ಬೆಂಗಳೂರು : Home remedies for cough-cold in summer: ಬೇಸಿಗೆಯಲ್ಲಿ ಬಿಸಿಲು ಮತ್ತು ತೇವಾಂಶದಿಂದ ಜನರು ಚಡಪಡಿಕೆ, ನಿರ್ಜಲೀಕರಣ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವರಿಗೆ ಬೇಸಿಗೆಯಲ್ಲೂ ಶೀತ ಮತ್ತು ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಋತು ಬದಲಾದಾಗಲೆಲ್ಲಾ ಜನರಲ್ಲಿ ಕಂಡುಬರುವ ಒಂದು ರೀತಿಯ ಕಾಲೋಚಿತ ಅಲರ್ಜಿಯ ಪ್ರತಿಕ್ರಿಯೆಯಾಗಿದೆ. ಇದರಿಂದ ಮೂಗು ಸೋರುವಿಕೆ, ಕೆಮ್ಮು, ಗಂಟಲು ಬಿಗಿತ ಮತ್ತು ಕಫದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ತೊಂದರೆಗಳಿಂದ ಪರಿಹಾರ ಪಡೆಯಲು ಕೆಲವು ಸುಲಭವಾದ ಮನೆಮದ್ದುಗಳನ್ನು ಬಳಸಬಹುದು.
ಬೇಸಿಗೆಯಲ್ಲಿ ಕೆಮ್ಮು-ನೆಗಡಿ ಸಮಸ್ಯೆಗೆ ಪರಿಹಾರ ನೀಡುವ ಮನೆಮದ್ದು ಎಂದರೆ ಕಬ್ಬಿನ ರಸ ಮತ್ತು ಮೂಲಂಗಿ ರಸ. ಹಾಗಿದ್ದರೆ ಈ ಶರಬತ್ ತಯಾರಿಸುವುದು ಹೇಗೆ ? ಇದನ್ನೂ ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಇದನ್ನೂ ಓದಿ : Diabetes Treatment: ಡಯಾಬಿಟಿಸ್ ರೋಗಿಗಳ ಚಿಕಿತ್ಸೆ ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ, ಹೇಗೆ ತಿಳಿಯಲು ಸುದ್ದಿ ಓದಿ
ಬೇಸಿಗೆಯಲ್ಲಿ ಕೆಮ್ಮು ನಿವಾರಣೆಗೆ ಸುಲಭ ಮನೆಮದ್ದು :
1. ಕಬ್ಬಿನ ರಸವನ್ನು ಯಾವಾಗಲೂ ತಾಜಾವಾಗಿರುವಾಗಲೇ ಸೇವಿಸಬೇಕು. ಹಾಗಾಗಿ ಈ ಶರಬತ್ತು ತಯಾರಿಸಲು, ತಾಜಾ ಕಬ್ಬಿನ ರಸವನ್ನು ತಯಾರಿಸಿ ಅಥವಾ ಮಾರುಕಟ್ಟೆಯಿಂದ ಖರೀದಿಸಿ.
2. ಮಧ್ಯಮ ಗಾತ್ರದ ಮೂಲಂಗಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿದ ನಂತರ, ಅದರಿಂದ ಪೇಸ್ಟ್ ಮಾಡಿಕೊಳ್ಳಿ . ಈಗ ಈ ಪೇಸ್ಟ್ ಅನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಹಿಂಡಿ ಅದರ ರಸವನ್ನು ತೆಗೆದಿಟ್ಟುಕೊಳ್ಳಿ.
3.ಈಗ ಒಂದು ಲೋಟ ಕಬ್ಬಿನ ರಸಕ್ಕೆ 3-4 ಚಮಚ ಮೂಲಂಗಿ ರಸವನ್ನು ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.
ಇದನ್ನೂ ಓದಿ : Cucumber: ಸೌತೆಕಾಯಿ ತಿಂದ ಬಳಿಕ ನೀರು ಕುಡಿಯಬಾರದು...ಯಾಕೆ ಗೊತ್ತಾ?
4. ಕೆಮ್ಮು ಇರುವವರು ಕೂಡಾ, ಈ ಪಾನಕವನ್ನು ಸೇವಿಸಬಹುದು. ಆದರೆ, ನಿಮಗೆ ಕಬ್ಬು ಅಥವಾ ಮೂಲಂಗಿಯಿಂದ ಅಲರ್ಜಿ ಇದ್ದರೆ, ತಜ್ಞರನ್ನು ಸಂಪರ್ಕಿಸಿದ ನಂತರವೇ ಅದರ ಪಾನಕವನ್ನು ಸೇವಿಸಿ.
5. ಮೂಲಂಗಿ ಮತ್ತು ಕಬ್ಬಿನ ರಸದಿಂದ ತಯಾರಿಸಿದ ಈ ಶರಬತ್ತನ್ನು ಮಧ್ಯಾಹ್ನ ಸೇವಿಸಲು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.