Budh Rashi Parivartan 2021: ಏಪ್ರಿಲ್ ಮೊದಲ ದಿನವೇ ಬುಧನ ರಾಶಿ ಪರಿವರ್ತನೆ ; ಖುಲಾಯಿಸಲಿದೆ ಈ 5 ರಾಶಿಗಳ ಅದೃಷ್ಟ

ಬುಧನ  ರಾಶಿ ಪರಿವರ್ತನೆ ಹನ್ನೆರಡೂ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲ ರಾಶಿಗಳ ಮೇಲೆ ಇದು ಒಳ್ಳೆ ಪರಿಣಾಮ ಬೀರಿದರೆ ಇನ್ನು ಕೆಲ ರಾಶಿಗಳಿಗೆ ಅಶುಭ ಫಲ ಸಿಗಲಿದೆ. 

Written by - Zee Kannada News Desk | Last Updated : Mar 31, 2021, 06:36 PM IST
  • ಏಪ್ರಿಲ್ ಮೊದಲ ದಿನವೇ ಬುಧ ಗ್ರಹದ ರಾಶಿ ಪರಿವರ್ತನೆ
  • ಬುಧನ ರಾಶಿ ಪರಿವರ್ತನೆ ಹನ್ನೆರಡೂ ರಾಶಿಗಳ ಮೇಲೆ ಪ್ರಭಾವ ಬೀರಲಿದೆ
  • ನಿಮ್ಮ ರಾಶಿಚಕ್ರಕ್ಕನುಗುಣವಾಗಿ ಯಾರಿಗೆ ಶುಭ ಯಾರಿಗೆ ಅಶುಭ ತಿಳಿಯಿರಿ
Budh Rashi Parivartan 2021: ಏಪ್ರಿಲ್ ಮೊದಲ ದಿನವೇ ಬುಧನ ರಾಶಿ ಪರಿವರ್ತನೆ ;  ಖುಲಾಯಿಸಲಿದೆ ಈ 5 ರಾಶಿಗಳ ಅದೃಷ್ಟ title=
ಏಪ್ರಿಲ್ ಮೊದಲ ದಿನವೇ ಬುಧ ಗ್ರಹದ ರಾಶಿ ಪರಿವರ್ತನೆ (file photo)

ಬೆಂಗಳೂರು : Budh Rashi Parivartan 2021: ಏಪ್ರಿಲ್ ಮೊದಲ ದಿನವೇ ಬುಧ ಗ್ರಹದ ರಾಶಿ ಪರಿವರ್ತನೆಯಾಗುತ್ತಿದೆ. ಬುಧನು ಕುಂಭರಾಶಿಯಿಂದ ಮೀನ ರಾಶೀಗೆ ಪ್ರವೇಶ ಮಾಡಲಿದ್ದಾನೆ. ಬುಧನ  ರಾಶಿ ಪರಿವರ್ತನೆ ಹನ್ನೆರಡೂ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲ ರಾಶಿಗಳ ಮೇಲೆ ಇದು ಒಳ್ಳೆ ಪರಿಣಾಮ ಬೀರಿದರೆ ಇನ್ನು ಕೆಲ ರಾಶಿಗಳಿಗೆ ಅಶುಭ ಫಲ ಸಿಗಲಿದೆ. ನಿಮ್ಮ ನಿಮ್ಮ ರಾಶಿಚಕ್ರಕ್ಕನುಗುಣವಾಗಿ ಯಾರಿಗೆ ಶುಭ ಯಾರಿಗೆ ಅಶುಭ ಎಂಬ ಮಾಹಿತಿ ಇಲ್ಲಿದೆ ..

ಮೇಷ :
ಅಧಿಕ ವೆಚ್ಚವಾಗಲಿದೆ. ಓಡಾಟ ಮುಂದುವರಿಯುತ್ತದೆ. ನಿಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸಿ. ಅನಗತ್ಯ ಚರ್ಚೆಯಲ್ಲಿ ಭಾಗವಹಿಸಬೇಡಿ. ನೀವು ಒತ್ತಡಕ್ಕೊಳಗಾಗಬಹುದು. ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಿ. 

ವೃಷಭ ರಾಶಿ :
ಬಹಳ ದಿನಗಳಿಂದ ನಿಮಗೆ ಬರಬೇಕಾಗಿದ್ದ ಹಣ (Money) ಸಿಗುತ್ತದೆ. ಆದಾಯದ ಮಾರ್ಗಗಳು ಹೆಚ್ಚಲಿವೆ. ವ್ಯಾಪಾರ ಮಾಡುವವರಿಗೆ ಯಶಸ್ಸು ಸಿಗಲಿದೆ ಮನೆ ಅಥವಾ ವಾಹನ ಖರೀದಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ : Dhan Prapti Beej Mantra: ಧನ ಪ್ರಾಪ್ತಿ ಬೀಜ ಮಂತ್ರದಿಂದ ಹಣ, ಸಂಪತ್ತು ಖಚಿತ..!

ಮಿಥುನ : 
ಹೊಸ ಉದ್ಯೋಗದ ಆಸೆ ಈಡೇರುತ್ತದೆ. ಹುದ್ದೆಯಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಖ್ಯಾತಿ ಹೆಚ್ಚಾಗುತ್ತದೆ. ಹೆತ್ತವರ ಆರೋಗ್ಯದ (Health)ಬಗ್ಗೆ ಕಾಳಜಿ ವಹಿಸಿ.

ಕಟಕ :
ಈ ಸಮಯದಲ್ಲಿ ಪ್ರಯಾಣವನ್ನು (Travlling) ತಪ್ಪಿಸಿ. ಉದ್ವೇಗ ಇದ್ದರೆ ಅದನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ. ಫಲದ ಅಪೇಕ್ಷೇ ಮಾಡದೆ ನಿಮ್ಮ ಕೆಲಸ ಮುಂದುವರೆಸಿ .. 

ಸಿಂಹ: 
ಹೂಡಿಕೆ (Investment) ಮಾಡಲು ಇದು ಸರಿಯಾದ ಸಮಯ ಅಲ್ಲ. ಕೋಪದ ಮೇಲೆ ನಿಯಂತ್ರಣವಿರಲಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಆಹಾರದ (food)ಮೇಲೆ ಹತೋಟಿ ಯಿರಲಿ. 

ಇದನ್ನೂ ಓದಿ : Hasta Samudrika:ನಿಮ್ಮ ಕೈಯಲ್ಲಿಯೂ ಈ ರೇಖೆ ಇದೆಯಾ? ಇದ್ರೆ ನೀವೂ ನಿಮ್ಮ ಮಡದಿಯ ಕಾಳಜಿಗೆ ಪಾತ್ರರಗುವಿರಿ

ಕನ್ಯಾ : 
ವ್ಯಾಪಾರ ಮಾಡಲು ಒಳ್ಳೆಯ ಸಮಯ. ಮದುವೆಗೆ  (Marraige) ಯೋಗ ಕೂಡಿ ಬರಲಿದೆ.  ಏನೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗಲಿದೆ. 

ತುಲಾ: 
ಶತ್ರುಗಳು ಹೆಚ್ಚಾಗಲಿದ್ದಾರೆ. ಯಾರ ವಿರುದ್ಧವೂ ಮಾತನಾಡಬೇಡಿ. ನೀವು ಯಾವುದೇ ಯೋಜನೆಗಳನ್ನು ಹೊಂದಿದ್ದರೂ ಅವುಗಳನ್ನು ರಹಸ್ಯವಾಗಿ ಪೂರೈಸಿಕೊಳ್ಳಿ.

ವೃಶ್ಚಿಕ :
ಸ್ಥಾನಮಾನದಲ್ಲಿ ಸುಧಾರಣೆಯಾಗಲಿದೆ. ಯಾರಿಗೂ ಸಾಲ (Debt) ನೀಡಬೇಡಿ. ನೀವು ಏನೇ ಕೆಲಸ ಮಾಡುವುದಕ್ಕೂ ಮೊದಲಿಗೆ ಸರಿಯಾಗಿ ಪರಾಮರ್ಶಿಸಿಕೊಳ್ಳಿ. 

ಇದನ್ನೂ ಓದಿ : Chaitra 2021: ಹಿಂದೂ ಪಂಚಾಂಗದ ಮೊದಲ ತಿಂಗಳು ಚೈತ್ರ ಮಾಸದಲ್ಲಿ ಏನು ತಿನ್ನಬೇಕು ಏನು ತಿನ್ನಬಾರದು ತಿಳಿದಿದೆಯೇ?

ಧನು ರಾಶಿ:
ಕಷ್ಟಪಟ್ಟು ಕೆಲಸ ಮಾಡಿ, ಯಶಸ್ಸು ಖಂಡಿತಾ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು.

ಮಕರ :
ಪ್ರಯಾಣ ಸಾಧ್ಯತೆಗಳಿವೆ. ಕೋಪದ ಮೇಲೆ ಹಿಡಿತವಿರಲಿ. ಯಾವುದೇ ಕೆಲಸ ಮಾಡುವುದಾದರೂ ತಾಳ್ಮೆಯಿಂದ ಮಾಡಿ ಮುಗಿಸಿ. ಯಶಸ್ಸು ಸಿಗಲಿದೆ. ನಿಮ್ಮ ಸಮಯವು ಉತ್ತಮವಾಗಿರುತ್ತದೆ.

ಕುಂಭ ರಾಶಿ :
ಆರ್ಥಿಕ ಪರಿಸ್ಥಿತಿಗಳು ಈಗ ಸುಧಾರಿಸುವ ನಿರೀಕ್ಷೆಯಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.

ಮೀನ :
ನೀವು ನೌಕರಿಯಲ್ಲಿರಿ (Job)ಅಥವಾ ವ್ಯವಹಾರ ಮಾಡುತ್ತಿರಿ ಯಶಸ್ಸು ಸಿಗಲಿದೆ.  ಸೇವಿಸುವ ಆಹಾರದತ್ತ (Food) ಗಮನವಿರಲಿ.. 

ಇದನ್ನೂ ಓದಿ : TUESDAY REMEDIES: ಶನಿ ದೇವನನ್ನು ಮೆಚ್ಚಿಸಲು ಮಂಗಳವಾರ ಹನುಮನನ್ನು ಪೂಜಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News