ನವದೆಹಲಿ: ಜ್ಯೋತಿಷ್ಯದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ರಾಶಿಯಿಂದ ಸ್ವಲ್ಪ ಮಟ್ಟಿಗೆ ಪ್ರಭಾವಿತನಾಗಿರುತ್ತಾನೆ. ರಾಶಿಯಿಂದಲೇ ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ತಿಳಿಯಬಹುದು. ಉದಾಹರಣೆಗೆ ಕೆಲವರು ತುಂಬಾ ಭಾವನಾತ್ಮಕರು, ಕೆಲವರು ಪ್ರಾಯೋಗಿಕರು, ಕೆಲವರು ಬುದ್ಧಿವಂತರು ಮತ್ತು ಕೆಲವರು ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಂತೆಯೇ ಕೆಲವರು ಇತರರ ತಪ್ಪುಗಳನ್ನು ಸುಲಭವಾಗಿ ಕ್ಷಮಿಸುತ್ತಾರೆ, ಆದರೆ ಕೆಲವರು ಕೊನೆಯ ಉಸಿರು ಇರುವವರೆಗೂ ದ್ವೇಷವನ್ನು ಉಳಿಸಿಕೊಳ್ಳುತ್ತಾರೆ. ಇಂದು ಅಂತಹ ರಾಶಿಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ.
ಈ ರಾಶಿಯ ಜನರು ಶತ್ರುತ್ವ ಹೊಂದಿರುತ್ತಾರೆ!
ಮೇಷ ರಾಶಿ: ಮೇಷ ರಾಶಿಯ ಜನರು ತುಂಬಾ ಅಹಂಕಾರಿಗಳಾಗಿರುತ್ತಾರೆ. ಇವರು ಯಾವಾಗಲೂ ತಮ್ಮನ್ನು ತಾವು ಇತರರಿಗಿಂತ ಉತ್ತಮರೆಂದು ಹೇಳಿಕೊಳ್ಳುತ್ತಾರೆ. ಈ ಕಾರಣದಿಂದ ಇವರು ಅನೇಕ ಬಾರಿ ಸೋಲು ಕಾಣುತ್ತಾರೆ ಮತ್ತು ತಮ್ಮ ಸಂಬಂಧಗಳನ್ನು ಹಾಳುಮಾಡಿಕೊಳ್ಳುತ್ತಾರೆ. ಆದರೆ ಈ ಜನರು ಯಾವುದೇ ಸಂದರ್ಭದಲ್ಲಿ ಇತರರೊಂದಿಗೆ ಸ್ಪರ್ಧಿಸುವುದಿಲ್ಲ. ಈ ಕಾರಣದಿಂದ ಅವರು ತಮ್ಮ ಮನಸ್ಸಿನಲ್ಲಿ ದ್ವೇಷವನ್ನು ಹೊಂದಿರುತ್ತಾರೆ ಮತ್ತು ಸೇಡು ತೀರಿಸಿಕೊಳ್ಳುವ ಮನೋಭಾವ ಇಟ್ಟುಕೊಂಡಿರುತ್ತಾರೆ.
ಇದನ್ನೂ ಓದಿ: ಜೂನ್ ತಿಂಗಳಲ್ಲಿ ಜನಿಸಿದ ಈ ಎರಡು ʼರಾಶಿʼಯವರ ವ್ಯಕ್ತಿತ್ವ ಹೇಗಿರುತ್ತೆ..! ತಿಳಿಯಿರಿ
ಸಿಂಹ ರಾಶಿ: ಸಿಂಹ ರಾಶಿಯವರು ಯಾರ ಮೇಲೂ ಕೋಪ ಮಾಡಿಕೊಳ್ಳುವುದಿಲ್ಲ, ಅನಗತ್ಯವಾಗಿ ಜಗಳವಾಡುವುದಿಲ್ಲ. ಆದರೆ ಇವರ ವಿಷಯದಲ್ಲಿ ಯಾರಾದರೂ ಮಧ್ಯಪ್ರವೇಶಿಸಿದರೆ ತುಂಬಾ ಕೋಪಗೊಳ್ಳುತ್ತಾನೆ. ಇವರು ಯಾರನ್ನಾದರೂ ಶತ್ರು ಎಂದು ಪರಿಗಣಿಸಿದರೆ, ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ಸೇಡು ತೀರಿಸಿಕೊಳ್ಳಲು ಇವರು ಯಾವುದೇ ಹಂತಕ್ಕೂ ಹೋಗುತ್ತಾರೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ತುಂಬಾ ಸ್ವಾರ್ಥಿಗಳಾಗಿರುತ್ತಾರೆ ಮತ್ತು ತಮ್ಮ ಸ್ವಂತ ವ್ಯವಹಾರವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಆದರೆ ಯಾರೊಂದಿಗಾದರೂ ಕೋಪಗೊಂಡಾಗ, ಅವರು ಸೇಡು ತೀರಿಸಿಕೊಳ್ಳಲು ಎಲ್ಲಾ ಇತಿ-ಮಿತಿಗಳನ್ನು ದಾಟುತ್ತಾರೆ. ಇಷ್ಟು ಮಾತ್ರವಲ್ಲದೆ ತಮ್ಮ ಶತ್ರುಗಳಿಗೆ ಹಲವು ಬಾರಿ ಹಾನಿಯನ್ನುಂಟುಮಾಡುತ್ತಾರೆ. ಹೀಗಾಗಿ ಇಂತಹವರಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.
ಧನು ರಾಶಿ: ಧನು ರಾಶಿಯವರು ಯಾರ ಮೇಲಾದರೂ ಸೇಡು ತೀರಿಸಿಕೊಳ್ಳುತ್ತಾರೆ. ಇವರು ಸುಖಾ-ಸುಮ್ಮನೇ ಕೋಪಗೊಳ್ಳುತ್ತಾರೆ. ಇವರು ತಕ್ಷಣವೇ ಸೇಡು ತೀರಿಸಿಕೊಳ್ಳುತ್ತಾರೆ. ಈ ಜನರು ಕೆಲವೇ ಜನರೊಂದಿಗೆ ಸ್ನೇಹ ಬೆಳೆಸುತ್ತಾರೆ. ಇವರು ತಮ್ಮ ಕೆಲಸ ಮತ್ತು ವೃತ್ತಿಯ ಮೇಲೆ ಮಾತ್ರ ಗಮನ ಹರಿಸುತ್ತಾರೆ.
ಇದನ್ನೂ ಓದಿ: ನಿಮ್ಮ ಲವರ್ ಹತ್ರ ಈ ಗುಣಗಳಿದ್ರೆ ಮದುವೆ ಆಗಿ ಬಿಡಿ..! ತಡ ಮಾಡಬೇಡಿ..
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.