ಡಾರ್ಕ್ ಸರ್ಕಲ್ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರ ನೀಡುತ್ತೇ ಈ ಒಂದು ಸಸ್ಯ

Aloe Vera Benefits: ಡಾರ್ಕ್ ಸರ್ಕಲ್ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದರಿದು ಮುಖದ ಅಂದವನ್ನು ಮರೆಮಾಚುತ್ತದೆ. ಇದಕ್ಕಾಗಿ, ಮಾರುಕಟ್ಟೆಯಲ್ಲಿ ಹಲವಾರು ಕ್ರೀಮ್ ಗಳು ಲಭ್ಯವಿವೆ. ಆದರೆ, ಎಲ್ಲೆಡೆ ಬಹಳ ಸುಲಭವಾಗಿ ಲಭ್ಯವಿರುವ ಸಸ್ಯವೊಂದು ಈ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರವನ್ನು ನೀಡುತ್ತದೆ. 

Written by - Yashaswini V | Last Updated : Nov 10, 2023, 02:56 PM IST
  • ಅಲೋವೆರಾ ಔಷಧೀಯ ಗುಣಗಳ ಆಗರ
  • ಇದನ್ನು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ
  • ಹಾಗಾಗಿಯೇ ಅಲೋವೆರಾವನ್ನು ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.
ಡಾರ್ಕ್ ಸರ್ಕಲ್ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರ ನೀಡುತ್ತೇ ಈ ಒಂದು ಸಸ್ಯ  title=

Aloe Vera Benefits: ಅತಿಯಾದ ಗ್ಯಾಜೆಟ್ ಗಳ ಬಳಕೆ, ಸರಿಯಾಗಿ ನಿದ್ರೆ ಮಾಡದೆ ಇರುವುದು ಹೀಗೆ ಹಲವು ಕಾರಣಗಳಿಂದಾಗಿ ಇಯನ್ನಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಡಾರ್ಕ್ ಸರ್ಕಲ್ ಎಂತಲೂ ಕರೆಯಲಾಗುತ್ತದೆ. ಈ ಡಾರ್ಕ್ ಸರ್ಕಲ್ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಜೊತೆಗೆ ಕೆಲವರಲ್ಲಿ ಇದು ಆತ್ಮ ವಿಶ್ವಾಸವನ್ನು ಕುಂದಿಸುತ್ತದೆ. 

ನಿಮಗೂ ಡಾರ್ಕ್ ಸರ್ಕಲ್ ಸಮಸ್ಯೆ ಇದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇಲ್ಲವೇ, ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಕ್ರೀಮ್ ಗಳನ್ನು ಖರೀದಿಸುವ ಅಗತ್ಯವೂ ಇಲ್ಲ. ನಿಮ್ಮ ಮನೆಯಲ್ಲಿಯೇ ಬೆಳೆಯಬಹುದಾದ ಒಂದೇ ಒಂದು ಸಸ್ಯದ ಸಹಾಯದಿಂದ ಡಾರ್ಕ್ ಸರ್ಕಲ್ ಅನ್ನು ಕೆಲವೇ ಕೆಲವು ದಿನಗಳಲ್ಲಿ ಮಾಯಮಾಡಬಹುದು. ಅದುವೇ ಅಲೋವೆರಾ. 

ಇದನ್ನೂ ಓದಿ- ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇದೆ ಮದ್ದು

ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಅಲೋವೆರಾ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿರುವ ಈ ಸಸ್ಯ ಉತ್ತಮ ಸೌಂದರ್ಯವರ್ಧಕವೂ ಆಗಿದೆ. ಹಾಗಾಗಿಯೇ, ಬ್ಯೂಟಿ ಉತ್ಪನ್ನಗಳಲ್ಲಿ ಅಲೋವೆರಾ ಜೆಲ್ ಅನ್ನು ಬಳಸಲಾಗುತ್ತದೆ. 

ಅಲೋವೆರಾದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ, ಇದು ಚರ್ಮದಲ್ಲಿ ಕಾಲಜನ್ ಉತ್ಪಾದಿಸುವ ಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. 

ಡಾರ್ಕ್ ಸರ್ಕಲ್ ನಿಂದ ಮುಕ್ತಿ ಪಡೆಯಲು ಅಲೋವೆರಾವನ್ನು ಈ ರೀತಿ ಬಳಸಿ:
ಅಲೋವೆರಾ ಬಳಕೆ: 

ಅಲೋವೆರಾ ಉತ್ತಮ ಮಾಯಿಶ್ಚರೈಸರ್ ಆಗಿದೆ. ಇದನ್ನು ನಿತ್ಯ ಬಳಸುವುದರಿಂದ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. 
 
ಮಾಸ್ಕ್ ಧರಿಸಿ: 
ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಅಲೋವೆರಾ ಜೆಲ್ ಬಳಸಿ ಫೇಸ್ ಮಾಸ್ಕ್ ತಯಾರಿಸಿ. ಇದಕ್ಕಾಗಿ ಅಲೋವೆರಾ ಜೆಲ್ ಜೊತೆಗೆ ರೋಸ್ ವಾಟರ್ ಮಿಕ್ಸ್ ಮಾಡಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷಗಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಫೇಸ್ ವಾಶ್ ಮಾಡಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಬಹುದು. 

ಇದನ್ನೂ ಓದಿ- ವೃದ್ಧಾಪ್ಯದಲ್ಲಿ ನೀವು ಯಂಗ್ ಆಗಿ ಕಾಣಬೇಕೆಂದರೆ ಇಂದಿನಿಂದಲೇ ಇವುಗಳನ್ನು ತಿನ್ನಲು ಆರಂಭಿಸಿ...!

ರಾತ್ರಿ ಮಲಗುವ ಮುನ್ನ ಮಸಾಜ್: 
ರಾತ್ರಿ ಮಲಗುವ ಮುನ್ನ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕಲೆರಹಿತ, ಹೊಳೆಯುವ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News