Dark Neck Treatment: ಕುತ್ತಿಗೆಯ ಸುತ್ತ ಕಪ್ಪಾಗುತ್ತಿದೆಯೇ? ನಿಮ್ಮ ಈ ತಪ್ಪುಗಳೂ ಕಾರಣವಾಗಿರಬಹುದು, ಎಚ್ಚರ

Treatment For Dark Neck: ಕುತ್ತಿಗೆ ಸುತ್ತ ಕಪ್ಪು ಕಲೆ ಕೆಲವರಲ್ಲಿ ಆತ್ಮವಿಶ್ವಾಸದ ಕೊರತೆಗೆ ಕಾರಣವಾಗುತ್ತದೆ. ಅದರಲ್ಲೂ ಹೆಂಗಸರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆದರೆ, ನೀವು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಿಮ್ಮ ಕುತ್ತಿಗೆ ಸುತ್ತಲಿನ ಕಪ್ಪು ಕಲೆಗಳನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Mar 16, 2023, 03:21 PM IST
  • ಕುತ್ತಿಗೆ ಸುತ್ತಲಿನ ಕಪ್ಪು ಕಲೆಗಳಿಗೆ ಹಲವು ಕಾರಣಗಳಿವೆ.
  • ಅವುಗಳಲ್ಲಿ ನಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ನಾವು ಮಾಡುವ ಕೆಲವು ತಪ್ಪುಗಳು ಕೂಡ ಮುಖ್ಯ ಕಾರಣವಿರಬಹುದು.
  • ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ...
Dark Neck Treatment: ಕುತ್ತಿಗೆಯ ಸುತ್ತ ಕಪ್ಪಾಗುತ್ತಿದೆಯೇ? ನಿಮ್ಮ ಈ ತಪ್ಪುಗಳೂ ಕಾರಣವಾಗಿರಬಹುದು, ಎಚ್ಚರ  title=
Treatment For Dark Neck

Treatment For Dark Neck: ಕುತ್ತಿಗೆ ಸುತ್ತ ಕಾಣಿಸಿಕೊಳ್ಳುವ ಕಪ್ಪು ಕಲೆ ಸೌಂದರ್ಯವನ್ನು ಮರೆಮಾಡುತ್ತದೆ. ಕೆಲವರಿಗೆ ಕುತ್ತಿಗೆ ಸುತ್ತ ಕಾಣಿಸಿಕೊಳ್ಳುವ ಈ ಕಪ್ಪು ಕಲೆಗಳು ಮುಜುಗರ ಉಂಟು ಮಾಡುತ್ತದೆ. ಮಾತ್ರವಲ್ಲ, ಅವರಲ್ಲಿ ಆತ್ಮವಿಶ್ವಾಸದ ಕೊರತೆಗೂ ಕಾರಣವಾಗುತ್ತದೆ. ಅಷ್ಟಕ್ಕೂ ಶುಚಿತ್ವಕ್ಕೆ ಮಹತ್ವ ನೀಡಿದರೂ ಸಹ ಕುತ್ತಿಗೆಯ ಸುತ್ತಲೂ ಈ ರೀತಿ ಕಪ್ಪು ಕಲೆ ಮೂಡುವುದಕ್ಕೆ ಕಾರಣವಾದರೂ ಏನು ಎಂದು ಎಂದಾದರೂ ಯೋಚಿಸಿದ್ದೀರಾ? 

ವಾಸ್ತವವಾಗಿ, ಕುತ್ತಿಗೆ ಸುತ್ತಲಿನ ಕಪ್ಪು ಕಲೆಗಳಿಗೆ ಹಲವು ಕಾರಣಗಳಿವೆ. ಅವುಗಳಲ್ಲಿ ನಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ನಾವು ಮಾಡುವ ಕೆಲವು ತಪ್ಪುಗಳು ಕೂಡ ಮುಖ್ಯ ಕಾರಣವಿರಬಹುದು. ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ...

ನಿಮ್ಮ ಈ ತಪ್ಪುಗಳಿಂದಾಗಿ ಕುತ್ತಿಗೆ ಸುತ್ತಲಿನ ಕಪ್ಪು ಹೆಚ್ಚಾಗಬಹುದು! 
* ಮಲಗುವಾಗ ಕತ್ತಿಗೆ ಹಾಕಿರುವ ಚೈನ್ ತೆಗೆಯದೇ ಇರುವುದು:

ತಜ್ಞರ ಪ್ರಕಾರ, ಕುತ್ತಿಗೆಗೆ ಹಾಕಿರುವ ಸರ, ಚೈನ್ ನಿಂದಲೂ ಕೂಡ ಕುತ್ತಿಗೆ ಸುತ್ತ ಕಪ್ಪಾಗಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಮುತ್ತೈದೆಯರು ಮಂಗಳಸೂತ್ರವನ್ನು ತೆಗೆಯುವಂತಿಲ್ಲ. ಆದರೆ, ಕತ್ತಿಗೆ ಹಾಕಿರುವ ಸರವನ್ನು ತೆಗೆಯದೇ ಮಲಗುವುದರಿಂದಲೂ ಕೆಲವರಿಗೆ ಕುತ್ತಿಗೆ ಸುತ್ತ ಕಪ್ಪು ಕಲೆ  ಉಂಟಾಗಬಹುದು.

ಇದನ್ನೂ ಓದಿ- Vegetable Juice Benefits For Skin: ಸುಂದರವಾದ, ಕಾಂತಿಯುತ ತ್ವಚೆ ನಿಮ್ಮದಾಗಬೇಕೆ! ಹಾಗಿದ್ದರೆ ಈ ಜ್ಯೂಸ್ ಅನ್ನು ನಿತ್ಯ ಸೇವಿಸಿ

*  ಸನ್‌ಸ್ಕ್ರೀನ್ ಬಳಸದೆ ಇರುವುದು:
ಬಿರು ಬಿಸಿಲಿನಲ್ಲಿ ಸನ್‌ಸ್ಕ್ರೀನ್ ಹಚ್ಚದೆ ಹೊರಗೆ ಬರುವುದರಿಂದಲೂ ಕುತ್ತಿಗೆ ಸುತ್ತ ಕಪ್ಪು ಕಲೆ ಉಂಟಾಗಬಹುದು. ಇದನ್ನು ತಪ್ಪಿಸಲು ನಿತ್ಯ ಹೊರ ಹೋಗುವ ಮೊದಲು ತಪ್ಪದೇ ಕುತ್ತಿಗೆ ಭಾಗಕ್ಕೂ ಸನ್‌ಸ್ಕ್ರೀನ್ ಬಳಸಿ. 

*  ಬಿಗಿಯಾದ ಕಾಲರ್ ಬಟ್ಟೆಗಳನ್ನು ಧರಿಸುವುದು:
ಬಿಗಿಯಾದ ಕಾಲರ್ ಬಟ್ಟೆಗಳನ್ನು ಧರಿಸುವುದರಿಂದಲೂ ಸಹ ಕುತ್ತಿಗೆ ಸುತ್ತ ಕಪ್ಪು ಕಲೆಗಳಿಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು ರೌಂಡ್ ನೆಕ್ ಉಡುಪುಗಳನ್ನು ಧರಿಸಲು ಪ್ರಯತ್ನಿಸಿ. 

ಇದನ್ನೂ ಓದಿ- ನೀವೂ ಸಹ ಸ್ಕಿನ್ ಟೋನರ್ ಬಳಸ್ತೀರಾ... ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

* ಸ್ಕ್ರಬ್:
ಕೆಲವರು ಕುತ್ತಿಗೆ ಸುತ್ತಲಿನ ಕಪ್ಪುಕಲೆಗಳಿಂದ ಮುಕ್ತಿ ಪಡೆಯುವ ಸಲುವಾಗಿ ಸ್ಕ್ರಬ್‌ಗಳನ್ನು ಬಳಸುತ್ತಾರೆ. ಆದರೆ, ಬಳಿಕ ಲೋಷನ್ ಹಚ್ಚುವುದಿಲ್ಲ. ಇದೂ ಕೂಡ ಕತ್ತಿನ ಸುತ್ತಲೂ ಕಪ್ಪು ಕಲೆಗಳು ಹೆಚ್ಚಾಗಲು ಕಾರಣವಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News