ಕೂದಲಿನ ಹಲವು ಸಮಸ್ಯೆಗಳಿಗೆ ರಾಮಬಾಣ ಅಲೋವೆರಾ

Aloevera Benefits For Hair: ಆಯುರ್ವೇದದ ಪ್ರಕಾರ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಅಲೋವೆರಾ ತುಂಬಾ ಪ್ರಯೋಜನಕಾರಿ ಆಗಿದೆ. 

Written by - Yashaswini V | Last Updated : Sep 15, 2023, 10:41 AM IST
  • ಅಲೋವೆರಾದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಗುಣಗಳು ಸಮೃದ್ಧವಾಗಿದೆ
  • ಇದು ಕೂದಲಿನ ಹಲವು ಸಮಸ್ಯೆಗಳಿಗೆ ವರದಾನವಾಗಿದೆ ಎಂದು ಹೇಳಲಾಗುತ್ತದೆ.
  • ಕೆಲವು ಪದಾರ್ಥಗಳೊಂದಿಗೆ ಅಲೋವೆರಾವನ್ನು ಬೆರೆಸಿ ಹೇರ್ ಮಾಸ್ಕ್ ಆಗಿ ಇದನ್ನು ಬಳಸುವುದರಿಂದ ಕೂದಲಿಗೆ ಉತ್ತಮ ಆರೈಕೆ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಕೂದಲಿನ ಹಲವು ಸಮಸ್ಯೆಗಳಿಗೆ ರಾಮಬಾಣ ಅಲೋವೆರಾ title=

Aloevera For Hair: ಅನಾದಿ ಕಾಲದಿಂದಲೂ ಅಲೋವೆರಾ ಆರೋಗ್ಯಕ್ಕೆ ಮತ್ತು  ಚರ್ಮಕ್ಕೆ ಅತ್ಯುತ್ತಮ ಔಷಧವಾಗಿದೆ.  ಮಾತ್ರವಲ್ಲ, ಅಲೋವೆರಾ ಕೂದಲಿನ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ. ಹೌದು, ಆಯುರ್ವೇದದ ಪ್ರಕಾರ, ಡ್ಯಾಂಡ್ರಫ್ ಸಮಸ್ಯೆ, ಕೂದಲು ಉದುರುವಿಕೆ, ಕವಲೊಡೆದಿರುವ ಕೂದಲು, ಜಿಗುಟು ಕೂದಲು ಹೀಗೆ ಕೂದಲಿನ ಇನ್ನೂ ಹಲವು ಸಮಸ್ಯೆಗಳಿಗೆ ಅಲೋವೆರಾ ಅತ್ಯುತ್ತಮ ಪರಿಹಾರವಾಗಿದೆ. 

ಅಲೋವೆರಾದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಗುಣಗಳು ಸಮೃದ್ಧವಾಗಿದ್ದು, ಇದು ಕೂದಲಿನ ಹಲವು ಸಮಸ್ಯೆಗಳಿಗೆ ವರದಾನವಾಗಿದೆ ಎಂದು ಹೇಳಲಾಗುತ್ತದೆ. ಕೆಲವು ಪದಾರ್ಥಗಳೊಂದಿಗೆ ಅಲೋವೆರಾವನ್ನು ಬೆರೆಸಿ ಹೇರ್ ಮಾಸ್ಕ್ ಆಗಿ ಇದನ್ನು ಬಳಸುವುದರಿಂದ ಕೂದಲಿಗೆ ಉತ್ತಮ ಆರೈಕೆ ಸಿಗುತ್ತದೆ ಎಂದು ಹೇಳಲಾಗುತ್ತದೆ. 

* ತಲೆಹೊಟ್ಟು ಕಡಿಮೆ ಮಾಡಲು ಅಲೋವೆರಾ ಮತ್ತು ಆಪಲ್ ಸೈಡರ್ ವಿನೆಗರ್ ಹೇರ್ ಮಾಸ್ಕ್: 
ನಿಮಗೆ ತಲೆಹೊಟ್ಟಿನ ಸಮಸ್ಯೆ ಕಾಡುತ್ತಿದ್ದರೆ  4 ಚಮಚ ಅಲೋವೆರಾ ಜೆಲ್, 2 ಚಮಚ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ ಹೇರ್ ಮಾಸ್ಕ್ ತಯಾರಿಸಿ. ಈ ಹೇರ್ ಮಾಸ್ಕ್ ಅನ್ನು ಕೂದಲಿನ ಬುಡದಿಂದ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಳಿಕ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ಹೇರ್ ಮಾಸ್ಕ್ ಬಳಸುವುದರಿಂದ ಡ್ಯಾಂಡ್ರಫ್ ಸ್ಮಸ್ಯೆಯಿಂದ ಕೆಲವೇ ದಿನಗಳಲ್ಲಿ ಪರಿಹಾರವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಊಟವಾದ ನಂತರ ಈ 5 ಕೆಲಸಗಳನ್ನು ಮಾಡಲೇಬೇಡಿ

* ಮೃದು ಮತ್ತು ಹೊಳೆಯುವ ಕೂದಲಿಗಾಗಿ ಅಲೋವೆರಾ ಮೊಟ್ಟೆ ಹೇರ್ ಮಾಸ್ಕ್: 
ಮೂರು ಚಮಚ ಅಲೋವೆರಾ ಜೆಲ್ ಮತ್ತು ಒಂದು ಮೊಟ್ಟೆಯನ್ನು ಮಿಶ್ರಣ ಮಾಡಿ. ಇದರ ನಂತರ, ಕೂದಲಿನ ಬ್ರಷ್ ಸಹಾಯದಿಂದ ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ. ಅರ್ಧ ಘಂಟೆಯ ಬಳಿಕ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ಇದರಿಂದ ಕೂದಲಿಗೆ ಪೋಷಣೆ ದೊರೆಯುವ ಜೊತೆಗೆ ಮೃದುವಾದ, ಹೊಳೆಯುವ ಕೂದಲನ್ನು ಪಡೆಯಬಹುದು. 

* ಅಲೋವೆರಾ ಕೊಬ್ಬರಿ ಎಣ್ಣೆ ಹೇರ್ ಮಾಸ್ಕ್: 
ಶುಷ್ಕವಾದ, ಒರಟಾದ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಅಲೋವೆರಾವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ನೆತ್ತಿ ಮತ್ತು ಕೂದಲಿಗೆ ಮಸಾಜ್ ಮಾಡಿ ರಾತ್ರಿಯಿಡೀ ಹಾಗೆ ಬಿಡಿ. ಬೆಳಿಗ್ಗೆ ಎದ್ದ ಬಳಿಕ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ. ಇದರಿಂದ ಶುಷ್ಕ, ಹಾನಿಗೊಳಗಾದ ಕೂದಲಿಗೆ ಮತ್ತೆ ಕಳೆ ಬರುತ್ತದೆ. 

ಇದನ್ನೂ ಓದಿ- ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಟಾಪ್ 5 ಮಾರ್ನಿಂಗ್ ಡ್ರಿಂಕ್ಸ್

* ನೈಸರ್ಗಿಕ ಹೊಳೆಯುವ ಕೂದಲಿಗೆ ಅಲೋವೆರಾ ಮತ್ತು ಮೊಸರಿನ ಪ್ಯಾಕ್: 
ನೀವು ನೈಸರ್ಗಿಕವಾಗಿ ಕಾಂತಿಯುತ ಕೂದಲನ್ನು ಹೊಂದಲು ಬಯಸಿದರೆ ಅಲೋವೆರಾ ಮತ್ತು ಮೊಸರಿನ ಪ್ಯಾಕ್ ನಿಮಗೆ ಪ್ರಯೋಜನಕಾರಿ ಆಗಿದೆ. ಎರಡು ಚಮಚ ತಾಜಾ ಅಲೋವೆರಾ ಜೆಲ್ ಅನ್ನು ಎರಡು ಚಮಚ ಮೊಸರಿನೊಂದಿಗೆ ಬೆರೆಸಿ ಈ ಮಿಶ್ರಣವನ್ನು ಬುಡದಿಂದ ನಿಮ್ಮ ಕೂದಲಿಗೆ ಲೇಪಿಸಿ ಅರ್ಧ ಘಂಟೆ ಬಳಿಕ ಹೇರ್ ವಾಶ್ ಮಾಡಿ. ಇದರಿಂದ ಸುಂದರ, ಕಾಂತಿಯುತ ಕೂದಲನ್ನು ಹೊಂದಬಹುದು. ಅಷ್ಟೇ ಅಲ್ಲ, ಅಧ್ಯಯನಗಳ ಪ್ರಕಾರ, ಮೊಸರಿನಲ್ಲಿ ಇರುವ ಪ್ರೋಬಯಾಟಿಕ್‌ಗಳು ತಲೆಹೊಟ್ಟು ಸಮಸ್ಯೆಯಿಂದಲೂ ಪರಿಹಾರ ನೀಡಬಲ್ಲದು. 

* ಅಲೋವೆರಾ ಮತ್ತು ದಾಸವಾಳದ ಹೂವಿನ ಮಾಸ್ಕ್: 
ದಾಸವಾಳದ ಹೂವು ಮತ್ತು ಅದರ ಎಲೆಗಳಲ್ಲಿ ಕೂದಲನ್ನು ಪೋಷಿಸುವ ಹಲವು ಅಂಶಗಳು ಅಡಕವಾಗಿವೆ. ದಾಸವಾಳದ ಹೂವುಗಳನ್ನು ಅಲೋವೆರಾ ಜೆಲ್ನೊಂದಿಗೆ ಮಿಶ್ರಣ ಮಾಡಿ ಚೆನ್ನಾಗಿ ಪೇಸ್ಟ್ ತಯಾರಿಸಿ. ಇದನ್ನು ಕೂದಲಿಗೆ ಅನ್ವಯಿಸಿ 20 ರಿಂದ 30 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಉದ್ದವಾದ ಹೊಳೆಯುವ ಕೂದಲನ್ನು ಪಡೆಯುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News