ಉದ್ದನೆಯ ಕಪ್ಪು ಕೂದಲಿಗಾಗಿ ಪೇರಳೆ ಎಲೆಯನ್ನು ಈ ರೀತಿ ಬಳಸಿ ನೋಡಿ

ಪೇರಳೆ ಹಣ್ಣು ತಿನ್ನಲು ರುಚಿ, ಆರೋಗ್ಯಕ್ಕೂ ಹಿತ. ಅದೇ ರೀತಿ ಅದರ ಎಲೆಗಳಲ್ಲಿ ಕೂಡಾ ಅಪಾರ ಪ್ರಮಾಣದ ಪೋಷಕಾಂಶಗಳಿರುತ್ತವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ.

Written by - Ranjitha R K | Last Updated : Dec 4, 2021, 03:11 PM IST
  • ಪ್ರತಿಯೊಬ್ಬರೂ ಉದ್ದನೆಯ, ದಪ್ಪ ನುಣುಪಾದ ಕೂದಲನ್ನು ಹೊಂದಲು ಬಯಸುತ್ತಾರೆ.
  • ಕೆಲವರು ವಿವಿಧ ರೀತಿಯ ಎಣ್ಣೆಯನ್ನು ಬಳಸುತ್ತಾರೆ
  • ಇನ್ನು ಕೆಲವರು ಹೇರ್ ಮಾಸ್ಕ್ ಬಳಸುತ್ತಾರೆ.
ಉದ್ದನೆಯ ಕಪ್ಪು ಕೂದಲಿಗಾಗಿ ಪೇರಳೆ ಎಲೆಯನ್ನು ಈ ರೀತಿ ಬಳಸಿ ನೋಡಿ    title=
Benefits Of Guava Leaves (file photo)

ನವದೆಹಲಿ : ಪ್ರತಿಯೊಬ್ಬರೂ ಉದ್ದನೆಯ, ದಪ್ಪ ನುಣುಪಾದ ಕೂದಲನ್ನು ಹೊಂದಲು ಬಯಸುತ್ತಾರೆ. ಇದಕ್ಕಾಗಿ ಬಹಳಷ್ಟು ಸರ್ಕಸ್ ಕೂಡಾ ಮಾಡುತ್ತಾರೆ. ಕೆಲವರು ವಿವಿಧ ರೀತಿಯ ಎಣ್ಣೆಯನ್ನು ಬಳಸುತ್ತಾರೆ. ಇನ್ನು ಕೆಲವರು ಹೇರ್ ಮಾಸ್ಕ್ (hair pack) ಬಳಸುತ್ತಾರೆ. ಇಷ್ಟೆಲ್ಲಾ  ಮಾಡಿದ ಬಳಿಕವೂ ತಾವು ಬಯಸುವ ಫಲಿತಾಂಶ ಸಿಗುವುದಿಲ್ಲ. ಆದರೆ ಇಂದು ನಾವು ಹೇಳುವ ಈ ಉಪಾಯ ಬಹಳ ಸರಳವಾಗಿದೆ. ಖರ್ಚು ಕೂಡಾ ಕಡಿಮೆ. 

ಪೇರಳೆ ಹಣ್ಣು ತಿನ್ನಲು ರುಚಿ, ಆರೋಗ್ಯಕ್ಕೂ ಹಿತ. ಅದೇ ರೀತಿ ಅದರ ಎಲೆಗಳಲ್ಲಿ (benefits of gauva leaves) ಕೂಡಾ ಅಪಾರ ಪ್ರಮಾಣದ ಪೋಷಕಾಂಶಗಳಿರುತ್ತವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಪೇರಳೆ ಎಲೆಗಳನ್ನು (gauva leaves for hair) ಹಲವಾರು ರೀತಿಯಲ್ಲಿ ಕೂದಲಿಗೆ ಬಳಸಬಹುದು.  

ಇದನ್ನೂ ಓದಿ : Clove Tea:ಚಳಿಗಾಲದ ಋತುವಿನಲ್ಲಿ ನಿತ್ಯ ಬೆಳಗ್ಗೆ ಒಂದು ಕಪ್ ಈ ಚಹಾ ಸೇವಿಸಿ, ಹಲವು ಕಾಯಿಲೆಗಳಿಂದ ದೂರ ಉಳಿಯಿರಿ

ಪೇರಳೆ ಎಲೆಗಳು ಕೂದಲಿಗೆ ಪ್ರಯೋಜನಕಾರಿ
1. ಪೇರಳೆ ಎಲೆಗಳ ಹೇರ್ ಪ್ಯಾಕ್ ಅನ್ನು ಈ ರೀತಿ ಮಾಡಿ

1. 15 ರಿಂದ 20 ಪೇರಲ ಎಲೆಗಳನ್ನು ತೊಳೆದು ಒಣಗಿಸಿ. 
2. ಇದನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. 
3. ಈಗ ಈ ಪೇಸ್ಟ್ ಅನ್ನು ಪಾತ್ರೆಗೆ ಹಾಕಿ.
4. ನಂತರ ನಿಮ್ಮ ಕೂದಲಿಗೆ ಈ ಪೇಸ್ಟ್ ಅನ್ನು ಹಚ್ಚಿ.  
5. ಕೆಲವು ನಿಮಿಷಗಳ ಕಾಲ ಬೆರಳುಗಳಿಂದ ಮಸಾಜ್ ಮಾಡಿ. 
6. 30-40 ನಿಮಿಷಗಳ ಕಾಲ ಹಾಗೆ ಬಿಡಿ. 
7. ಒಣಗಿದ ಮೇಲ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ.  
8. ಕೂದಲನ್ನು ತೊಳೆಯಲು ಸೌಮ್ಯವಾದ ಶಾಂಪೂ ಬಳಸಿ. 
9. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲು ಬಹಳ ಬೇಗನೆ ಬೆಳೆಯುತ್ತದೆ.  

ಇದನ್ನೂ ಓದಿ : Pressure Cooked Rice : ನೀವು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ಸೇವಿಸುತ್ತೀರಾ? ಇದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ತಿಳಿಯಿರಿ

2. ಎಣ್ಣೆ ಯೊಂದಿಗೆ ಬಳಕೆ ಹೇಗೆ ? 
1. ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ. 
2. ನಂತರ ಚಿಕ್ಕ ಈರುಳ್ಳಿ (onion) ಹಾಕಿ ಪ್ಯೂರಿ ಮಾಡಿ. 
3. ಈಗ ಅದನ್ನು ಬಟ್ಟೆಯಲ್ಲಿ ಹಾಕಿ ರಸವನ್ನು ಹಿಂಡಿ. 
4. ಈಗ ಈರುಳ್ಳಿ ರಸಕ್ಕೆ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು (Coconut oil) ಹಾಕಿ ಮಿಶ್ರಣ ಮಾಡಿ. 
5. ಈ ಮಿಶ್ರನವನ್ನು ಕೂದಲಿಗೆ ಹಚ್ಚಿ ಮತ್ತು ನಿಮ್ಮ ಬೆರಳುಗಳಿಂದ ಚೆನ್ನಾಗಿ ಮಸಾಜ್ ಮಾಡಿ. 
6. ಅರ್ಧ ಗಂಟೆಯ ನಂತರ ತೊಳೆಯಿರಿ.

3. ಪೇರಳೆ ಎಲೆಗಳ ನೀರನ್ನು ಹೇಗೆ ಬಳಸುವುದು ?
1. ಕೆಲವು ಪೇರಳೆ ಎಲೆಗಳನ್ನು ತೊಳೆಯಿರಿ.
2. ಈಗ ಅವುಗಳನ್ನು ಒಂದು ಲೀಟರ್ ನೀರಿನಲ್ಲಿ (water) ಕುದಿಸಿ. 
3. 15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ ಅದನ್ನು ತಣ್ಣಗಾಗಿಸಿ. 
4. ಅದು ತಣ್ಣಗಾದ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಹಾಕಿಡಿ. 
5.ಅದರ ನಂತರ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
6. ಕೂದಲು ಒಣಗಿದ ನಂತರ, ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಪೇರಳೆ ಎಲೆಯ ನೀರನ್ನು ಹಾಕಿ.  
7. 10 ನಿಮಿಷಗಳ ಕಾಲ ಮಸಾಜ್ ಮಾಡಿ.
8.  ಕೆಲವು ಗಂಟೆಗಳ ಕಾಲ ಅದನ್ನು ಕೂದಲಿನಲ್ಲಿ ಹಾಗೆ ಬಿಡಿ. 
9. ನಂತರ ಕೂದಲನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ : Bed Tea Side Effects : ಅಪ್ಪಿತಪ್ಪಿಯೂ ಕುಡಿಯಬೇಡಿ ಬೆಳಗ್ಗೆ ಎದ್ದ ತಕ್ಷಣ ಟೀ : ಇದರಿಂದ ಆರೋಗ್ಯಕ್ಕೆ ತಪ್ಪಿದಲ್ಲ ಅಪಾಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News