Chanakya Niti: ಈ ಗುಣಗಳಿದ್ದರೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಕೂಡಾ ಗೆಲ್ಲುವುದು ಸಾಧ್ಯ

Chanakya niti :ಕೆಟ್ಟ ಸಮಯ ಬಂದಾಗ, ಅದು ಅನೇಕ ತೊಂದರೆಗಳನ್ನು ತರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಕೆಲವು ವಿಶೇಷ ಗುಣಗಳಿದ್ದರೆ ಯಾವುದೇ ತೊಂದರೆಯನ್ನು ಸುಲಭವಾಗಿ ನಿವಾರಿಸುವುದು ಸಾಧ್ಯವಾಗುತ್ತದೆ.     

Written by - Ranjitha R K | Last Updated : Apr 18, 2022, 09:40 AM IST
  • ಜೀವನ ಪಾಠ ಬೋಧಿಸುತ್ತದೆ ಚಾಣಾಕ್ಯ ನೀತಿ
  • ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಏನು ಮಾಡಬೇಕು ?
  • ಕೆಲವೊಂದು ಗುಣಗಳನ್ನು ಅಳವಡಿಸಿಕೊಂಡರೆ ಗೆಲುವು ಸಾಧ್ಯ
Chanakya Niti: ಈ ಗುಣಗಳಿದ್ದರೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಕೂಡಾ ಗೆಲ್ಲುವುದು ಸಾಧ್ಯ  title=
Chanakya niti for life (file photo)

Chanakya niti : ಜೀವನದಲ್ಲಿ ಯಾರು ನಮ್ಮ ನಿಜವಾದ ಸ್ನೇಹಿತರು ಎನ್ನುವುದನ್ನು  ಕೆಟ್ಟ ಸಮಯದಲ್ಲಿ ಮಾತ್ರ ಕಂಡು ಕೊಳ್ಳಬಹುದು ಎನ್ನಲಾಗುತ್ತದೆ. ಅದೇ ರೀತಿಯಲ್ಲಿ, ವ್ಯಕ್ತಿಯ ನೈಜ ಸಾಮರ್ಥ್ಯ, ಸಮಸ್ಯೆಗಳನ್ನು ಎದುರಿಸುವ ಉತ್ಸಾಹ, ಶಕ್ತಿ ಕೂಡಾ ಕೆಟ್ಟ ಸಮಯದಲ್ಲಿಯೇ ಮುನ್ನೆಲೆಗೆ ಬರುತ್ತದೆ.  ಒಬ್ಬ ವ್ಯಕ್ತಿಯು ನಿಜವಾಗಿಯೂ ಎಷ್ಟು ಸಮರ್ಥನೆಂದು ಈ ಸಮಯ ತೋರಿಸುತ್ತದೆ. ಮಹಾನ್ ವಿದ್ವಾಂಸರಾದ ಆಚಾರ್ಯ ಚಾಣಕ್ಯರು ಜೀವನದಲ್ಲಿ ಅಳವಡಿಸಬಹುದಾದ ಅನೇಕ ವಿಷಯಗಳನ್ನು ತಮ್ಮ ಚಾಣಾಕ್ಯ ನೀತಿಯಲ್ಲಿ ಹೇಳಿದ್ದಾರೆ. ಕೆಟ್ಟ ಸಮಯವನ್ನು ನಿಭಾಯಿಸಲು ಸಹಾಯ ಮಾಡುವ ಅನೇಕ ವಿಷಯಗಳ ಬಗ್ಗೆ ಕೂಡಾ ಚಾಣಾಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. 

ಪ್ರತಿ ಕಷ್ಟವೂ ಸುಲಭವಾಗುತ್ತದೆ : 
ಜೀವನದಲ್ಲಿ ಅದೆಷ್ಟೇ ದೊಡ್ಡ ಸಮಸ್ಯೆ ಎದುರಾದರೂ ಭಯಪಡಬೇಡಿ ಎನ್ನುತ್ತದೆ ಚಾಣಕ್ಯ ನೀತಿ. ಭಯವು ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಎಂಥ ಸಂದರ್ಭವೇ ಎದುರಾದರೂ  ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿ. ಇದು ಗೆಲ್ಲುವ ಉತ್ಸಾಹವನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ : ಸಾಡೇ ಸಾತಿ ಶನಿ ಪ್ರಭಾವದಿಂದ ಮುಕ್ತಿ ಪಡೆಯಲು ಸರಳ ಸಲಹೆಗಳು

ತಣ್ಣನೆಯ ಮನಸ್ಸಿನಿಂದ ಯೋಚಿಸುವುದು ಕೆಲವೊಮ್ಮೆ ಕೆಟ್ಟ ಸಮಯವನ್ನು ನಾವು ಸುಲಭವಾಗಿ ಜಯಿಸುವ ಮಾರ್ಗವನ್ನು ತೋರಿಸುತ್ತದೆ. ಆದರೆ ಆತಂಕ, ಭಯದಿಂದಲೇ ಪರಿಸ್ಥಿತಿಯನ್ನು ಎದುರಿಸಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಹಾಗಾದಾಗ ಸಮಸ್ಯೆಗೆ ಯಾವುದೇ ಪರಿಹಾರ ಸಿಗುವುದಿಲ್ಲ. 

ಕಠಿಣ ಪರಿಸ್ಥಿತಿಯನ್ನು ಜಯಿಸಲು, ವರ್ತಮಾನದಲ್ಲಿ ಬದುಕುವುದು ಅವಶ್ಯಕ. ಕೆಲವೊಮ್ಮೆ ಹಿಂದಿನ ಕೆಟ್ಟ ಅನುಭವಗಳು ಮತ್ತು ಭವಿಷ್ಯದ ಬಗ್ಗೆ ಚಿಂತೆಗಳು ಪ್ರಸ್ತುತ ಸಮಸ್ಯೆಯನ್ನು ನಿಭಾಯಿಸಲು ಅನುಮತಿಸುವುದಿಲ್ಲ. ವರ್ತಮಾನವನ್ನು ಸರಿಯಾಗಿ ವಿಶ್ಲೇಷಿಸಿ ಅದಕ್ಕೆ ತಕ್ಕಂತೆ ತಂತ್ರ ರೂಪಿಸಿ ಸಮಸ್ಯೆಯನ್ನು ನಿಭಾಯಿಸುವುದು ಉತ್ತಮ. 

ಕೆಟ್ಟ ಸಮಯವನ್ನು ನಿಭಾಯಿಸಲು ಹಣವು ತುಂಬಾ ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಕೆಟ್ಟ ಸಮಯಕ್ಕೆ ಬಳಸಲು ಸಹಾಯವಾಗುವಂತೆ ಹಣವನ್ನು ಉಳಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.  

ಇದನ್ನೂ ಓದಿ : Weekly Horoscope: ಈ ರಾಶಿಗಳ ಜನರಿಗೆ ಸಿಗಲಿದೆ ಗುಡ್ ನ್ಯೂಸ್, ಮುಂದಿನ ಒಂದು ವಾರ ನಿಮ್ಮ ಪಾಲಿಗೆ ಹೇಗಿರಲಿದೆ?

ಜೀವನದಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯ. ಆತ್ಮವಿಶ್ವಾಸವನ್ನು ಹೊಂದಿದ್ದರೆ,  ಕಠಿಣ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಆದರೆ ಆತ್ಮವಿಶ್ವಾಸದ ಕೊರತೆಯು ಸಮಸ್ಯೆಯನ್ನು ಹಲವು ಪಟ್ಟು ಹೆಚ್ಚಿಸುತ್ತದೆ. 

 

(ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News