ಹೆಚ್ಚಾಗಿ ಮೀನು ತಿನ್ನುವವರೇ ಎಚ್ಚರ! ಕ್ಯಾನ್ಸರ್ ಮತ್ತು ಬ್ರೈನ್ ಸ್ಟ್ರೋಕ್ ಸಾಧ್ಯತೆ!

ಮೀನಿಗೆ ಕ್ಯಾನ್ಸರ್ ನಂಟು: ಈಗ ಮೀನು ಕೂಡ ವಿಷಕಾರಿಯಾಗುತ್ತಿದೆ. ಒಂದು ಅಧ್ಯಯನದಲ್ಲಿ ಸರೋವರಗಳು ಮತ್ತು ನದಿಗಳ ನೀರು ಹೆಚ್ಚು ಕಲುಷಿತಗೊಂಡಿದೆ ಎಂದು ಕಂಡುಬಂದಿದೆ, ಇದರಿಂದಾಗಿ ಅದರಲ್ಲಿ ವಾಸಿಸುವ ಮೀನುಗಳು ಈಗ ವಿಷಕಾರಿಯಾಗುತ್ತಿವೆಯಂತೆ.

Written by - Puttaraj K Alur | Last Updated : Jan 24, 2023, 12:06 PM IST
  • ಹೆಚ್ಚಾಗಿ ಮೀನು ಸೇವಿಸುವವರೇ ಎಚ್ಚರ, ಕ್ಯಾನ್ಸರ್ ಮತ್ತು ಬ್ರೈನ್ ಸ್ಟ್ರೋಕ್ ಸಾಧ್ಯತೆ!
  • ಅನೇಕ ಆರೋಗ್ಯಕರ ಪ್ರಯೋಜನ ಹೊಂದಿರುವ ಮೀನು ಇದೀಗ ವಿಷವಾಗುತ್ತಿದೆ
  • ಕಲುಷಿತ ಸರೋವರ ಮತ್ತು ನದಿಗಳಲ್ಲಿ ವಾಸಿಸುವ ಮೀನು ಸಹ ವಿಷಕಾರಿಯಾಗಿವೆ
ಹೆಚ್ಚಾಗಿ ಮೀನು ತಿನ್ನುವವರೇ ಎಚ್ಚರ! ಕ್ಯಾನ್ಸರ್ ಮತ್ತು ಬ್ರೈನ್ ಸ್ಟ್ರೋಕ್ ಸಾಧ್ಯತೆ! title=
ಮೀನು ತಿನ್ನುವವರೇ ಎಚ್ಚರ!

ನವದೆಹಲಿ: ನೀವು ಆರೋಗ್ಯಕರ ಆಹಾರಕ್ರಮ ಅನುಸರಿಸಲು ಪ್ರಯತ್ನಿಸುತ್ತಿದ್ದರೆ, ಮೀನು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಮೀನುಗಳು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಇದಲ್ಲದೆ ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಮತ್ತು ಇತರ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ.

ಆದರೆ ನಾವೀಗ ಹೇಳುತ್ತಿರುವ ವಿಷಯ ಕೇಳಿದ್ರೆ ಮೀನು ತಿನ್ನಲು ಇಷ್ಟಪಡುವವರಿಗೆ ಶಾಕ್ ಆಗಬಹುದು. ಮೀನು ಸೇವಿಸಿದರೂ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆಯಂತೆ. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಮತ್ತು ಅಮೆರಿಕದ ಆಹಾರ ಹಾಗೂ ಔಷಧ ಆಡಳಿತದ ಜಂಟಿ ಅಧ್ಯಯನದಲ್ಲಿ, ಸರೋವರಗಳು ಮತ್ತು ನದಿಗಳ ನೀರು ಹೆಚ್ಚು ಕಲುಷಿತಗೊಂಡಿರುವುದು ಕಂಡುಬಂದಿದೆ. ಇವುಗಳಲ್ಲಿ ವಾಸಿಸುವ ಮೀನುಗಳು ಈಗ ವಿಷಕಾರಿಯಾಗುತ್ತಿವೆ. ಸಿಹಿನೀರಿನ ಮೀನುಗಳಲ್ಲಿ 278 ಬಾರಿ ಶಾಶ್ವತವಾಗಿ ರಾಸಾಯನಿಕ ಕಂಡುಬಂದಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ದೇಹದ ಈ ಭಾಗಕ್ಕೆ ಆಲಿವ್ ಎಣ್ಣೆ ಹಚ್ಚಿ, ಹಲವು ಆರೋಗ್ಯಕರ ಲಾಭ ನಿಮ್ಮದಾಗಿಸಿಕೊಳ್ಳಿ

ಫಾರೆವರ್ ಕೆಮಿಕಲ್ ಎಂದರೇನು?

Forever ರಾಸಾಯನಿಕವನ್ನು per-and-polyfluoroalkyl ವಸ್ತು ಎಂದೂ ಕರೆಯಲಾಗುತ್ತದೆ. ಛತ್ರಿ, ರೇನ್‌ಕೋಟ್‌ಗಳು, ಮೊಬೈಲ್ ಕವರ್‌ಗಳಂತಹ ನೀರು-ನಿರೋಧಕ ಬಟ್ಟೆಗಳಲ್ಲಿ ಸಾಮಾನ್ಯವಾಗಿ ಬಳಸುವ ರಾಸಾಯನಿಕ ಇದು. ಈ ರಾಸಾಯನಿಕವು ಹಾರ್ಮೋನುಗಳು ಮತ್ತು ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ ಥೈರಾಯ್ಡ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ನಂತಹ ಸಮಸ್ಯೆಗಳು ಉಂಟಾಗುತ್ತವೆ. ಫಾರೆವರ್ ಕೆಮಿಕಲ್‍ನಿಂದಾಗಿ ಮಹಿಳೆಯರಿಗೆ ಗರ್ಭಪಾತವಾಗುತ್ತದೆ ಅಥವಾ ಅವರ ಹೆರಿಗೆ ಅವಧಿಗೆ ಮುನ್ನವೇ ಆಗುತ್ತದೆ. ಇದರಿಂದಾಗಿ ಅವರ ಮಕ್ಕಳ ದೇಹ ಮತ್ತು ಮನಸ್ಸು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. 2017ರಲ್ಲಿ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ PFOA ಅನ್ನು ಮಾನವ ಕಾರ್ಸಿನೋಜೆನ್ ಎಂದು ಸ್ಪಷ್ಟವಾಗಿ ಕರೆದಿದೆ, ಅಂದರೆ ಕ್ಯಾನ್ಸರ್ (ಮೂತ್ರಪಿಂಡ ಮತ್ತು ವೃಷಣ ಕ್ಯಾನ್ಸರ್) ಅಪಾಯವಿದೆ ಎಂದು ಹೇಳಲಾಗಿದೆ.

ಸಾವಿರಾರು ಪಟ್ಟು ಹೆಚ್ಚು ರಾಸಾಯನಿಕ ಪತ್ತೆ

ಅಮೆರಿಕದ ನದಿಗಳು ಮತ್ತು ಸರೋವರಗಳಲ್ಲಿ 3 ವರ್ಷಗಳ ಸಂಶೋಧನೆಯ ನಂತರ ಈ ರಾಸಾಯನಿಕವು ಪ್ರಾಣಿಗಳಲ್ಲಿ 2,400 ಪಟ್ಟು ಹೆಚ್ಚು ಬರಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ. ಉದಾಹರಣೆಗೆ ತಿಂಗಳಿಗೊಮ್ಮೆ ಮೀನುಗಳನ್ನು ಸೇವಿಸಿದರೆ, ನೀವು ತಿಂಗಳಾದ್ಯಂತ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳಿಂದ ತುಂಬಿದ ನೀರನ್ನು ಕುಡಿಯುತ್ತಿದ್ದೀರಿ ಎಂದು ಅರ್ಥೈಸಿಕೊಳ್ಳಿ. ಈ ಮಾದರಿಯು ಅಮೆರಿಕದ ಒಂದಲ್ಲ 48 ರಾಜ್ಯಗಳಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ನೀವು ಮಲಗುವ ಶೈಲಿ ನಿಮ್ಮ ವ್ಯಕ್ತಿತ್ವದ ಗುಟ್ಟು ಬಹಿರಂಗಪಡಿಸುತ್ತದೆ... ಎಚ್ಚರ!

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News