Tulsi Face Pack : ಕೆಲವೇ ದಿನಗಳಲ್ಲಿ ಪಡೆಯಬಹುದು ಹೊಳೆಯುವ ತ್ವಚೆ , ಈ ರೀತಿ ಬಳಸಿ ತುಳಸಿ ಪ್ಯಾಕ್

Tulsi Face Pack: ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಪ್ರಾಮುಖ್ಯತೆ ಇದೆ. ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ ತುಳಸಿ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ತುಳಸಿಯ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲೂ ಹೇಳಲಾಗಿದೆ. 

Written by - Ranjitha R K | Last Updated : Jul 21, 2021, 09:06 PM IST
  • ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಪ್ರಾಮುಖ್ಯತೆ ಇದೆ.
  • ತುಳಸಿಯ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲೂ ಹೇಳಲಾಗಿದೆ.
  • ತುಳಸಿ ಚರ್ಮದ ಸಮಸ್ಯೆಗಳಿಗೂ ವರದಾನವಾಗಿದೆ.
Tulsi Face Pack : ಕೆಲವೇ ದಿನಗಳಲ್ಲಿ ಪಡೆಯಬಹುದು ಹೊಳೆಯುವ ತ್ವಚೆ , ಈ ರೀತಿ ಬಳಸಿ ತುಳಸಿ ಪ್ಯಾಕ್  title=
ತುಳಸಿ ಚರ್ಮದ ಸಮಸ್ಯೆಗಳಿಗೂ ವರದಾನವಾಗಿದೆ. (photo india.com)

ನವದೆಹಲಿ:  Tulsi Face Pack: ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಪ್ರಾಮುಖ್ಯತೆ ಇದೆ. ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ ತುಳಸಿ ಆರೋಗ್ಯಕ್ಕೂ (Tulsi benefits) ಬಹಳ ಪ್ರಯೋಜನಕಾರಿಯಾಗಿದೆ. ತುಳಸಿಯ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲೂ ಹೇಳಲಾಗಿದೆ. ತುಳಸಿಯಲ್ಲಿ  ಆಂಟಿ-ಆಕ್ಸಿಡೆಂಟ್ ಗುಣಗಳಿವೆ. ಅನೇಕ ರೋಗಗಳಿಗೆ ಔಷಧಿಯಾಗಿ ತುಳಸಿಯನ್ನು ಬಳಸುತ್ತಾರೆ.  ತುಳಸಿ ಚರ್ಮದ ಸಮಸ್ಯೆಗಳಿಗೂ ವರದಾನವಾಗಿದೆ. ಮುಖದ ಮೊಡವೆ ಮತ್ತು ಗುಳ್ಳೆಗಳನ್ನು ತೆಗೆದುಹಾಕಲು ತುಳಸಿ ಬಹಳ ಸಹಕಾರಿಯಾಗಿದೆ. 

ತುಳಸಿ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ?   
ಬೇಕಾಗುವ ಸಾಮಗ್ರಿಗಳು :  
ತುಳಸಿ ಎಲೆಗಳು (tulsi leaves)  - 20 ರಿಂದ 25
ಕಿತ್ತಳೆ ಸಿಪ್ಪೆ ಪುಡಿ - 1 ಟೀಸ್ಪೂನ್
ಶ್ರೀಗಂಧದ ಪುಡಿ - 1 ಟೀಸ್ಪೂನ್
ರೋಸ್ ವಾಟರ್ (Rose water)

ಇದನ್ನೂ ಓದಿ : Lemon Benefits For Face: ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣ ನಿಂಬೆ

ಫೇಸ್ ಪ್ಯಾಕ್ (face pack) ತಯಾರಿಸಲು, ತುಳಸಿ ಎಲೆಗಳ ಪೇಸ್ಟ್ ತಯಾರಿಸಬೇಕು. ಇದಕ್ಕಾಗಿ, ನೀವು ಕೆಲವು ಹನಿ ರೋಸ್ ವಾಟರ್ ಅನ್ನು ಹಾಕಿ ತುಳಸಿ ಎಳೆಯನ್ನು ಪೇಸ್ಟ್ ಮಾಡಿಕೊಳ್ಳಿ. ಈಗ ಅದರಲ್ಲಿ 1 ಟೀಸ್ಪೂನ್ ಕಿತ್ತಳೆ ಸಿಪ್ಪೆ ಪುಡಿಯನ್ನು ಬೆರೆಸಿ. ನಂತರ 1 ಟೀಸ್ಪೂನ್ ಶ್ರೀಗಂಧದ ಪುಡಿಯನ್ನು ಸೇರಿಸಿ. ಮತ್ತೆ ಅದಕ್ಕೆ ರೋಸ್ ವಾಟರ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. 

ತುಳಸಿ ಫೇಸ್ ಪ್ಯಾಕ್‌ನ ಪ್ರಯೋಜನಗಳು:
ತುಳಸಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಚರ್ಮದ ರಂಧ್ರಗಳಲ್ಲಿನ ಕೊಳಕು, ಡೆಡ್ ಸೇಲ್ ಗಳನ್ನೂ ತೆಗೆದು ಹಾಕುತ್ತದೆ. ಇದು ಚರ್ಮದ ಆಳಕ್ಕೆ (Skin care) ಹೋಗುವ ಮೂಲಕ ಕ್ರಮವನ್ನು ಸ್ವಚ್ಚಗೊಳಿಸುತ್ತದೆ. 

ಇದನ್ನೂ ಓದಿ : Side Effects Of Cashew: ನಿಮಗೂ ಈ ಸಮಸ್ಯೆಗಳಿದ್ದರೆ ಗೋಡಂಬಿಯಿಂದ ದೂರವಿರಿ

ಚರ್ಮದ ಮೇಲೆ ಗುಳ್ಳೆ ಮತ್ತು ಮೊಡವೆಗಳ ಆಳವಾದ ಗುರುತುಗಳು ಇದ್ದರೆ, ಅವುಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಇನ್ನು ಒಣ  ಚರ್ಮವಾಗಿದ್ದರೆ, ಪ್ಯಾಕ್ ತಯಾರಿಸುವಾಗ, ಅದಕ್ಕೆ ಅರ್ಧ ಟೀ ಚಮಚ ಜೇನುತುಪ್ಪವನ್ನು (Honey) ಬೆರೆಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News