Beauty Tips: ಹಣೆಯ ಮೇಲಿನ ಮೊಡವೆಗೆ ಪವರ್ ಫುಲ್ ಮನೆಮದ್ದು ಇಲ್ಲಿದೆ

ಕೆಲವು ಹನಿ ಟೀ ಟ್ರೀ ಆಯಿಲ್ ಅನ್ನು ನೀರಿನಲ್ಲಿ ಬೆರೆಸಿ ಹತ್ತಿಯ ಸಹಾಯದಿಂದ ಹಣೆಯ ಮೇಲೆ ಹಚ್ಚಿ. ಇದು ಖಂಡಿತವಾಗಿಯೂ ನಿಮಗೆ ಸಹಕಾರಿಯಾಗುತ್ತದೆ.

Written by - Puttaraj K Alur | Last Updated : Feb 21, 2022, 09:21 PM IST
  • ಹಣೆಯ ಮೇಲಿನ ಮೊಡವೆ ಸಮಸ್ಯೆಗೆ ಇಲ್ಲಿವೆ ಸರಳ ಮನೆಮದ್ದುಗಳು
  • ಹಣೆಗೆ ಅಲೋವೆರಾ ಹಚ್ಚಿಕೊಂಡರೆ ಮೊಡವೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ
  • ಮೊಡವೆಗಳಿಗೆ ಮುಕ್ತಿ ನೀಡಲು ನಿಂಬೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ
Beauty Tips: ಹಣೆಯ ಮೇಲಿನ ಮೊಡವೆಗೆ ಪವರ್ ಫುಲ್ ಮನೆಮದ್ದು ಇಲ್ಲಿದೆ title=
ಮೊಡವೆ ಸಮಸ್ಯೆಗೆ ಸರಳ ಮನೆಮದ್ದುಗಳು

ನವದೆಹಲಿ: ಸುಂದರವಾಗಿ(Beauty Tips) ಕಾಣಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ಪ್ರತಿಯೊಬ್ಬರಿಗೂ ತಾನು ಆಕರ್ಷಕವಾಗಿ ಕಾಣಬೇಕು, ತನ್ನ ಮುಖ ನೋಡಿ ಯಾರೂ ಮೊಳ ಹಾಕಬಾರದು ಅಂತಾ ಅಂದುಕೊಂಡಿರುತ್ತಾರೆ. ಆದರೆ ಅನೇಕ ಜನರ ಮುಖದ ಮೇಲಿನ ಗುರುತುಗಳು ಅವರ ಸೌಂದರ್ಯವನ್ನು ಹಾಳುಮಾಡುತ್ತವೆ. ಹಣೆಯ ಮೇಲಿನ ಸಣ್ಣ ಸಣ್ಣ ಮೊಡವೆಗಳಿಂದ ಅನೇಕರು ಕಿರಿಕಿರಿ ಅನುಭವಿಸುತ್ತಾರೆ.  

ಸೌಂದರ್ಯಕ್ಕೆ ಕುತ್ತು ತರುವ ಈ ಮೊಡವೆ(Forehead Bumps)ಗಳನ್ನು ಹೇಗಪ್ಪಾ ಹೋಗಲಾಡಿಸುವುದು ಅನ್ನೋದೇ ಅನೇಕರಿಗೆ ಚಿಂತೆಯಾಗಿರುತ್ತದೆ. ನಿಮ್ಮ ಹಣೆಯ ಮೇಲೂ ಈ ರೀತಿಯ ಮೊಡವೆ ಗುರುತುಗಳಿದ್ದರೆ ಅವುಗಳನ್ನು ಹೊಗಲಾಡಿಸಲು ಇಲ್ಲಿವೆ ನೋಡಿ ಪವರ್ ಫುಲ್ ಮನೆಮದ್ದುಗಳು. ಈ ಸರಳ ಮನೆಮದ್ದುಗಳಿಂದ ನಿಮ್ಮ ಮೊಡವೆ ಸಮಸ್ಯೆಗಳಿಗೆ ಮುಕ್ತಿ ನೀಡಬಹುದು.

ಇದನ್ನೂ ಓದಿ: ಹಣೆಗೆ ಬಿಂದಿ ಹಚ್ಚುವುದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ! ಹೇಗೆ ಇಲ್ಲಿ ತಿಳಿಯಿರಿ

ಮೊಡವೆಗಳಿಗೆ ಸರಳ ಮನೆಮದ್ದುಗಳು

  • ನಾವು ಸಾಮಾನ್ಯವಾಗಿ ಅಲೋವೆರಾವನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸುತ್ತಿರುತ್ತೇವೆ. ಇದನ್ನು ಹಣೆಗೆ ಹಚ್ಚಿಕೊಂಡರೆ ತುಂಬಾ ಪ್ರಯೋಜನವಾಗುತ್ತದೆ. ಹಣೆಯ ಮೇಲಿನ ಮೊಡವೆಗಳಂತಹ ಗುರುತುಗಳು ಕೆಲವೇ ದಿನಗಳಲ್ಲಿ ಮಾಯವಾಗುತ್ತವೆ. ಅಲೋವೆರಾ ತುಂಬಾ ಪ್ರಯೋಜನಕಾರಿಯಾಗಿದ್ದು, ಇದನ್ನು ಹಚ್ಚಿಕೊಂಡರೆ ಹಣೆಯ ಮೇಲಿನ ಗುರುತುಗಳನ್ನು ತೆಗೆದುಹಾಕಬಹುದು.  
  • ಕೆಲವು ಹನಿ ಟೀ ಟ್ರೀ ಆಯಿಲ್(Tea Tree Oil) ಅನ್ನು ನೀರಿನಲ್ಲಿ ಬೆರೆಸಿ ಹತ್ತಿಯ ಸಹಾಯದಿಂದ ಹಣೆಯ ಮೇಲೆ ಹಚ್ಚಿ. ಇದು ಖಂಡಿತವಾಗಿಯೂ ನಿಮಗೆ ಸಹಕಾರಿಯಾಗುತ್ತದೆ. ಈ ಅಭ್ಯಾಸವವನ್ನು ರೂಢಿಸಿಕೊಂಡರೆ ನಿಮ್ಮ ಮುಖದ ಸೌಂದರ್ಯ ಫಳಫಳನೆ ಹೊಳೆಯುತ್ತದೆ.  
  • ಮೊಡವೆಗಳಿಗೆ ಮುಕ್ತಿ ನೀಡಲು ನಿಂಬೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ರಸದ ಕೆಲವು ಹನಿಗಳನ್ನು ನೇರವಾಗಿ ಹಣೆಯ ಮೇಲೆ ಲೇಪಿಸಿದರೆ, ನೀವು ಖಂಡಿತ ಪ್ರಯೋಜನ ಪಡೆಯುತ್ತೀರಿ. ಕೇವಲ 5 ನಿಮಿಷಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
  • ಕಲ್ಲಂಗಡಿ ಹಣ್ಣನ್ನು ರಾತ್ರಿ ಮಲಗುವ ಮುನ್ನ ಹಣೆಯ ಮೇಲೆ ಹಚ್ಚಿ(Clean Face) ಮತ್ತು ಬೆಳಿಗ್ಗೆ ಎದ್ದ ನಂತರ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮೊಡವೆಗಳೂ ಮಾಯವಾಗುತ್ತವೆ ಮತ್ತು ತ್ವಚೆಯೂ ಮೃದುವಾಗುತ್ತದೆ.
  • ಬೇಳೆ ಹಿಟ್ಟು ಮತ್ತು ಬಾದಾಮಿ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಒಂದು ಚಿಟಿಕೆ ಅರಿಶಿನ ಸೇರಿಸಿ ಮತ್ತು ನೀರನ್ನು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಹಣೆಯ ಮೇಲೆ 15 ನಿಮಿಷಗಳ ಕಾಲ ಹಚ್ಚಿದ ನಂತರ ತೊಳೆಯಿರಿ. ಇದು ನಿಮ್ಮ ಹಣೆಯ ಮೇಲೆ ಬೀಳುವ ಮೊಡವೆಗಳನ್ನು ಕಡಿಮೆ ಮಾಡುತ್ತದೆ.
  • ಇದರೊಂದಿಗೆ ವಾರಕ್ಕೊಮ್ಮೆ ಸ್ಕ್ರಬ್ ಸಹಾಯದಿಂದ ಮುಖವನ್ನು ಎಫ್ಫೋಲಿಯೇಟ್ ಮಾಡಿ. ಇದರಿಂದ ನಿಮಗೆ ಖಂಡಿತ ಲಾಭವಾಗಲಿದೆ.

ಇದನ್ನೂ ಓದಿ: Jaggery & Ghee : ತುಪ್ಪದ ಜೊತೆ ಬೆಲ್ಲ ಸೇವಿಸಿ, ಈ ಆರೋಗ್ಯ ಸಮಸ್ಯೆಗಳಿಂದ ದೂರವಿರಿ

(ಗಮನಿಸಿರಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇಲ್ಲಿನ ಮನೆಮದ್ದುಗಳು ಮತ್ತು ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ತಜ್ಞರನ್ನು ಸಂಪರ್ಕಿಸಿರಿ. Zee Kannada News ಇದನ್ನು ದೃಢಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News