Basil Seeds: ತುಳಸಿ ಎಲೆಗಿಂತಲೂ ಬೀಜದಲ್ಲಿದೆ ಅದ್ಬುತ ಶಕ್ತಿ, ನಿತ್ಯ ಸೇವಿಸಿದರೆ ದೂರವಾಗಲಿದೆ ಸಮಸ್ಯೆ

ತೂಕ ಇಳಿಸುವುದರಿಂದ ಹಿಡಿದು, ರೋಗನಿರೋಧಕ ಶಕ್ತಿ ಹೆಚ್ಚುವವರೆಗೆ, ಯಾವುದೇ ರೀತಿಯ ಸೋಂಕಿನಿಂದ ರಕ್ಷಣೆ ಪದೆಯುವವರೆಗೆ ತುಳಸಿ ಬೀಜಗಳ ಸೇವನೆಯು ಪರಿಣಾಮಕಾರಿಯಾಗಿದೆ. 

Written by - Ranjitha R K | Last Updated : Dec 2, 2021, 01:01 PM IST
  • ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಬೀಜ ಸಹಾಯ ಮಾಡುತ್ತದೆ
  • ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ
  • ತೂಕ ಕಡಿಮೆ ಮಾಡುವಲ್ಲಿ ಸಹಕಾರಿ
Basil Seeds:  ತುಳಸಿ ಎಲೆಗಿಂತಲೂ ಬೀಜದಲ್ಲಿದೆ ಅದ್ಬುತ ಶಕ್ತಿ, ನಿತ್ಯ ಸೇವಿಸಿದರೆ ದೂರವಾಗಲಿದೆ ಸಮಸ್ಯೆ title=
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಬೀಜ ಸಹಾಯ ಮಾಡುತ್ತದೆ (file photo)

ನವದೆಹಲಿ : Basil Seeds Benefits: ತುಳಸಿ ಎಲೆಗಳ ಪ್ರಯೋಜನಗಳನ್ನು (Benefits of tulsi leaves) ಸೇವಿಸುವುದರಿಂದ ಆಗುವ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ಆದರೆ ತುಳಸಿ ಎಲೆ ಮಾತ್ರ ಅಲ್ಲ ಬೀಜಗಳ ಸೇವನೆಯು ಕೂಡಾ ಆರೋಗ್ಯಕ್ಕೆ (Basil seeds health benefits) ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ತೂಕ ಇಳಿಸುವುದರಿಂದ ಹಿಡಿದು, ರೋಗನಿರೋಧಕ ಶಕ್ತಿ (immunity) ಹೆಚ್ಚುವವರೆಗೆ, ಯಾವುದೇ ರೀತಿಯ ಸೋಂಕಿನಿಂದ ರಕ್ಷಣೆ ಪದೆಯುವವರೆಗೆ ತುಳಸಿ ಬೀಜಗಳ ಸೇವನೆಯು ಪರಿಣಾಮಕಾರಿಯಾಗಿದೆ. ತುಳಸಿಯಲ್ಲಿರುವ ಔಷಧೀಯ ಗುಣಗಳು ಅನೇಕ ರೋಗಗಳನ್ನು ದೂರವಿಡುತ್ತವೆ.

ರೋಗ ನಿರೋಧಕ ಶಕ್ತಿಗಾಗಿ :
ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಹೊರತಾಗಿ, ತುಳಸಿ ಬೀಜಗಳು  ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ, ಇದು ಫ್ರೀ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಈ ಬೀಜಗಳಲ್ಲಿ ಫ್ಲೇವನಾಯ್ಡ್ ಮತ್ತು ಫೀನಾಲಿಕ್ ಅಂಶವಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುತ್ತದೆ. ಶೀತ ಮತ್ತು ಜ್ವರದ ಸಮಸ್ಯೆಯಲ್ಲಿ ತುಳಸಿ ಕಾಳುಗಳ (tulsi seeds benefits) ಕಷಾಯವನ್ನು ಕುಡಿಯುವುದು ಅಥವಾ ಚಹಾವನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : Winters : ಚಳಿಗಾಲದಲ್ಲಿ ಎಷ್ಟು ಗ್ಲಾಸ್ ನೀರು ಕುಡಿಯಬೇಕು? ಇಲ್ಲದಿದ್ದರೆ, ತಪ್ಪಿದಲ್ಲ ಈ ಸಮಸ್ಯೆಗಳು!

ಹೊಟ್ಟೆಯ ಸಮಸ್ಯೆಗಳು :
ತುಳಸಿ ಕಾಳುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ (digestion) ಸರಿಯಾಗಿರುತ್ತದೆ. ಇದು ಮಲಬದ್ಧತೆ, ಅಸಿಡಿಟಿ ಅಥವಾ ಅಜೀರ್ಣ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅದರ ಬೀಜಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಹಾಕಿ ನಂತರ ಈ ನೀರನ್ನು (benefits of tulsi seeds) ಸೇವಿಸಿ. ಇದರಿಂದ ಪ್ರಯೋಜನವಾಗಲಿದೆ.

ತೂಕ ನಷ್ಟದಲ್ಲಿ ಪರಿಣಾಮಕಾರಿ :
ತುಳಸಿ ಬೀಜಗಳ ಸೇವನೆಯು ತೂಕ ನಷ್ಟಕ್ಕೆ (weight loss) ತುಂಬಾ ಪ್ರಯೋಜನಕಾರಿ. ತುಳಸಿ ಬೀಜಗಳಲ್ಲಿ ಅತಿ ಕಡಿಮೆ ಪ್ರಮಾಣದ  ಕ್ಯಾಲೋರಿಗಳಿವೆ. ಮತ್ತು ಕಡಿಮೆ ಫೈಬರ್ ನಿಂದ ಕೂಡಿದೆ. ಇದನ್ನು ತಿನ್ನುವುದರಿಂದ, ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಹೀಗಾಗಿ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತುಳಸಿ ಬೀಜಗಳಿಂದ ಗ್ರೀನ್ ಟೀ ಯನ್ನು (green tea) ತಯಾರಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಪ್ರಯೋಜನವಾಗುತ್ತದೆ. 

ಇದನ್ನೂ ಓದಿ : Milk Side Effects: ಖಾಲಿ ಹೊಟ್ಟೆಗೆ ಹಾಲು ಕುಡಿಯುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ, ಈ ಸಮಸ್ಯೆಗಳನ್ನು ಹೆಚ್ಚಿಸಬಹುದು

ಒತ್ತಡ ದೂರವಾಗುತ್ತದೆ :
ತುಳಸಿ ಬೀಜಗಳ ಸೇವನೆಯು ಒತ್ತಡವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.  ಇದು ಒತ್ತಡವನ್ನು ನಿವಾರಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News