Banana Peel: ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಹೊಳೆಯುವ ಚರ್ಮದ ರಹಸ್ಯ, ಅದನ್ನು ಈ ರೀತಿ ಬಳಸಿ

Banana Peel Benefits: ಆರೋಗ್ಯಕ್ಕೆ ಬಾಳೆಹಣ್ಣು ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಬಾಳೆಹಣ್ಣು ಮಾತ್ರವಲ್ಲ ಬಾಳೆಹಣ್ಣಿನ ಸಿಪ್ಪೆ ಕೂಡ ಬಹಳ ಪ್ರಯೋಜನಕಾರಿ ಆಗಿದೆ.

Written by - Yashaswini V | Last Updated : Sep 28, 2021, 12:30 PM IST
  • ಬಾಳೆಹಣ್ಣಿನಂತೆ ಅದರ ಸಿಪ್ಪೆಯೂ ಬಹಳ ಪ್ರಯೋಜನಕಾರಿ
  • ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡುವುದರಿಂದಲೂ ಹೊಳೆಯುವ ಚರ್ಮವನ್ನು ಪಡೆಯಬಹುದಾಗಿದೆ
  • ಹೊಳೆಯುವ ಚರ್ಮವನ್ನು ಪಡೆಯಲು ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ತಯಾರಿಸಿ ಬಳಸುವುದು ಕೂಡ ಒಳ್ಳೆಯ ಮಾರ್ಗವಾಗಿದೆ
Banana Peel: ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಹೊಳೆಯುವ ಚರ್ಮದ ರಹಸ್ಯ, ಅದನ್ನು ಈ ರೀತಿ ಬಳಸಿ title=
Banana Peel Benefits- ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಬಾಳೆಹಣ್ಣಿನ ಸಿಪ್ಪೆ

ಬೆಂಗಳೂರು: Banana Peel Benefits- ಆರೋಗ್ಯಕ್ಕೆ ಬಾಳೆಹಣ್ಣು ಬಹಳ ಪ್ರಯೋಜನಕಾರಿ ಆಗಿದೆ. ಹಾಗಾಗಿಯೇ ಮನೆಯಲ್ಲಿ ಹಿರಿಯರು ಊಟ ಆದ ನಂತರ ಬಾಳೆಹಣ್ಣನ್ನು ಸೇವಿಸಲು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಬಾಳೆಹಣ್ಣನ್ನು ತಿನ್ನುವಾಗ ನಾವು ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಬಾಳೆಹಣ್ಣಿನಂತೆ ಅದರ ಸಿಪ್ಪೆಯೂ ಬಹಳ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಬಾಳೆಹಣ್ಣಿನ ಸಿಪ್ಪೆಯು ಮುಖದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಇದು ಚರ್ಮದ ಸುಕ್ಕುಗಳು,  ನಸುಕಂದು ಮಚ್ಚೆಗಳು ಮುಂತಾದ ಅಕಾಲಿಕ ವಯಸ್ಸಾದ ಚಿಹ್ನೆಗಳನ್ನು ತೊಡೆದುಹಾಕಲು ಸಹ ಉಪಯುಕ್ತವಾಗಿರುತ್ತದೆ.  ಆದ್ದರಿಂದ, ಮುಂದಿನ ಬಾರಿ ಬಾಳೆಹಣ್ಣು ತಿಂದ ನಂತರ, ಅದರ ಸಿಪ್ಪೆಯನ್ನು ಎಸೆಯಬೇಡಿ. ಬದಲಾಗಿ, ಅದನ್ನು ನಿಮ್ಮ ಕಾಂತಿಯುತ ತ್ವಚೆಯನ್ನು ಪಡೆಯಲು ಬಳಸಿ. ಕಾಂತಿಯುತ ತ್ವಚೆ ಪಡೆಯಲು ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆ ಬಳಸುವುದು ಎಂದು ತಿಳಿಯೋಣ...

ನಿಮಗೆ ಹೆಚ್ಚು ಸಮಯ ಇಲ್ಲದಿದ್ದರೆ ಬಾಳೆಹಣ್ಣಿನ ಸಿಪ್ಪೆಯನ್ನು ಮುಖದ (Banana Peel Benefits For Skin) ಮೇಲೆ ಉಜ್ಜಿ ಮಸಾಜ್ ಮಾಡಿ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆ ನಿವಾರಣೆ ಆಗುತ್ತದೆ. ಇದಲ್ಲದೆ ನಿಮ್ಮ ಕೈ,  ಸಹ ಚರ್ಮದ ಮೇಲೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡುವುದರಿಂದಲೂ ಹೊಳೆಯುವ ಚರ್ಮವನ್ನು ಪಡೆಯಬಹುದಾಗಿದೆ. 

ಇದನ್ನೂ ಓದಿ- Skin Hair Removal Remedies: ಮುಖದ ಅನಗತ್ಯ ಕೂದಲನ್ನು ತೆಗೆದುಹಾಕಲು, ಈ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ

ಇದಲ್ಲದೆ ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಮಾಸ್ಕ್ (Banana Peel Face Mask) ರೀತಿಯಲ್ಲಿ ಮುಖಕ್ಕೆ ಹಚ್ಚಬಹುದು. ಹೊಳೆಯುವ ಚರ್ಮವನ್ನು ಪಡೆಯಲು ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ತಯಾರಿಸಿ ಬಳಸುವುದು ಕೂಡ ಒಳ್ಳೆಯ ಮಾರ್ಗವಾಗಿದೆ.

ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಪದಾರ್ಥಗಳು:-
* ಬಾಳೆಹಣ್ಣಿನ ಸಿಪ್ಪೆ
* 2 ಚೆನ್ನಾಗಿ ಮಾಗಿದ ಬಾಳೆಹಣ್ಣು
* 2 ಟೀಸ್ಪೂನ್ ಹಾಲು
* 1 ಟೀಚಮಚ ಜೇನುತುಪ್ಪ 

ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ?
>> ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು (Banana Peel For Skin) ಸಣ್ಣಗೆ ಕತ್ತರಿಸಿ ಮಿಕ್ಸಿಗೆ ಹಾಕಿ.
>> ಇದರ ನಂತರ, ಎರಡು ಮಾಗಿದ ಬಾಳೆಹಣ್ಣನ್ನು ಅದಕ್ಕೆ ಸೇರಿಸಿ.
>> ಅದೇ ಸಮಯದಲ್ಲಿ, 2 ಟೀಸ್ಪೂನ್ ಹಾಲು ಮತ್ತು 1 ಟೀಚಮಚ ಜೇನುತುಪ್ಪವನ್ನು ಸೇರಿಸಿ.
>> ಈ ಎಲ್ಲಾ ವಸ್ತುಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಪೇಸ್ಟ್ ಮಾಡಿ.
>> ನುಣ್ಣಗೆ ರುಬ್ಬಿಕೊಂಡಿರುವ ಈ ಪೇಸ್ಟ್ ಅನ್ನು ಪಾತ್ರೆಗೆ ಹಾಕಿ 10 ನಿಮಿಷಗಳ ಕಾಲ ಫ್ರಿಜ್ ನಲ್ಲಿಡಿ.
>> ನಂತರ ಪೇಸ್ಟ್ ಅನ್ನು ಫ್ರಿಜ್ ನಿಂದ ಹೊರತೆಗೆಯಿರಿ. ಬಳಿಕ ಮೊದಲಿಗೆ ಫೇಸ್ ವಾಶ್ ನಿಂದ ಮುಖವನ್ನು ಸ್ವಚ್ಛಗೊಳಿಸಿ ಮತ್ತು ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಸಮವಾಗಿ ಹಚ್ಚಿ.
>> ಪೇಸ್ಟ್ ಡ್ರೈ ಆದ ನಂತರ, ಕರವಸ್ತ್ರವನ್ನು ತೇವಗೊಳಿಸುವ ಮೂಲಕ ಪೇಸ್ಟ್ ಅನ್ನು ಒರೆಸಿ ಅಥವಾ ಸಾಮಾನ್ಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.

ಇದನ್ನೂ ಓದಿ- Diabetes: ಮಧುಮೇಹ ರೋಗಿಗಳು ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಹೆಚ್ಚಿನ ಪ್ರಯೋಜನ ಪಡೆಯಿರಿ

ಬಾಳೆಹಣ್ಣಿನ ಸಿಪ್ಪೆಯ ಈ ಫೇಸ್ ಪ್ಯಾಕ್ ಅನ್ನು ವಾರದಲ್ಲಿ ಮೂರು ಬಾರಿ ಬಳಸಬಹುದು. ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಿಮ್ಮ ಚರ್ಮವನ್ನು ಯಂಗ್ ಆಗಿ ಮಾಡುತ್ತದೆ. ಇದರೊಂದಿಗೆ, ಈ ಫೇಸ್ ಪ್ಯಾಕ್ ಎಲ್ಲಾ ರೀತಿಯ ಚರ್ಮದ ಮೇಲೆ (ಎಣ್ಣೆಯುಕ್ತ, ಒಣ ಅಥವಾ ಸಂಯೋಜನೆಯ ಚರ್ಮ) ಕೆಲಸ ಮಾಡುತ್ತದೆ. ಜೊತೆಗೆ ಈ ಮನೆ ಮದ್ದಿನಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಉಂಟಾಗುವುದಿಲ್ಲ.

ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News