Solar Eclipse 2023: ದಶಕದ ಬಳಿಕ ಸಂಭವಿಸುತ್ತಿದೆ ಕಂಕಣಾಕೃತಿ ಸೂರ್ಯಗ್ರಹಣ 5 ಮಹಾಯೋಗಗಳ ರಚನೆ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!

Solar Eclipse 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಈ ಬಾರಿ ಏಪ್ರಿಲ್ 20 ರಂದು ಒಂದು ದಶಕದ ಬಳಿಕ ಕಂಕಣಾಕೃತಿ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಇದರಿಂದ ಒಟ್ಟು ಮೂರು ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದ್ದು, ಇವರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ.  

Written by - Nitin Tabib | Last Updated : Apr 16, 2023, 09:40 PM IST
  • ಮಿಥುನ ರಾಶಿಯ ಜಾತಕದವರ ಪಾಲಿಗೆ ಸೂರ್ಯಗ್ರಹಣ ಅತ್ಯಂತ ಲಾಭಕಾರಿ ಸಾಬೀತಾಗಲಿದೆ.
  • ಈ ಅವಧಿಯಲ್ಲಿ ನಿಮಗೆ ವಾಹನ-ಆಸ್ತಿಪಾಸ್ತಿ ಖರೀದಿಯ ಯೋಗವಿದೆ.
  • ಮನೆಯಲ್ಲಿ ಧಾರ್ಮಿಕ ಅಥವಾ ಮಂಗಳಕಾರ್ಯ ನೆರವೇರುವ ಸಾಧ್ಯತೆ ಇದೆ.
Solar Eclipse 2023: ದಶಕದ ಬಳಿಕ ಸಂಭವಿಸುತ್ತಿದೆ ಕಂಕಣಾಕೃತಿ ಸೂರ್ಯಗ್ರಹಣ 5 ಮಹಾಯೋಗಗಳ ರಚನೆ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!  title=
Solar Eclipse 2023

Solar Eclipse 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಕಾಲಕಾಲಕ್ಕೆ ಸೂರ್ಯ ಹಾಗೂ ಚಂದ್ರಗ್ರಹಣಗಳು ಸಂಭವಿಸುತ್ತಲೇ ಇರುತ್ತವೆ. ಈ ಗ್ರಹಣಗಳ ಪ್ರಭಾವ ಮಾನವ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತವೆ. ಪ್ರಸ್ತುತ ಏಪ್ರಿಲ್ 20, 2023 ರಂದು ಒಂದು ದಶಕದ ಬಳಿಕ ವೈಶಾಖ ಅಮಾವಾಸ್ಯೆಯ ದಿನ ಕಂಕಣಾಕೃತಿ ಸೂರ್ಯ ಗ್ರಹಣ ಸಂಭವಿಸುತ್ತಿದ್ದು, ಈ ಗ್ರಹಣದ ಸಮಯದಲ್ಲಿ ಒಟ್ಟು 5 ಶುಭಯೋಗಗಳು ನಿರ್ಮಾಣಗೊಳ್ಳುತ್ತಿವೆ. ಅರ್ಥಾತ್ ಸೂರ್ಯಗ್ರಹಣದ ದಿನ ಸರ್ವಾರ್ಥ ಸಿದ್ಧಿ ಹಾಗೂ ಪ್ರೀತಿಗಳಂತಹ ಶುಭ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇದರಿಂದ ಗ್ರಹಣದ ದಿನದ ಮಹತ್ವ ಸಾಕಷ್ಟು ಹೆಚ್ಚಾಗಿದೆ. ಇದಲ್ಲದೆ ಗ್ರಹಣದ ಸಮಯ ಸೂರ್ಯ ಮೇಷ ರಾಶಿಯಲ್ಲಿ ಹಾಗೂ ಅಶ್ವಿನಿ ನಕ್ಷತ್ರದಲ್ಲಿ ಇರಲಿದ್ದಾನೆ. ಗ್ರಹಣದ ಸಮಯದಲ್ಲಿ ಸೂರ್ಯ ಮೇಷರಾಶಿಯಲ್ಲಿ ರಾಹು ಹಾಗೂ ಬುಧನ ಜೊತೆಗೆ ಇರಲಿದ್ದಾನೆ. ಈ ಯೋಗಗಳ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ನೋಡಲು ಸಿಗಲಿದೆ. ಆದರೆ, ಮೂರು ರಾಶಿಗಳ ಜನರ ಪಾಲಿಗೆ ಈ ಗ್ರಹಣ ಭಾಗ್ಯ ಬೆಳಗಿಸುವ ಗ್ರಹಣವಾಗಿರಲಿದೆ. ಆ ಅದೃಷ್ಟಶಾಲಿ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಮಿಥುನ ರಾಶಿ: ಮಿಥುನ ಜಾತಕದವರ ಪಾಲಿಗೆ ಸೂರ್ಯ ಗ್ರಹಣ ಸಾಕಷ್ಟು ಅನಕೂಲತೆಗಳನ್ನು ತಂದೊಡ್ಡಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದ್ದು, ಆತ್ಮ ವಿಶ್ವಾಸ ಹೆಚ್ಚಾಗಲಿದೆ. ವಾಹನ-ಆಸ್ತಿಪಾಸ್ತಿ ಖರೀದಿಯ ಯೋಗವಿದೆ. ದೀರ್ಘಾವಧಿಯಿಂದ ಸಿಲುಕಿಬಿದ್ದ ನಿಮ್ಮ ಹಣ ನಿಮ್ಮತ್ತ ಮರಳಲಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಇನ್ನೊಂದೆಡೆ ನೀವು ವಿದೇಶ ಯಾತ್ರೆಯನ್ನು ಕೂಡ ಕೈಗೊಳ್ಳುವ ಸಾಧ್ಯತೆ ಇದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗುವ ಸಾಧ್ಯತೆ ಇದೆ. 

ಧನು ರಾಶಿ: ಮಿಥುನ ರಾಶಿಯ ಜಾತಕದವರ ಪಾಲಿಗೆ ಸೂರ್ಯಗ್ರಹಣ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ವಾಹನ-ಆಸ್ತಿಪಾಸ್ತಿ ಖರೀದಿಯ ಯೋಗವಿದೆ. ಮನೆಯಲ್ಲಿ ಧಾರ್ಮಿಕ ಅಥವಾ ಮಂಗಳಕಾರ್ಯ ನೆರವೇರುವ ಸಾಧ್ಯತೆ ಇದೆ. ನೌಕರವರ್ಗದ ಜನರಿಗೆ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗುವ ಯೋಗವಿದೆ. ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಜೊತೆಗಿನ ನಿಮ್ಮ ಸಂಬಂಧ ಉತ್ತಮವಾಗಲಿದೆ. ಕಾರ್ಯಕ್ಷೇತ್ರದ್ಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಈ ಅವಧಿ ನಿಮಗೆ ಅತ್ಯುತ್ತಮ ಸಾಬೀತಾಗಲಿದ್ದು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ  ಅವಶ್ಯಕತೆ ಇದೆ. ಅದರಲ್ಲಿಯೂ ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆವಹಿಸಬೇಕಾಗಲಿದೆ.

ಇದನ್ನೂ ಓದಿ- Saturn Transit: ಶೀಘ್ರದಲ್ಲೇ ತನ್ನ ಸ್ವರಾಶಿಯ ಉತ್ಕೃಷ್ಟ ಮತ್ತು ಪವರ್ಫುಲ್ ಸ್ಥಿತಿಯಲ್ಲಿ ಶನಿದೇವನ ಸಂಚಾರ ಆರಂಭ, ಈ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ!

ಕರ್ಕ ರಾಶಿ: ಕರ್ಕ ರಾಶಿಯ ಜಾತಕದವರ ಪಾಲಿಗೆ ಸೂರ್ಯಗ್ರಹಣ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಘನತೆ-ಗೌರವದಲ್ಲಿ ಹೆಚ್ಚಳವಾಗಲಿದೆ ಹಾಗೂ ನಿಮ್ಮ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ಇದರ ಜೊತೆಗೆ ನಿಮ್ಮ ವ್ಯಕ್ತಿತ್ವದಲ್ಲಿಯೂ ಕೂಡ ಹೊಸ ಚೈತನ್ಯ-ಹೊಳಪು ಕಾಣಿಸಲಿದೆ. ಈ ವೇಳೆ ನಿಮಗೆ ನಿಮ್ಮ ಅದೃಷ್ಟದ ಬೆಂಬಲ ಕೂಡ ಲಭಿಸಲಿದೆ. ಇದರಿಂದ ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಅಪಾರ ಮುಂದುವರೆಯುವ ಯೋಗವಿದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಕುಟುಂಬ ಸದಸ್ಯರ ಜೊತೆಗೆ ಸೇರಿ ಯಾವುದಾದರೊಂದು ವಿಶೇಷ ಸ್ಥಳಕ್ಕೆ ಹೋಗುವ ಅವಕಾಶ ನಿಮಗೆ ಸಿಗಲಿದೆ. ಸುಖ-ಸೌಕರ್ಯಗಳ ವೃದ್ಧಿಯ ಜೊತೆಗೆ ವ್ಯಾಪಾರಿಗಳಿಗೆ ಅಪಾರ ಧನಲಾಭವಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ-Sun Jupiter Rahu Conjunction: 12 ವರ್ಷಗಳ ಬಳಿಕ ಸೂರ್ಯ, ಗುರು ಹಾಗೂ ರಾಹುಗಳ ಮೈತ್ರಿ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News