ದೀಪಾವಳಿಗೂ ಮುನ್ನವೇ ಈ ರಾಶಿಯವರ ಮೇಲೆ ಕೃಪೆ ತೋರಲಿದ್ದಾಳೆ ಲಕ್ಷ್ಮೀ .. ! ಎರಡೂವರೆ ವರ್ಷ ಎದುರಾಗುವುದಿಲ್ಲ ಆರ್ಥಿಕ ಸಮಸ್ಯೆ

ಹಿಮ್ಮುಖ ಚಲನೆಯಲ್ಲಿರುವ ಶನಿಯು ಈ ದಿನದಿಂದ ನೇರ ನಡೆ ಆರಂಭಿಸಲಿದ್ದಾನೆ. ಶನಿಯ ಪಥ ಬದಲಾವಣೆಯು ಈ ಕೆಳಗಿನ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ.

Written by - Ranjitha R K | Last Updated : Oct 19, 2022, 04:40 PM IST
  • ಶನಿಯ ಈ ಚಲನೆಯ ಪರಿಣಾಮವು ಎಲ್ಲಾ ರಾಶಿಗಳ ಮೇಲೂ ಗೋಚರಿಸುತ್ತದೆ.
  • ಧನತ್ರಯೋದಶಿ ದಿನದಂದು ಶನಿಯು ನೇರ ನಡೆ ಆರಂಭಿಸಲಿದ್ದಾನೆ.
  • ಈ ಕೆಳಗಿನ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ.
ದೀಪಾವಳಿಗೂ ಮುನ್ನವೇ  ಈ ರಾಶಿಯವರ ಮೇಲೆ ಕೃಪೆ ತೋರಲಿದ್ದಾಳೆ ಲಕ್ಷ್ಮೀ .. ! ಎರಡೂವರೆ ವರ್ಷ ಎದುರಾಗುವುದಿಲ್ಲ ಆರ್ಥಿಕ ಸಮಸ್ಯೆ   title=
Shani Margi On Dhantrayodashi 2022

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ,  ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಶನಿಯ ಈ ಚಲನೆಯ ಪರಿಣಾಮವು ಎಲ್ಲಾ ರಾಶಿಗಳ ಮೇಲೂ ಗೋಚರಿಸುತ್ತದೆ. ಈ ಬಾರಿ ಅಕ್ಟೋಬರ್ 23 ರಂದು ಅಂದರೆ  ಧನತ್ರಯೋದಶಿ ದಿನದಂದು ಶನಿಯು ನೇರ ನಡೆ ಆರಂಭಿಸಲಿದ್ದಾನೆ. 

ಯಾವುದೇ ಗ್ರಹದ ಚಲನೆಯಲ್ಲಿನ ಬದಲಾವಣೆಗಳು ವ್ಯಕ್ತಿಯ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಧನತ್ರಯೋದಶಿ ದಿನದಂದು,  ಶನಿಯ ಪಥ ಬದಲಾವಣೆ  ಹೆಚ್ಚು ಮಹತ್ವದ್ದಾಗಿದೆ.  ಹಿಮ್ಮುಖ ಚಲನೆಯಲ್ಲಿರುವ ಶನಿಯು ಈ ದಿನದಿಂದ ನೇರ ನಡೆ ಆರಂಭಿಸಲಿದ್ದಾನೆ. ಶನಿಯ ಪಥ ಬದಲಾವಣೆಯು ಈ ಕೆಳಗಿನ  ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ.

ಇದನ್ನೂ ಓದಿ  : ದೀಪಾವಳಿ ದಿನ 10 ರೂಪಾಯಿ ಬೆಲೆಯ ಈ ವಸ್ತು ಖರೀದಿಸಿದರೂ ಬೆಳಗುವುದು ಅದೃಷ್ಟ

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಮಕರ ರಾಶಿ ಪ್ರವೇಶಿಸುವ ಮೂಲಕ ಮೇಷ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದ್ದಾರೆ. ಇದರೊಂದಿಗೆ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ಅವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಾಧಿಸಲಿದ್ದಾರೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ. 

ತುಲಾ ರಾಶಿ : ಈ ರಾಶಿಯವರಿಗೆ ಶನಿಯ ಪಥ ಬದಲಾವಣೆ ಶುಭಕರವಾಗಿರಲಿದೆ. ಈ ರಾಶಿಯ ಜನರು ಮುಂದಿನ ಎರಡೂವರೆ ವರ್ಷಗಳವರೆಗೆ ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಇಲ್ಲಿಯವರೆಗೆ ಎದುರಾಗಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಲಿದೆ.  ವಿವಾದಗಳು ದೂರವಾಗುತ್ತವೆ. ಅಷ್ಟೇ ಅಲ್ಲ, ಕೌಟುಂಬಿಕ ಸಮಸ್ಯೆ ಏನೇ ಇದ್ದರೂ ಬಗೆಹರಿಯುತ್ತದೆ. 

ಧನು ರಾಶಿ : ಶನಿಯ ನೇರ ಚಲನೆಯು  ಧನು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಈ ರಾಶಿಯವರಿಗೆ ವಿಶೇಷ ಧನಲಾಭವಾಗಲಿದೆ. ಹಳೆಯ ಸಾಲದಿಂದ ಮುಕ್ತಿ ಸಿಗಲಿದೆ. ನೀವು ಮಾಡುವ ಕೆಲಸಕ್ಕೆ ನಿಮ್ಮ ಕಚೇರಿಯಲ್ಲಿ ಮೆಚ್ಚುಗೆ ವ್ಯಕ್ತವಾಗಲಿದೆ. ಪ್ರೇಮ ವಿವಾಹದಲ್ಲಿ ಬರುವ ತೊಂದರೆಗಳು ನಿವಾರಣೆಯಾಗುತ್ತವೆ. 

ಇದನ್ನೂ ಓದಿ  ಮಂಗಳ ರೂಪಿಸುತ್ತಿದ್ದಾನೆ 'ಮಹಾಪುರುಷ ರಾಜಯೋಗ' ಧನ ಸಂಪತ್ತಿನಿಂದ ತುಂಬಿ ತುಳುಕುವುದು ಈ ರಾಶಿಯವರ ಮನೆ

ಮೀನ ರಾಶಿ :  ಧನ ತ್ರಯೋದಶಿ ದಿನದಂದು ಶನಿಯ ಪಥ ಬದಲಾವಣೆ ಯಾಗುತ್ತಿರುವುದು ಮೀನ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಅವರು ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ರೋಗಗಳಿಂದ ಮುಕ್ತಿ ಸಿಗಲಿದೆ. ಉದ್ವೇಗ ದೂರವಾಗುತ್ತದೆ.  ಆದಾಯ ಹೆಚ್ಚಾಗುತ್ತದೆ ಮತ್ತು ಸಂಬಂಧಗಳು ಸುಧಾರಿಸುತ್ತವೆ. 

 

( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News