Akshaya Tritiya 2022: ಅಕ್ಷಯ್ ತೃತಿಯಾ ಯಾವಾಗ? ವಿವಾಹಕ್ಕೆ ಅದ್ಭುತ ಯೋಗ

Akshaya Tritiya 2022: ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದಂದು ಅಕ್ಷಯ ತೃತಿಯಾ ಆಚರಿಸಲಾಗುತ್ತದೆ. ಶುಭಕಾರ್ಯಗಳ ಆರಂಭಕ್ಕೆ ಇದನ್ನು ಅದ್ಭುತ ಯೋಗ ಎಂದು ಕರೆಯಲಾಗುತ್ತದೆ. ಅಂದರೆ ಅಕ್ಷಯ ತೃತಿಯಾ ದಿನ ನೀವು ಯಾವುದೇ ಮುಹೂರ್ತವನ್ನು ನೋಡದೆಯೇ ಶುಭಕಾರ್ಯಗಳನ್ನು ನೆರವೇರಿಸಬಹುದು.   

Written by - Nitin Tabib | Last Updated : Apr 19, 2022, 02:44 PM IST
  • ಶುಭ ಕಾರ್ಯಗಳಿಗೆ ಅಕ್ಷಯ ತೃತಿಯಾ ಒಂದು ಅದ್ಭುತ ಯೋಗವಾಗಿದೆ
  • ಈ ವರ್ಷ ಮೇ 3, 2022ರಿಂದ ಅಕ್ಷಯ್ ತೃತಿಯಾ ಆಚರಿಸಲಾಗುತ್ತಿದೆ.
  • ಈ ದಿನ ಚಿನ್ನ, ಬೆಳ್ಳಿ, ವಾಹನ, ಮನೆ ಖರೀದಿಗೆ ಅತ್ಯುತ್ತಮ ದಿನ ಎಂದು ಪರಿಗಣಿಸಲಾಗುತ್ತದೆ.
Akshaya Tritiya 2022: ಅಕ್ಷಯ್ ತೃತಿಯಾ ಯಾವಾಗ? ವಿವಾಹಕ್ಕೆ ಅದ್ಭುತ ಯೋಗ title=
Askshay Tritiya Shubh Muhurat

Akshay Tritiya 2022 Shubh Muhurat: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಅಕ್ಷಯ್ ತೃತಿಯಾವನ್ನು ಅತ್ಯಂತ ಮಂಗಳಕರ ತಿಥಿ ಎಂದು ಪರಿಗಣಿಸಲಾಗುತ್ತದೆ. ವಿವಾಹ, ಗೃಹ ಪ್ರವೇಶ, ಉಪನಯನ ಇತ್ಯಾದಿ ಕಾರ್ಯಗಳಿಗೆ ಅಕ್ಷಯ್ ತೃತಿಯಾ ಅತ್ಯಂತ ಅದ್ಭುತ ಯೋಗ ಎಂದೇ ಹೇಳಲಾಗುತ್ತದೆ. ಅಂದರೆ, ಈ ದಿನ ನೀವು ಯಾವುದೇ ಮೂಹೂರ್ತ ಇಲ್ಲದೆಯೇ ಶುಭಕಾರ್ಯಗಳನ್ನು ನೇರವೆರಿಸಬಹುದು. ಹಿಂದೂ ಪಂಚಾಂಗದ ಪ್ರಕಾರ ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದಂದು ಅಕ್ಷಯ ತೃತಿಯಾ ತಿಥಿ ಬೀಳುತ್ತದೆ. ಈ ವರ್ಷ ಮೇ 3 ರಂದು ಅಕ್ಷಯ್ ತೃತಿಯಾ ಆಚರಿಸಲಾಗುತ್ತಿದೆ.

ಅಕ್ಷಯ್ ತೃತಿಯಾ 2022 ಶುಭ ಮುಹೂರ್ತ
ಮೇ 3, 2022 ರ ಮಂಗಳವಾರ ಬೆಳಗ್ಗೆ 05:19ಕ್ಕೆ ತೃತಿಯಾ ತಿಥಿ ಆರಂಭಗೊಂಡು ಮೇ 4, 2022ರ ಬೆಳಗ್ಗೆ 7.33ರವರೆಗೆ ಇರಲಿದೆ. ಈ ದಿನ ರೋಹಿಣಿ ನಕ್ಷತ್ರ ಇರಲಿದೆ. ರೋಹಿಣಿ ನಕ್ಷತ್ರ ಬೆಳಗ್ಗೆ 12.34 ರಿಂದ ಮೇ 04, 2022ರ ಬೆಳಗ್ಗೆ 03.18ರವರೆಗೆ ಇರಲಿದೆ.

ಇದನ್ನೂ ಓದಿ-April 25 ರಿಂದ ಈ 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

ಈ ಕಾರಣಕ್ಕೆ ಅಕ್ಷಯ್ ತೃತಿಯಾ ವಿಶೇಷ ಎಂದು ಹೇಳಲಾಗುತ್ತದೆ
ಅಕ್ಷಯ ತೃತೀಯ ಶುಭ ಕಾರ್ಯಗಳನ್ನು ಮಾಡಲು ತುಂಬಾ ಒಳ್ಳೆಯ ದಿನ ಎಂದು ಹೇಳಲಾಗುತ್ತದೆ. ಇದಲ್ಲದೆ, ಹೊಸ ಬಟ್ಟೆ, ಆಭರಣಗಳು, ಮನೆ-ಕಾರು ಮುಂತಾದ ಬೆಲೆಬಾಳುವ ವಸ್ತುಗಳ ಖರೀದಿಗೂ ಕೂಡ ಈ ದಿನವನ್ನು ಅತ್ಯಂತ ಮಂಗಳಕರ ದಿನ ಎಂದು ಧರ್ಮ ಶಾಸ್ತ್ರಗಳಲ್ಲಿ ಪರಿಗಣಿಸಲಾಗಿದೆ. ಈ ದಿನ ಧಾರ್ಮಿಕ ಕಾರ್ಯಕ್ರಮಗಳೂ ಕೂಡ ನಡೆಯುತ್ತವೆ. ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವ ಸಂಪ್ರದಾಯವಿದೆ. ಈ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹರಿದುಬರುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಅಷ್ಟೇ ಅಲ್ಲ ಈ ದಿನದ ದಾನಕ್ಕೂ ಕೂಡ ವಿಶೇಷ ಮಹತ್ವವಿದೆ. ಅಕ್ಷಯ ತೃತೀಯ ದಿನದಂದು ಮಾಡಿದ ದಾನವು ಮನೆಗೆ ಐಶ್ವರ್ಯವನ್ನು ತರುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ-Numerology:ಈ ರೀತಿಯ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ, ಇವರು ಸಿರಿವಂತರಾಗುವುದು ಖಚಿತ

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News