆಣ್ಣು ಮಗುವಿನಲ್ಲಿ ತಾಳ್ಮೆ ಇರುತ್ತದೆಯೋ ಆಕೆ, ಎಂತಹದ್ದೇ ಸಂದರ್ಭದಲ್ಲಿಯೂ ಕೂಡ ತನ್ನ ಪತಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಇಂತಹವರನ್ನು ಆದರ್ಶ ಪತ್ನಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Lucky Women Body Signs: ಮಹಿಳೆಯರು ತಮ್ಮ ಮನೆ ಕುಟುಂಬಸ್ಥರ ಪಾಲಿಗೆ ಅದೃಷ್ಟವಂತ ಸಾಬೀತಾಗುತ್ತಾರೆ
ಧಾರ್ಮಿಕ ಹುಡುಗಿಯರು:
ಧಾರ್ಮಿಕ ಆಚಾರ-ವಿಚಾರಗಳ ಬಗ್ಗೆ ತಿಳಿದಿರುವ ಹೆಣ್ಣು ಮಕ್ಕಳಿಗೆ ಗಂಡನ ಮನೆಯನ್ನು ಸ್ವರ್ಗವನ್ನಾಗಿಸುವ ಬುದ್ಧಿವಂತಿಕೆಯೂ ಇರುತ್ತದೆ. ಅಂತಹ ಹುಡುಗಿಯರು ಸರಿ ಮತ್ತು ತಪ್ಪುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ, ಇದರಿಂದಾಗಿ ಅವರು ಮನೆಯ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿಯೂ ಕೂಡ ಸದಾ ಮುಂದಿರುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ದೃಢವಾಗಿ ನಿಲ್ಲುವುದರ ಜೊತೆಗೆ ಮನೆಯವರಲ್ಲಿಯೂ ಸಕಾರಾತ್ಮಕತೆಯನ್ನು ತುಂಬುತ್ತಾರೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.