Lunar Eclipse 2023: 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಚಂದ್ರ ಗ್ರಹಣದ ದಿನ ಮೇಷ ರಾಶಿಯಲ್ಲಿ 'ಚತುರ್ಗ್ರಹಿ ಯೋಗ' ನಿರ್ಮಾಣ, 3 ರಾಶಿಗಳಿಗೆ ಬಂಬಾಟ್ ಲಾಟರಿ!

Penumbral Lunar Eclipse 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕರ ಈ ಬಾರಿ ಮೇ 5 ರಂದು ಚಂದ್ರಗ್ರಹಣ ಗೋಚರಿಸಲಿದೆ. ಈ ದಿನ ಬುದ್ಧ ಪೌರ್ಣಿಮೆಯೂ ಕೂಡ ಇದೆ. ಇದಲ್ಲದೆ ನಾಲ್ಕು ಗ್ರಹಗಳ ಚತುರ್ಗ್ರಹಿ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ನಿರ್ಮಾಣದಿಂದ ಮೂರು ರಾಶಿಗಳ ಜನರಿಗೆ ಉತ್ತಮ ಧನಲಾಭದ ಜೊತೆಗೆ ಭಾಗ್ಯೋದಯದ ಯೋಗ ರೂಪಿಸುತ್ತಿದೆ. 

Written by - Nitin Tabib | Last Updated : Apr 30, 2023, 09:06 PM IST
  • ಈ ದಿನ ಬುದ್ಧ ಪೌರ್ಣಿಮೆ ಕೂಡ ಇದೆ. ತುಲಾ ರಾಶಿ ಸ್ವಾತಿ ನಕ್ಷತ್ರದಲ್ಲಿ ಈ ಉಪಛಾಯಾ ಚಂದ್ರಗ್ರಹಣ ಸಂಭವಿಸುತ್ತಿದೆ
  • ಮತ್ತು ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ತನ್ನ ಪ್ರಭಾವ ಬೀರಲಿದೆ. ಈ ದಿನ ನಾಲ್ಕು ಗ್ರಹಗಳ ಚತುರ್ಗ್ರಹಿ ಯೋಗ ಕೂಡ ರೂಪುಗೊಳ್ಳುತ್ತಿದೆ.
  • ಸುದೀರ್ಘ 12 ವರ್ಷಗಳ ಅವಧಿಯ ಬಳಿಕ ಸೂರ್ಯ, ಬುಧ, ಗುರು ಹಾಗೂ ರಾಹುಗಳ ಚತುರ್ಗ್ರಹಿ ಯೋಗದಲ್ಲಿ ಈ ಚಂದ್ರಗ್ರಹಣ ಗೋಚರಿಸುತ್ತಿದೆ.
Lunar Eclipse 2023: 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಚಂದ್ರ ಗ್ರಹಣದ ದಿನ ಮೇಷ ರಾಶಿಯಲ್ಲಿ 'ಚತುರ್ಗ್ರಹಿ ಯೋಗ' ನಿರ್ಮಾಣ, 3  ರಾಶಿಗಳಿಗೆ ಬಂಬಾಟ್ ಲಾಟರಿ! title=
ಚಂದ್ರ ಗ್ರಹಣ ಮತ್ತು ಚತುರ್ಗ್ರಹಿ ಯೋಗ!

Moon Eclipse 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕಾಲಕಾಲಕ್ಕೆ ಚಂದ್ರ ಹಾಗೂ ಸೂರ್ಯ ಗ್ರಹಣಗಳು ಸಂಭವಿಸುತ್ತಲೇ ಇರುತ್ತವೆ ಮತ್ತು ಅವು ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತವೆ. ಈ ಬಾರಿ ಮೇ 5, 2023 ರಂದು ಚಂದ್ರಗ್ರಹಣ ಸಂಭವಿಸುತ್ತಿದ್ದು, ಈ ದಿನ ಬುದ್ಧ ಪೌರ್ಣಿಮೆ ಕೂಡ ಇದೆ. ತುಲಾ ರಾಶಿ ಸ್ವಾತಿ ನಕ್ಷತ್ರದಲ್ಲಿ ಈ ಉಪಛಾಯಾ ಚಂದ್ರಗ್ರಹಣ ಸಂಭವಿಸುತ್ತಿದೆ ಮತ್ತು ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ತನ್ನ ಪ್ರಭಾವ ಬೀರಲಿದೆ. ಈ ದಿನ ನಾಲ್ಕು ಗ್ರಹಗಳ ಚತುರ್ಗ್ರಹಿ ಯೋಗ ಕೂಡ ರೂಪುಗೊಳ್ಳುತ್ತಿದೆ. ಸುದೀರ್ಘ 12 ವರ್ಷಗಳ ಅವಧಿಯ ಬಳಿಕ ಸೂರ್ಯ, ಬುಧ, ಗುರು ಹಾಗೂ ರಾಹುಗಳ ಚತುರ್ಗ್ರಹಿ ಯೋಗದಲ್ಲಿ ಈ ಚಂದ್ರಗ್ರಹಣ ಗೋಚರಿಸುತ್ತಿದೆ. ಹೀಗಾಗಿ ಈ ಗ್ರಹಣದ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ. ಮೇಷ ರಾಶಿಯಲ್ಲಿ ಚತುರ್ಗ್ರಹಿ ಯೋಗದ ಫಲಸ್ವರೂ 3 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಮತ್ತು ಭಾಗ್ಯೋದಯ ಯೋಗ ನಿರ್ಮಾಣಗೊಳ್ಳುತ್ತಿದೆ.  

ಧನು ರಾಶಿ: ಈ ಬಾರಿಯ ಉಪಛಾಯಾ ಚಂದ್ರಗ್ರಹಣ ಧನು ರಾಶಿಯ ಜಾತಕದವರ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂತಾನ ಪಕ್ಷದ ವತಿಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಮನೆಯಲ್ಲಿ ಧಾರ್ಮಿಕ ಹಾಗೂ ಮಂಗಳ ಕಾರ್ಯ ನಡೆಯುವ ಸಾಧ್ಯತೆ ಇದೆ. ಚತುರ್ಗ್ರಹಿ ಯೋಗ ನಿರ್ಮಾಣದ ಕಾರಣ ಯಾತ್ರೆಯ ಯೋಗ ಕೂಡ ಇದೆ. 

ಸಿಂಹ ರಾಶಿ: ಸಿಂಹ ರಾಶಿಯ ಜನರಿಗೆ ಈ ಚಂದ್ರಗ್ರಹಣ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಆಕಸ್ಮಿಕ ಧನಲಾಭದ ಜೊತೆಗೆ ಪ್ರೇಮ ಸಂಬಂಧದಲ್ಲಿ ನಿಮಗೆ ಯಶಸ್ಸು ಸಿಗುವ ನಿರೀಕ್ಷೆ ಇದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮ್ಮ ಆಸೆ ಆಕಾಂಕ್ಷೆಗಳು ಕೂಡ ಈಡೇರಲಿವೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಅಪಾರ ಯಶಸ್ಸು ಸಿಗುವ ಕಾರಣ ಆದಾಯ ಹೆಚ್ಚಾಗಲಿದೆ. ಯಾವುದಾದರೊಂದು ದೊಡ್ಡ ಯೋಜನೆಯಲ್ಲಿ ನೀವು ಯಶಸ್ಸನ್ನು ಪಡೆಯಬಹುದು. 

ಇದನ್ನೂ ಓದಿ-Maha Dhan Rajyog: 50 ವರ್ಷಗಳ ಬಳಿಕ ತಾಯಿ ಲಕ್ಷ್ಮಿ-ಶನಿದೇವನ ಕೃಪೆಯಿಂದ ಕೋಟ್ಯಾಧಿಪತಿಯಾಗುವ ಯೋಗ, ಯಾವ ರಾಶಿಗಳಿಗೆ ಲಾಭ?

ಮೇಷ ರಾಶಿ: ಮೇಷ ರಾಶಿಯ ಜಾತಕದವರ ಈ ಬಾರಿಯ ಚಂದ್ರಗ್ರಹಣ ಶುಭವಾಗಿರಲಿದೆ. ಮೇಷ ರಾಶಿಯ ನೌಕರ ವರ್ಗದ ಜನರಿಗೆ ಪದೋನ್ನತಿಯ ಅವಕಾಶ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿರುದ್ಯೋಗಿಗಳೆ ಆಗಿರಲಿ ಅಥವಾ ಯಾವುದೇ ಉದ್ಯೋಗದಲ್ಲಿರಲಿ ನಿಮಗೆ ಹೊಸ ನೌಕರಿಯ ಅವಕಾಶ ಒದಗಿ ಬರುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವ್ಯಾಪಾರ ವರ್ಗದ ಜನರಿಗೆ ಸಮಯ ಅನುಕೂಲಕರವಾಗಿದ್ದು, ಧನಲಾಭವಾಗುವ ಸಾಧ್ಯತೆ ಇದೆ. ನಿಮಗೆ ಹೊಸ ಆರ್ಡರ್ ಗಳು ಸಿಗಲಿವೆ. ಇದರಿಂದ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ದೀರ್ಘಕಾಲದಿಂದ ನಿಮಗೆ ಸೇರಬೇಕಾದ ಹಣ ನಿಮ್ಮ ಕೈಸೇರಲಿದೆ.

ಇದನ್ನೂ ಓದಿ-Shubh Navpancham Yog: 30 ವರ್ಷಗಳ ಬಳಿಕ ಶನಿ-ಶುಕ್ರರ ಯುತಿಯಿಂದ ನವಪಂಚಮ ರಾಜ ಯೋಗ, ಈ ರಾಶಿಗಳ ಭಾಗ್ಯೋದಯ ಪಕ್ಕಾ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News