ಈ ಕಾಳನ್ನು ಅರೆದು ಹಚ್ಚಿದರೆ ಬಿಳಿ ಕೂದಲು ನಿಮಿಷಗಳಲ್ಲಿ ಕಪ್ಪಾಗುವುದು!

Mustard Seeds For Premature White Hair:  ಬಿಳಿ ಕೂದಲಿಗೆ ಪರಿಹಾರ ಅಂದುಕೊಂಡು ರಾಸಾಯನಿಕ ಕಲರ್ ಗಳನ್ನು ಬಳಸುವ ಬದಲು ಕೂದಲನ್ನು ನೈಸರ್ಗಿಕವಾಗಿ ಕಪ್ಪು ಮಾಡಲು ಈ ಕಾಳನ್ನು ಬಳಸಿ.

Written by - Ranjitha R K | Last Updated : Sep 21, 2023, 09:45 AM IST
  • ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ಸಾಸಿವೆ ಕಾಳು
  • ಕೂದಲಿನ ಆರೋಗ್ಯದ ವಿಷಯದಲ್ಲಿ ಮ್ಯಾಜಿಕ್ ಮಾಡಬಲ್ಲದು ಸಾಸಿವೆ
  • ಸಾಸಿವೆ ಬೀಜಗಳನ್ನು ಹೇಗೆ ಬಳಸುವುದು?
ಈ ಕಾಳನ್ನು ಅರೆದು ಹಚ್ಚಿದರೆ ಬಿಳಿ ಕೂದಲು ನಿಮಿಷಗಳಲ್ಲಿ ಕಪ್ಪಾಗುವುದು! title=

Mustard Seeds For Premature White Hair : ಮಾಲಿನ್ಯ, ವಿಷಕಾರಿ ಪರಿಸರ, ಅನಾರೋಗ್ಯಕರ ಆಹಾರ, ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಮತ್ತು ರಾಸಾಯನಿಕ ಉತ್ಪನ್ನಗಳಿಂದ ನಮ್ಮ ಕೂದಲು ತುಂಬಾ ಹಾನಿಗೊಳಗಾಗುತ್ತದೆ.  ಇದರಿಂದಾಗಿ ಅದು ನಿರ್ಜೀವವಾಗಿ ಒಣಗಲು ಪ್ರಾರಂಭಿಸುತ್ತದೆ. 25 ರಿಂದ 30 ವರ್ಷ ವಯಸ್ಸಿನ ಯುವಕರ ತಲೆಯ ಮೇಲೆಯೇ ಬಿಳಿ ಕೂದಲು   ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಬಿಳಿ ಕೂದಲಿಗೆ ಪರಿಹಾರ ಅಂದುಕೊಂಡು ರಾಸಾಯನಿಕ ಕಲರ್ ಗಳನ್ನು ಬಳಸುವ ಬದಲು ಕೂದಲನ್ನು ನೈಸರ್ಗಿಕವಾಗಿ ಕಪ್ಪು ಮಾಡಲು ಈ ಕಾಳನ್ನು ಬಳಸಿ. ಇದರಿಂದ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರವೂ ಸಿಗುವುದು. 

ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ಸಾಸಿವೆ ಕಾಳು :
ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು, ಸಾಸಿವೆ ಬೀಜಗಳನ್ನು  ಬಳಸಬಹುದು. ಈ ಮೂಲಕ ಕೂದಲು ಬೇರುಗಳಿಂದ ಪೋಷಣೆಯನ್ನು ಪಡೆಯುತ್ತದೆ. ಅಲ್ಲದೆ, ಇದು ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲು ಮುಂತಾದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ. 

ಇದನ್ನೂ ಓದಿ : ಬಿಳಿ ಕೂದಲಿಗೆ ಬೆಸ್ಟ್ ಮನೆಮದ್ದುಗಳು: ಶಾಶ್ವತವಾಗಿ ಕಪ್ಪಾಗಲು ವಾರಕ್ಕೊಮ್ಮೆ ಇವುಗಳನ್ನು ಹಚ್ಚಿ!

ಮ್ಯಾಜಿಕ ಮಾಡುತ್ತದೆ ಸಾಸಿವೆ : 
ಕೂದಲಿನ ಆರೋಗ್ಯದ ವಿಷಯದಲ್ಲಿ ಸಾಸಿವೆ ಬೀಜಗಳು ಮ್ಯಾಜಿಕ್ ಮಾಡಬಲ್ಲದು. ಸಾಸಿವೆ ಬೀಜಗಳಲ್ಲಿ  ವಿಟಮಿನ್ ಎ ಕಂಡುಬರುತ್ತದೆ. ಇದು ನೆತ್ತಿಯನ್ನು ಪೋಷಿಸಲು ಮತ್ತು ಕೂದಲಿನ ಬೆಳವಣಿಗೆಗೆ  ಮತ್ತು ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶವಾಗಿದೆ.

ಇದಲ್ಲದೆ, ಸಾಸಿವೆ ಕಾಳುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ -3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಇದು ಕೂದಲನ್ನು ಬಲಪಡಿಸಲು ಮತ್ತು ಕಪ್ಪು ಬಣ್ಣವನ್ನು ಮರಳಿ ತರುವ  ಕೆಲಸ ಮಾಡುತ್ತದೆ. ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ. ಇದು ನೆತ್ತಿಯಲ್ಲಿ ಫ್ರೀ ರಾಡಿಕಲ್ ಚಟುವಟಿಕೆಗಳನ್ನು ತಡೆಯುತ್ತದೆ.

ಇದನ್ನೂ ಓದಿ : ಕೂದಲು ಬಿಳಿಯಾಗಲು ಇದೇ ಪ್ರಮುಖ ಕಾರಣ ! ಈ ವಿಟಮಿನ್ ಕೊರತೆ ನೀಗಿಸಿದರೆ ಸಾಕು ಬೇರೆ ಇನ್ನೇನೂ ಬೇಡ !

ಸಾಸಿವೆ ಬೀಜಗಳನ್ನು ಹೇಗೆ ಬಳಸುವುದು?
1. ಎಣ್ಣೆ ಬಳಸಿ:

ಸಾಸಿವೆಯಿಂದ ತೆಗೆದ ಎಣ್ಣೆ ಕೂದಲ ಆರೋಗ್ಯಕ್ಕೆ ಔಷಧಿಗಿಂತ ಕಡಿಮೆಯಿಲ್ಲ. ಮೊದಲನೆಯದಾಗಿ, ಎಣ್ಣೆಯನ್ನು ಬಿಸಿ ಮಾಡಿ ನಂತರ ಕೂದಲು ಮತ್ತು ನೆತ್ತಿಯ ಮೇಲೆ ಮಸಾಜ್ ಮಾಡಿ. ಇದು ಬೇರುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಕ್ರಮೇಣ ಕಪ್ಪಾಗಲು ಪ್ರಾರಂಭಿಸುತ್ತದೆ.

2. ಹೇರ್ ಮಾಸ್ಕ್ ತಯಾರಿಸಿ:
ಮೊದಲು ಸಾಸಿವೆಯನ್ನು ಒಣಗಿಸಿ ಪುಡಿಯನ್ನು ತಯಾರಿಸಿ. ಒಂದು  ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಸಾಸಿವೆ ಪುಡಿ ಮತ್ತು ಒಂದು ಮೊಟ್ಟೆಯನ್ನು ಮಿಶ್ರಣ ಮಾಡಿ. ಈಗ ಅದಕ್ಕೆ ತೆಂಗಿನೆಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಬೆರೆಸಿ ಹೇರ್ ಮಾಸ್ಕ್ ತಯಾರಿಸಿ ಅದನ್ನು ಕೂದಲಿಗೆ ಬೇರುಗಳಿಗೆ ಹಚ್ಚಿ. ಸ್ವಲ್ಪ ಸಮಯದ ನಂತರ ಕೂದಲನ್ನು ಶಾಂಪೂ ಮತ್ತು ಶುದ್ಧ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ : ಕೂದಲಿನ ಹಲವು ಸಮಸ್ಯೆಗಳಿಗೆ ರಾಮಬಾಣ ಅಲೋವೆರಾ

(  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News