Bad Habits: ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ

Bad Habits - ಯಾರ ಮೇಲೆ ದೇವಿ ಲಕ್ಷ್ಮಿ (Goddess Lakshmi) ಕೃಪೆ ಬೀರುತ್ತಾಳೋ ಅವರಿಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ. ಆದರೆ, ಇನ್ನೊಂದೆಡೆ ಒಂದು ವೇಳೆ ದೇವಿ ಲಕ್ಷ್ನಿ ಮುನಿಸಿಕೊಂಡರೆ ಅತ್ಯಂತ ಧನಿಕರು ಕೂಡ ಬಡವರಾಗಲು ಸಮಯ ಬೇಕಾಗುವುದಿಲ್ಲ.

Written by - Nitin Tabib | Last Updated : Jan 17, 2022, 08:19 PM IST
  • ಮನೆಯಲ್ಲಿ ದರಿದ್ರತೆ ನೆಲೆಸುತ್ತದೆ.
  • ದೇವಿ ಲಕುಮಿ ಮುನಿಸಿ ಕೊಳ್ಳುತ್ತಾಳೆ.
  • ಮನೆ ಬಿಟ್ಟು ಹೊರಟು ಹೋಗುತ್ತಾಳೆ ಲಕ್ಷ್ಮಿ
Bad Habits: ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ  title=
Bad Habits (File Photo)

Beware Of These Bad Habits - ಲಕ್ಷ್ಮಿಯ ಅನುಗ್ರಹವಿಲ್ಲದೆ ಜೀವನದಲ್ಲಿ ಆರ್ಥಿಕ ಪ್ರಗತಿ (Financial Growth) ಸಾಧ್ಯವಿಲ್ಲ. ತಾಯಿ ಲಕ್ಷ್ಮಿ ಚಂಚಲ ಸ್ವಭಾವದವಳು. ಯಾಕೆಂದರೆ ಅವಳು ಎಲ್ಲಾ ಸಮಯದಲ್ಲೂ ಎಲ್ಲರ ಬಳಿ ಇರುವುದಿಲ್ಲ. ತಾಯಿ ಲಕ್ಷ್ಮಿ ಯಾರ ಬಳಿ ಇರುತ್ತಾಳೋ (When Goddess Lakshmi Happy) ಅವರ ಬಳಿ ಸಿರಿ-ಸಂಪತ್ತಿನ (Richness) ಕೊರತೆ ಇರುವುದಿಲ್ಲ.  ಮತ್ತೊಂದೆಡೆ, ಲಕ್ಷ್ಮಿ ಒಂದು ವೇಳೆ ಮುನಿಸಿಕೊಂಡರೆ, ಧನಿಕರು ಕೂಡ ಬಡವರಾಗಲು ಸಮಯ ಬೇಕಾಗುವುದಿಲ್ಲ. ನಮ್ಮ ಧರ್ಮ ಶಾಸ್ತ್ರಗಳಲ್ಲಿ ಕೆಲ ಕಾರ್ಯಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ಕಾರ್ಯಗಳನ್ನು ಮಾಡಿದರೆ ಲಕ್ಷ್ಮಿ ಮನೆ ತೊರೆಯುತ್ತಾಳೆ. ಹಾಗಾದರೆ ಬನ್ನಿ ಯಾವ ತಪ್ಪುಗಳು ಲಕ್ಷ್ಮಿ ಮುನಿಸಿಗೆ ಕಾರಣವಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

>> ಸಾಮಾನ್ಯವಾಗಿ ಜನರು ಮನೆಗಳಲ್ಲಿ ಮುಸರಿ ಪಾತ್ರೆಗಳನ್ನು ಇಡುವುದನ್ನು ನೀವು ನೋಡಿರಬಹುದು. ಹೆಚ್ಚಿನ ಮನೆಗಳಲ್ಲಿ ಊಟದ ನಂತರ ಮುಸುರಿ ಪಾತ್ರೆಗಳನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ಇದನ್ನು ಧರ್ಮಗ್ರಂಥಗಳಲ್ಲಿ ಅನುಚಿತವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು (Goddess Lakshmi) ಕೋಪಗೊಳ್ಳುತ್ತಾಳೆ. ಇದರ ಪರಿಣಾಮಗಳನ್ನು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

>> ಉತ್ತರ ದಿಕ್ಕಿನ ಅಧಿಪತಿ ಕುಬೇರ(Kuber), ಸಂಪತ್ತಿನ ದೇವರು. ಈ ಸ್ಥಳವನ್ನು ತಾಯಿಯ ಸ್ಥಳವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸ್ಥಳದಲ್ಲಿ ಕಸ ಅಥವಾ ಜಂಕ್ ಅನ್ನು ಇಡಬಾರದು. ಈ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿರುಪಯುಕ್ತ ವಸ್ತುಗಳನ್ನು ಈ ದಿಕ್ಕಿಗೆ ಇಟ್ಟರೆ ಕುಬೇರನ ಜೊತೆಗೆ ತಾಯಿ ಲಕ್ಷ್ಮಿಯೂ ಕೋಪಗೊಂಡು ಮನೆ ಬಿಟ್ಟು ಹೋಗುತ್ತಾಳೆ.

>> ಮನೆಯ ಅಡುಗೆ ಮನೆಯಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ, ಖಾಲಿ ಅಥವಾ ಎಂಜಲು ಪಾತ್ರೆಗಳನ್ನು ಅಲ್ಲಿ ಇಡಬಾರದು. ಅಡುಗೆಮನೆಯಲ್ಲಿ ಒಲೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಇದು ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಶಾಸ್ತ್ರಗಳ ಪ್ರಕಾರ, ಒಲೆಯ ಮೇಲೆ ಖಾಲಿ ಅಥವಾ ಎಂಜಲು ಅಥವಾ ಮುಸುರಿ ಪಾತ್ರೆಗಳನ್ನು ಇಡುವುದು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ ಮತ್ತು ಬಡತನವಿರುವಲ್ಲಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ.

>> ಸೂರ್ಯಾಸ್ತದ ಸಮಯದಲ್ಲಿ ಮನೆಯಲ್ಲಿ ಕಸ ಗೂಡಿಸಬಾರದು. ಈ ಸಮಯದಲ್ಲಿ, ಮನೆಯನ್ನು ಗುಡಿಸುವುದರಿಂದ, ದುರದೃಷ್ಟದ ನೆರಳು ಜೀವನದ ಮೇಲೆ ಸುಳಿದಾಡಲು ಪ್ರಾರಂಭಿಸುತ್ತದೆ. ಇದರ ಜೊತೆಗೆ ತಾಯಿ ಲಕ್ಷ್ಮಿ ಕೂಡ ಕೋಪಗೊಂಡು ಮನೆಯಿಂದ ಹೊರಟು ಹೋಗುತ್ತಾಳೆ.

ಇದನ್ನೂ ಓದಿ-Shani Asta 2022: ಶೀಘ್ರದಲ್ಲಿಯೇ ಶನಿ ಅಸ್ತನಾಗಲಿದ್ದಾನೆ, ಈ ನಾಲ್ಕು ರಾಶಿಗಳ ಜನರ ನೌಕರಿ-ವ್ಯಾಪಾರದಲ್ಲಿ ಭಾರಿ ಕಷ್ಟ ಎದುರಾಗಲಿದೆ

>> ಶ್ರೀಗಂಧವನ್ನು ಒಂದು ಕೈಯಿಂದ ಉಜ್ಜಬಾರದು. ಏಕೆಂದರೆ ಇದನ್ನು ಮಾಡುವುದರಿಂದ ನಾರಾಯಣನು ನಿಮ್ಮನ್ನು ಬಡವನನ್ನಾಗಿ ಮಾಡುತ್ತಾನೆ. ಇದರೊಂದಿಗೆ, ದೇವಿ ಲಕ್ಷ್ಮಿ ಕೂಡ ಕೋಪಗೊಳ್ಳುತ್ತಾಳೆ (When Goddess Lakshmi Angry), ಇದರಿಂದಾಗಿ ಜೀವನದಲ್ಲಿ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಶ್ರೀಗಂಧವನ್ನು ಎರಡೂ ಕೈಗಳಿಂದ ಉಜ್ಜಿದ ನಂತರ, ಅದನ್ನು ಒಂದು ಪಾತ್ರೆಯಲ್ಲಿ ಇರಿಸಿ. ಬಳಿಕ ಅದನ್ನು ದೇವ ಅಥವಾ ದೇವತೆಯನ್ನು ಹಚ್ಚಿ.

ಇದನ್ನೂ ಓದಿ-ನೀವು ಬಿಸಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುತ್ತೀರಾ? ಮೊದಲು ಈ ವಿಷಯ ತಿಳಿಯಿರಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-ರಾಶಿಗನುಗುಣವಾಗಿ ನಿಮ್ಮ ಜೊತೆಗಿರಲಿ ಈ ನಾಣ್ಯಗಳು, ಆಗುವುದು ಭಾರೀ ಧನ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News