ತೆಂಗಿನೆಣ್ಣೆಗೆ ಈ ಒಂದು ವಸ್ತು ಸೇರಿಸಿ ಹಚ್ಚಿದರೆ ಎರಡೇ ವಾರದಲ್ಲಿ ಉದ್ದ ಬೆಳೆಯುತ್ತದೆ ಕೂದಲು

hair growing easy tips in Kannada : ತೆಂಗಿನೆಣ್ಣೆಯೊಂದಿಗೆ ಈ ಒಂದು ವಸ್ತುವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವುದನ್ನು ತಡೆಯುತ್ತದೆ. ಮಾತ್ರವಲ್ಲ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುವಂತೆಯೂ ಮಾಡುತ್ತದೆ.   

Written by - Ranjitha R K | Last Updated : Jul 17, 2023, 12:42 PM IST
  • ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ
  • ಕೂದಲಿನ ಸಮಸ್ಯೆಗಳಿಗೆ ಇದೇ ಕಾರಣ
  • ತೆಂಗಿನ ಎಣ್ಣೆ-ಅಲೋವೆರಾ ಕೂದಲಿಗೆ ಹೇಗೆ ಪ್ರಯೋಜನಕಾರಿ?
ತೆಂಗಿನೆಣ್ಣೆಗೆ ಈ ಒಂದು ವಸ್ತು ಸೇರಿಸಿ ಹಚ್ಚಿದರೆ ಎರಡೇ ವಾರದಲ್ಲಿ ಉದ್ದ ಬೆಳೆಯುತ್ತದೆ ಕೂದಲು title=

hair growing easy tips in Kannada : ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಇದಕ್ಕೆ ಕಾರಣಗಳು ಹಲವಾರು. ಒತ್ತಡ ಮತ್ತು ಪೋಷಕಾಂಶಗಳ ಕೊರತೆಯು ಬಹು ಮುಖ್ಯ ಕಾರಣವಾಗಿದೆ. ಕೂದಲು ನಿರಂತರವಾಗಿ ಉದುರುತ್ತಾ ಇದ್ದರೆ ಕೂದಲು ತೆಳ್ಳಗಾಗುತ್ತದೆ. ಒಮ್ಮೊಮ್ಮೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯದೆ ಹೋದರೆ, ಬೋಳು ತಲೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ತೆಂಗಿನೆಣ್ಣೆಯೊಂದಿಗೆ ಈ ಒಂದು ವಸ್ತುವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವುದನ್ನು ತಡೆಯುತ್ತದೆ. ಮಾತ್ರವಲ್ಲ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುವಂತೆಯೂ ಮಾಡುತ್ತದೆ.   

ಕೂದಲಿನ ಸಮಸ್ಯೆಗಳಿಗೆ ಇದೇ ಕಾರಣ :  
ಈಗಿನ ಬ್ಯುಸಿ ಲೈಫ್ ನಲ್ಲಿ ಮನುಷ್ಯ ತನ್ನ ದೇಹಕ್ಕೆ ಸಂಬಂಧಿಸಿದ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾನೆ. ಅವುಗಳಲ್ಲಿ, ಕೂದಲು ಉದುರುವುದು ಮತ್ತು ಅವುಗಳ ಬೆಳವಣಿಗೆ ನಿಲ್ಲುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಇದರ ಹಿಂದೆ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ಅಸಮರ್ಪಕ ಆಹಾರ ಮತ್ತು ಅಸಮರ್ಪಕ ಜೀವನಶೈಲಿ ಮುಂತಾದ ಹಲವು ಕಾರಣಗಳಿರಬಹುದು. ಆದರೆ, ತೆಂಗಿನ ಎಣ್ಣೆ ಮತ್ತು ಅಲೋವೆರಾದ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಬಹುದು.

ಇದನ್ನೂ ಓದಿ : ನಿಮ್ಮ ಆಹಾರದಲ್ಲಿನ ಈ ಸಂಗತಿಗಳು ನಿಮ್ಮ ಜೀವನವನ್ನು ಖುಷಿಯಿಂದ ತುಂಬುತ್ತವೆ!

ತೆಂಗಿನ ಎಣ್ಣೆ-ಅಲೋವೆರಾ ಕೂದಲಿಗೆ ಹೇಗೆ ಪ್ರಯೋಜನಕಾರಿ? :
ಅಲೋವೆರಾ ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ನೆತ್ತಿಯಿಂದ ಡೆಡ್ ಸೆಲ್ ಗಳನ್ನು ತೆಗೆದುಹಾಕುತ್ತದೆ. ಅಲೋವೆರಾ ಮತ್ತು ತೆಂಗಿನ ಎಣ್ಣೆಯು ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೂದಲನ್ನು ಬೇರಿನಿಂದ ಸ್ವಚ್ಛಗೊಳಿಸುತ್ತದೆ. ಅಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಇವೆರಡೂ ಕೂದಲಿನಿಂದ ತಲೆಹೊಟ್ಟು, ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸಮಸ್ಯೆಯನ್ನು ನಿವಾರಿಸುತ್ತದೆ. 

ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ :
1. ಮೊದಲಿಗೆ, 1 ಕಪ್ ನಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ. 
2. ನಂತರ ಅದಕ್ಕೆ 4 ಚಮಚ ಅಲೋವೆರಾ ಜೆಲ್ ಸೇರಿಸಿ.
3. ಈಗ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
4. ಹೀಗೆ ತಯಾರಿಸಿಕೊಂಡ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. 
 5. ಹೀಗೆ ವಾರಕ್ಕೆ 3 ಬಾರಿ ಮಾಡುತ್ತಿರಬೇಕು.  
6. ಕೂದಲಿಗೆ ಹಚ್ಚಿದ ಮಿಶ್ರಣವನ್ನು ರಾತ್ರಿಯಿಡೀ ಹಾಗೆಯೇ ಬಿಡಬೇಕು. 
7. ಬೆಳಗ್ಗೆ ಎದ್ದು ಮೈಲ್ಡ್ ಶಾಂಪೂವಿನ ಸಹಾಯದಿಂದ ಕೂದಲನ್ನು ತೊಳೆಯಿರಿ. 
8.ಹೀಗೆ ಮಾಡುತ್ತಾ ಬಂದರೆ ಕೂದಲು ವೇಗವಾಗಿ ಬೆಳೆಯುತ್ತದೆ.

ಇದನ್ನೂ ಓದಿ : Lifestyle Tips: ಆಕಸ್ಮಿಕವಾಗಿ ಬಿಪಿ ಡೌನ್ ಆದರೆ ಏನು ಮಾಡಬೇಕು? ಈ ಮನೆ ಉಪಾಯಗಳನ್ನು ಅನುಸರಿಸಿ!

ಅಲೋವೆರಾ-ತೆಂಗಿನ ಎಣ್ಣೆ ಕೂದಲಿಗೆ ಹೇಗೆ ಪ್ರಯೋಜನಕಾರಿ : 
ಅಲೋವೆರಾ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಕೂದಲ ಕಿರುಚೀಲಗಳಿಗೆ ಪೋಷಣೆಯನ್ನು ಒದಗಿಸುತ್ತದೆ. ಇದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ರಕ್ತವು ಕೂದಲಿನ ಕಿರುಚೀಲಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಕೂದಲು ಬೆಳೆಯುತ್ತದೆ.  ಮಾತ್ರವಲ್ಲ ಕೂದಲಿಗೆ ಹೊಳಪು ಕೂಡಾ ಹೆಚ್ಚುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News