Healthy Morning Tips: ಮುಂಜಾನೆ ಈ ಐದು ಕೆಲಸಗಳನ್ನು ಮಾಡಿದರೆ ದಿನವಿಡೀ ಉಲ್ಲಾಸದಾಯಕವಾಗಿರುತ್ತದೆ

ಈ ಕೆಳಗಿನ ಅಭ್ಯಾಸಗಳನ್ನು ಬೆಳಗಿನ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು ಇದರಿಂದ ದೇಹದ ಶಕ್ತಿಯು ದಿನವಿಡೀ ಹಾಗೇ ಇರುತ್ತದೆ ಮತ್ತು ಆಯಾಸವಾಗುವುದಿಲ್ಲ. ಹೀಗೆ ಮಾಡುವುದರಿಂದ ಸೋಮಾರಿತನ ದೂರವಾಗುವುದಲ್ಲದೆ, ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ.  

Written by - Ranjitha R K | Last Updated : Apr 29, 2022, 01:07 PM IST
  • ಬೆಳಿಗ್ಗೆ ಈ 5 ಕೆಲಸಗಳನ್ನು ತಪ್ಪದೇ ಮಾಡಿ
  • ಪ್ರತಿದಿನ ಒಂದೇ ಸಮಯಕ್ಕೆ ನಿದ್ರೆಯಿಂದ ಏಳುವುದು
  • ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಸೇವಿಸಿ
Healthy Morning Tips: ಮುಂಜಾನೆ ಈ ಐದು ಕೆಲಸಗಳನ್ನು ಮಾಡಿದರೆ ದಿನವಿಡೀ ಉಲ್ಲಾಸದಾಯಕವಾಗಿರುತ್ತದೆ  title=
Healthy Morning Tips (file photo)

ಬೆಂಗಳೂರು : ಮುಂಜಾನೆಯ ಆರಂಭವು ಉತ್ತಮವಾಗಿದ್ದರೆ, ಇಡೀ ದಿನ ಉಲ್ಲಾಸದಾಯಕವಾಗಿ ಉತ್ಸಾಹಭರಿತವಾಗಿ ಕಳೆಯುತ್ತದೆ. ಈ ಕಾರಣಕಾಗಿಯೇ ಬೆಳಗಿನ ದಿನಚರಿಯನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಬೆಳಗಿನ ಉಪಾಹಾರ ಮುಗಿಸಿ ಆಫೀಸಿಗೆ ಹೋಗಿ, ಕೆಲಸ ಮಾಡುವಾಗ ಆಲಸ್ಯ ಅನಿಸುತ್ತದೆ. ಈ ಕಾರಣದಿಂದಾಗಿ ಬೆಳಗಿನ ಚಟುವಟಿಕೆಗಳನ್ನು ಸರಿಯಾಗಿ ಯೋಜಿಸುವುದಿಲ್ಲ.

ಬೆಳಿಗ್ಗೆ ಈ 5 ಕೆಲಸಗಳನ್ನು ತಪ್ಪದೇ  ಮಾಡಿ :
ಈ ಕೆಳಗಿನ ಅಭ್ಯಾಸಗಳನ್ನು ಬೆಳಗಿನ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು ಇದರಿಂದ ದೇಹದ ಶಕ್ತಿಯು ದಿನವಿಡೀ ಹಾಗೇ ಇರುತ್ತದೆ ಮತ್ತು ಆಯಾಸವಾಗುವುದಿಲ್ಲ. ಹೀಗೆ ಮಾಡುವುದರಿಂದ ಸೋಮಾರಿತನ ದೂರವಾಗುವುದಲ್ಲದೆ, ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ. 

ಇದನ್ನೂ ಓದಿ : Male Fertility : ಪುರುಷರೆ ನಿಮ್ಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಹಾಲು-ಖರ್ಜೂರ!

1. ಪ್ರತಿದಿನ ಒಂದೇ ಸಮಯಕ್ಕೆ ನಿದ್ರೆಯಿಂದ ಏಳುವುದು :
ಬೆಳಿಗ್ಗೆ ನಿದ್ರೆಯಿಂದ ಏಳಲು ಸಮಯವನ್ನು ನಿಗದಿಪಡಿಸಿ,. ನೀವು ಪ್ರತಿದಿನ ಒಂದೇ ಸಮಯಕ್ಕೆ ಎದ್ದರೆ,  ಬಾಡಿ ಸೈಕಲ್ ಸ್ಥಿರವಾಗಿರುತ್ತದೆ. ದಿನಕ್ಕೊಂದು ಸಮಯದಂತೆ ಎದ್ದರೆ ಅದು ಮಾನಸಿಕವಾಗಿಯೂ  ತೊಂದರೆ ನೀಡಬಹುದು. 

2. ಬೆಳಿಗ್ಗೆ ಒಂದು ಲೋಟ ನೀರು ಕುಡಿಯಿರಿ :
ಬೆಳಗ್ಗೆ ಎದ್ದ ನಂತರ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ, ಇದರಿಂದ ದೇಹವು ಹೈಡ್ರೇಟ್ ಆಗುವುದಲ್ಲದೆ, ಕರುಳಿನ ಚಲನವಲನದಲ್ಲಿ ತೊಂದರೆಯಾಗುವುದಿಲ್ಲ ಮತ್ತು ದಿನವಿಡೀ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಇರುವುದಿಲ್ಲ. 

3. ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಸೇವಿಸಿ :
ಬೆಳಿಗ್ಗೆ ಎಣ್ಣೆಯುಕ್ತ ಆಹಾರವನ್ನು ಸೇವಿಸುವ ಬದಲು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ, ಏಕೆಂದರೆ ಇದು ಶಕ್ತಿಯ ಸಮೃದ್ಧ ಮೂಲವಾಗಿದೆ.  ಆದ್ದರಿಂದ ನೀವು ದಿನವಿಡೀ ಆಯಾಸವನ್ನು ಅನುಭವಿಸುವುದಿಲ್ಲ.

ಇದನ್ನೂ ಓದಿ : ಸ್ನಾನದ ವೇಳೆ ಮಾಡುವ ಈ ತಪ್ಪು ಮೆದುಳಿಗೆ ಹಾನಿಯುಂಟು ಮಾಡಬಹುದು.!

4. ಬೆಳಿಗ್ಗೆ ವಾಕ್ ಮಾಡುವುದು ಅವಶ್ಯಕ :
ಬೆಳಿಗ್ಗೆ ಎದ್ದ ತಕ್ಷಣ ಕಚೇರಿಗೆ ಹೋಗಲು ಆತುರಪಡಬೇಡಿ. ನಿದ್ರೆಯಿಂದ ಎದ್ದ ನಂತರ ನೀವು ಸುಮಾರು 20 ರಿಂದ 30 ನಿಮಿಷಗಳ ಕಾಲ ವಾಕ್ ಮಾಡಬೇಕು. ಅಥವಾ ಜಾಗಿಂಗ್ ಮಾಡಬೇಕು . ಇದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಿ ಆರೋಗ್ಯ ವೃದ್ದಿಸುತ್ತದೆ. 

5. ಬೆಡ್ ಟೀ ಅಭ್ಯಾಸವನ್ನು ಬಿಟ್ಟು ಬಿಡಿ : 
ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ, ಇದನ್ನು ಸಾಮಾನ್ಯವಾಗಿ ಬೆಡ್ ಟೀ ಎಂದು ಕರೆಯಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆಯು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ನೀವು ಮಲಬದ್ಧತೆ ಹೊಂದಿದ್ದರೆ ಈ ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಡಿ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News