ಈ ವಸ್ತುವನ್ನು ಕೂದಲಿಗೆ ಹಚ್ಚಿದರೆ ಮರಳಿ ಬರುವುದೇ ಇಲ್ಲ ತಲೆಹೊಟ್ಟಿ ನ ಸಮಸ್ಯೆ

Home Remedy To Get Rid Of Dandruff:ತಲೆಹೊಟ್ಟನ್ನು ಪ್ರಾರಂಭದಲ್ಲಿಯೇ  ತೊಡೆದುಹಾಕಿದರೆ, ಕೂದಲಿನ ಆರೋಗ್ಯವನ್ನು ಕಾಪಾಡಬಹುದು.  ಇಂದು ನಾವು ತಲೆಹೊಟ್ಟು ಹೋಗಲಾಡಿಸಲು ಅನುಸರಿಸಬಹುದಾದ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡುತ್ತೇವೆ.

Written by - Ranjitha R K | Last Updated : Jul 19, 2023, 02:06 PM IST
  • ತಲೆಹೊಟ್ಟು ಕೂದಲನ್ನು ದುರ್ಬಲಗೊಳಿಸುತ್ತದೆ.
  • ಕೂದಲು ದುರ್ಬಲಗೊಂಡರೆ ಉದುರಲು ಆರಂಭವಾಗುತ್ತದೆ.
  • ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಸುಲಭ ಉಪಾಯ
ಈ ವಸ್ತುವನ್ನು ಕೂದಲಿಗೆ ಹಚ್ಚಿದರೆ ಮರಳಿ ಬರುವುದೇ ಇಲ್ಲ ತಲೆಹೊಟ್ಟಿ ನ ಸಮಸ್ಯೆ  title=

Home Remedy To Get Rid Of Dandruff: ಮಳೆಗಾಲದಲ್ಲಿ ಕೂದಲು ಜಿಗುಟಾಗುವುದು ಮತ್ತು ಎಣ್ಣೆಯುಕ್ತವಾಗುವುದು ಸಾಮಾನ್ಯ. ಇದರಿಂದಾಗಿ ತಲೆಹೊಟ್ಟು ಉಂಟಾಗುತ್ತದೆ. ತಲೆಹೊಟ್ಟು ಕೂದಲನ್ನು ದುರ್ಬಲಗೊಳಿಸುತ್ತದೆ. ಕೂದಲು ದುರ್ಬಲಗೊಂಡರೆ ಉದುರಲು ಆರಂಭವಾಗುತ್ತದೆ. ತಲೆಹೊಟ್ಟು ಹೆಚ್ಚಾದರೆ ಸೋಂಕು ಅಥವಾ ಗಾಯದ ಸಮಸ್ಯೆಯನ್ನು ಉಂಟುಮಾಡುತ್ತದೆ. ಹೀಗಿರುವಾಗ ತಲೆಹೊಟ್ಟನ್ನು ಪ್ರಾರಂಭದಲ್ಲಿಯೇ  ತೊಡೆದುಹಾಕಿದರೆ, ಕೂದಲಿನ ಆರೋಗ್ಯವನ್ನು ಕಾಪಾಡಬಹುದು.  ಇಂದು ನಾವು ತಲೆಹೊಟ್ಟು ಹೋಗಲಾಡಿಸಲು ಅನುಸರಿಸಬಹುದಾದ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಇವುಗಳನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು. 

ಡ್ಯಾಂಡ್ರಫ್ ಗೆ ಮನೆಮದ್ದು : 
ಆಪಲ್ ಸೈಡರ್ ವಿನೆಗರ್ : 
ಸಮಾನ ಪ್ರಮಾಣದಲ್ಲಿ ನೀರು ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ತೆಗೆದುಕೊಂಡು ಮಿಶ್ರಣ ಮಾಡಬೇಕು. ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ ಕೆಲವು ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ  ಕೂದಲನ್ನು ತೊಳೆದು ಸ್ವಚ್ಛಗೊಳಿಸಿ. ಇದು ನೆತ್ತಿಯ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. 

ಇದನ್ನೂ ಓದಿ : ಬೀ-ಆಲ್ & ಎಂಡ್-ಆಲ್ ಗ್ರಹದ ಮೇಲೆ ಜೇನುನೊಣಗಳ ಹಾರಟ ; ಇಲ್ಲಿದೆ ನೋಡಿ ಅಚ್ಚರಿ ಸಂಗತಿ!

ನಿಂಬೆ ರಸ : 
ತಾಜಾ ನಿಂಬೆ ರಸವನ್ನು ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿಯ ಮೇಲೆ  ಹಚ್ಚಿ  5-10 ನಿಮಿಷಗಳ ಕಾಲ  ಮಸಾಜ್ ಮಾಡಿ. ಇದು ನಿಮ್ಮ ನೆತ್ತಿಯ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. ಅಲ್ಲದೆ ತಲೆಹೊಟ್ಟು ಕಡಿಮೆಯಾಗಲು ಸಹಾಯ ಮಾಡುತ್ತದೆ. ಆದರೆ ತಲೆಯಲ್ಲಿ ಗಾಯಗಳಿದ್ದರೆ ಇದನ್ನು ಹಚ್ಚಲು ಹೋಗಬೇಡಿ.  

ಟೀ ಟ್ರೀ ಆಯಿಲ್ : 
ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯೊಂದಿಗೆ ಟೀ ಟ್ರೀ ಆಯಿಲ್ ನ ಕೆಲವು ಹನಿಗಳನ್ನು ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಟೀ ಟ್ರೀ ಆಯಿಲ್ ಆಂಟಿಫಂಗಲ್ ಗುಣಗಳನ್ನು ಹೊಂದಿದ್ದು ಅದು ಕೂದಲಿನಿಂದ ತಲೆಹೊಟ್ಟು ನಿವಾರಿಸುತ್ತದೆ. 

ಇದನ್ನೂ ಓದಿ :Yellow Teeth: ಹಲ್ಲು ಹಳದಿ ಆಗಿದೆಂದು ನಗಲು ಮುಜುಗರವೇ... ಚಿಂತೆ ಬಿಡಿ ಈ ಮನೆ ಮದ್ದು ಉಪಯೋಗಿಸಿ..!

ಅಲೋವೆರಾ : 
ಇದಕ್ಕಾಗಿ, ತಾಜಾ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದನ್ನು  ನೆತ್ತಿ ಮೇಲೆ ಹಚ್ಚಿ ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಶಾಂಪೂ ಬಳಸಿ ಕೂದಲನ್ನು ಸ್ವಚ್ಛ ಮಾಡಿ. ಅಲೋವೆರಾ ನೆತ್ತಿಯ ಶುಷ್ಕತೆ ಮತ್ತು ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News