ಇದೊಂದೇ ವಸ್ತು ಸಾಕು! ಹೇರ್ ಫಾಲ್ ಸೇರಿ ಕೂದಲಿನ ಈ ನಾಲ್ಕು ಸಮಸ್ಯೆಗಳಿಂದ ನೀಡುವುದು ಮುಕ್ತಿ

ಮೆಹಂದಿ ಬಿಳಿ ಕೂದಲನ್ನು ಮರೆ ಮಾಚಲು ಸಹಾಯ ಮಾಡುತ್ತದೆ. ಆದರೆ ಕೂದಲಿಗೆ ಬಣ್ಣ ನೀಡುವುದು ಮಾತ್ರ ಮೆಹಂದಿಯಿಂದಾಗುವ ಪ್ರಯೋಜನವಲ್ಲ. ಕೂದಲಿಗೆ ಬಣ್ಣ ನೀಡುವುದು ಸೇರಿದಂತೆ ಈ ಎಲ್ಲಾ ಕೂದಲಿನ ಸಮಸ್ಯೆಗಳಿಂದ ಮುಕ್ತಿ  ನೀಡುತ್ತದೆ ಗೋರಂಟಿ. 

Written by - Ranjitha R K | Last Updated : Jul 17, 2023, 03:44 PM IST
  • ಹವಾಮಾನ ಬದಲಾದ ತಕ್ಷಣ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗುತ್ತವೆ.
  • 30 ವರ್ಷಕ್ಕಿಂತ ಮುಂಚೆಯೇ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಎದುರಿಸುತ್ತಾರೆ
  • ಈ ಎಲ್ಲಾ ಕೂದಲಿನ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಗೋರಂಟಿ.
ಇದೊಂದೇ ವಸ್ತು ಸಾಕು! ಹೇರ್ ಫಾಲ್ ಸೇರಿ ಕೂದಲಿನ ಈ ನಾಲ್ಕು ಸಮಸ್ಯೆಗಳಿಂದ ನೀಡುವುದು ಮುಕ್ತಿ  title=

ಬೆಂಗಳೂರು : ಹವಾಮಾನ ಬದಲಾದ ತಕ್ಷಣ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇಂದಿನ ಕಾಲದಲ್ಲಿ ಹೆಚ್ಚಿನವರು 30 ವರ್ಷಕ್ಕಿಂತ ಮುಂಚೆಯೇ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಎದುರಿಸಲು ಪ್ರಾರಂಭಿಸುತ್ತಾರೆ. ಕೂದಲು ಬಿಳಿಯಾಗುತ್ತಿದ್ದಂತೆಯೇ ಕೆಲವರು ಹೇರ್ ಕಲರ್ ಮೊರೆ ಹೋಗುತ್ತಾರೆ. ಇನ್ನು ಕೆಲವರು ಹೇರ್ ಕಲರ್ ನಲ್ಲಿರುವ ಕೆಮಿಕಲ್ ಗೆ ಹೆದರಿ ಕೂದಲಿಗೆ ಮೆಹಂದಿ ಹಚ್ಚುತ್ತಾರೆ. ಹೌದು, ಮೆಹಂದಿ ಬಿಳಿ ಕೂದಲನ್ನು ಮರೆ ಮಾಚಲು ಸಹಾಯ ಮಾಡುತ್ತದೆ. ಆದರೆ ಕೂದಲಿಗೆ ಬಣ್ಣ ನೀಡುವುದು ಮಾತ್ರ ಮೆಹಂದಿಯಿಂದಾಗುವ ಪ್ರಯೋಜನವಲ್ಲ. ಕೂದಲಿಗೆ ಬಣ್ಣ ನೀಡುವುದು ಸೇರಿದಂತೆ ಈ ಎಲ್ಲಾ ಕೂದಲಿನ ಸಮಸ್ಯೆಗಳಿಂದ ಮುಕ್ತಿ  ನೀಡುತ್ತದೆ ಗೋರಂಟಿ. 

ಕೂದಲಿಗೆ ಗೋರಂಟಿ ಹಚ್ಚುವುದರಿಂದ ಆಗುವ ಲಾಭಗಳು : 
ನೈಸರ್ಗಿಕ ಬಣ್ಣ:
ಮೆಹಂದಿ ನ್ಯಾಚ್ಯುರಲ್ ಹೇರ್ ಕಲರ್ ಆಗಿದ್ದು, ಕೂದಲನ್ನು ಕೆಂಪು ಮತ್ತು ಕಂದು ಬಣ್ಣಕ್ಕೆ ತಿರುಗಿಸಲು ಸಹಾಯ ಮಾಡುತ್ತದೆ. ಇದು ಹಾನಿಕಾರಕ ವಸ್ತುಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಕೆಮಿಕಲ್ ಹೇರ್ ಕಲರ್ ಹಚ್ಚುವಂತೆ ಮೆಹಂದಿ ಹಚ್ಚುವ ಮುನ್ನ ಹಿಂದೆ ಮುಂದೆ ಯೋಚಿಸುವ ಅಗತ್ಯ ಇಲ್ಲ. ಇದು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಆದ್ದರಿಂದ, ಕೂದಲು ಬಿಳಿಯಾಗಲು ಪ್ರಾರಂಭಿಸಿದರೆ, ಕೂದಲಿಗೆ ಗೋರಂಟಿ ಹಚ್ಚಬಹುದು.

ಇದನ್ನೂ ಓದಿ : ತೆಂಗಿನೆಣ್ಣೆಗೆ ಈ ಒಂದು ವಸ್ತು ಸೇರಿಸಿ ಹಚ್ಚಿದರೆ ಎರಡೇ ವಾರದಲ್ಲಿ ಉದ್ದ ಬೆಳೆಯುತ್ತದೆ ಕೂದಲು

ಕೂದಲನ್ನು ಮಾಯಿಶ್ಚರೈಸ್ ಮಾಡುತ್ತದೆ : 
ಕೂದಲಿಗೆ ಗೋರಂಟಿ ಹಚ್ಚುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ ಮತ್ತು ಕೂದಲು ಮೃದುವಾಗುತ್ತದೆ. ಆದ್ದರಿಂದ, ನಿಮ್ಮ ಕೂದಲು ಶುಷ್ಕ ಮತ್ತು ನಿರ್ಜೀವವಾಗಿದ್ದರೆ, ನಿಮ್ಮ ಕೂದಲಿಗೆ ಗೋರಂಟಿ ಹಚ್ಚಬೇಕು.

ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ : 
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಗೋರಂಟಿ ಸಹಾಯ ಮಾಡುತ್ತದೆ. ಏಕೆಂದರೆ ಗೋರಂಟಿ ಕೂದಲು ಕಿರುಚೀಲಗಳನ್ನು ಬಲಪಡಿಸುವ ನೈಸರ್ಗಿಕ ಸಂಯುಕ್ತಗಳನ್ನು ಹೊಂದಿದೆ. ಇದು ಕೂದಲನ್ನು ಆರೋಗ್ಯಕರವಾಗಿಡುತ್ತದೆ. ಇದರಿಂದಾಗಿ ಅವುಗಳ ಬೆಳವಣಿಗೆಯು ವೇಗವಾಗಿರುತ್ತದೆ. ಅದಕ್ಕಾಗಿಯೇ ತಿಂಗಳಿಗೆ 2 ಬಾರಿ  ಕೂದಲಿಗೆ ಗೋರಂಟಿ ಹಚ್ಚಬೇಕು. 

ಇದನ್ನೂ ಓದಿ : ಕರ್ಪೂರಕ್ಕೆ ಈ ಎಣ್ಣೆ ಮಿಕ್ಸ್ ಮಾಡಿ ತಲೆಗೆ ಹಚ್ಚಿದ್ರೆ ಬೋಳು ತಲೆ ಸಮಸ್ಯೆಗೆ ಸಿಗುತ್ತೆ ಶಾಶ್ವತ ಪರಿಹಾರ!

ತಲೆಹೊಟ್ಟು ನಿವಾರಣೆ :
ಕೂದಲಿಗೆ ಗೋರಂಟಿ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ. ಏಕೆಂದರೆ, ಇದು ನಿಮ್ಮ ನೆತ್ತಿಯನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ನಿಮ್ಮ ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆಯಿದ್ದು, ನೀವು ತೊಂದರೆಗೆ ಒಳಗಾಗಿದ್ದರೆ ಕೂದಲಿಗೆ ಗೋರಂಟಿ ಹಚ್ಚಬೇಕು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News