ಕೆಟ್ಟ ಸಮಯ ಆರಂಭಕ್ಕೂ ಮುನ್ನ ಸಿಗುತ್ತದೆಯಂತೆ ಈ ಸೂಚನೆಗಳು ..!

ಪ್ರತಿಯೊಬ್ಬರೂ ತಮ್ಮ ಜೀವನದಲ್ಲೂ ಏರಿಳಿತಗಳನ್ನು ನೋಡಲೇಬೇಕು. ಒಳ್ಳೆಯ ಸಮಯ ಕೆಟ್ಟ ಸಮಯ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತದೆ. ಆದರೆ ಇದರ ಪ್ರಮಾಣಗಳು   ಹೆಚ್ಚು ಅಥವಾ ಕಡಿಮೆ ಆಗಿರಬಹುದು ಅಷ್ಟೇ.    

Written by - Ranjitha R K | Last Updated : Jul 5, 2021, 02:45 PM IST
  • ಕೆಟ್ಟ ಸಮಯ ಬರುವುದಕ್ಕೂ ಮುನ್ನ ಸಿಗುತ್ತದೆ ಸೂಚನೆ
  • ಸಣ್ಣ ಸಣ್ಣ ವಿಷಯಗಳಿಗೂ ಜಗಳ, ಮಾನ ಹಾನಿ ಕೂಡಾ ಇದರ ಮುನ್ಸೂಚನೆ
  • ಇದ್ದಕ್ಕಿದಂತೆ ಸಾಕುಪ್ರಾಣಿಗಳ ಸಾವು ಅಥವಾ ಕಣ್ಮರೆ
ಕೆಟ್ಟ ಸಮಯ ಆರಂಭಕ್ಕೂ ಮುನ್ನ ಸಿಗುತ್ತದೆಯಂತೆ ಈ ಸೂಚನೆಗಳು ..! title=
ಕೆಟ್ಟ ಸಮಯ ಬರುವುದಕ್ಕೂ ಮುನ್ನ ಸಿಗುತ್ತದೆ ಸೂಚನೆ (photo zee news)

ನವದೆಹಲಿ : ಪ್ರತಿಯೊಬ್ಬರೂ ತಮ್ಮ ಜೀವನದಲ್ಲೂ ಏರಿಳಿತಗಳನ್ನು ನೋಡಲೇಬೇಕು. ಒಳ್ಳೆಯ ಸಮಯ ಕೆಟ್ಟ ಸಮಯ (Good time , bad time) ಅನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತದೆ. ಆದರೆ ಇದರ ಪ್ರಮಾಣಗಳು   ಹೆಚ್ಚು ಅಥವಾ ಕಡಿಮೆ ಆಗಿರಬಹುದು ಅಷ್ಟೇ.  ಕೆಟ್ಟ ಸಮಯಗಳು ಹೇಳಿ ಕೊಂಡು ಬರುವುದಿಲ್ಲ ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿರಬಹುದು. ಆದರೆ ಜ್ಯೋತಿಷ್ಯದ (Astrology) ದೃಷ್ಟಿಕೋನದಿಂದ, ಕೆಟ್ಟ ಸಮಯಗಳು ಬರುವ ಮೊದಲು  ಅನೇಕ ಸೂಚನೆಗಳನ್ನು ನೀಡುತ್ತದೆಯಂತೆ. ಈಸೂಚನೆಗಳನ್ನು ಅರ್ಥ ಮಾಡಿಕೊಂಡರೆ, ಕೆಟ್ಟ ಸಮಯವನ್ನು ಸರಿಯಾಗಿ ನಿರ್ವಹಿಸುವುದು ಸಾಧ್ಯವಾಗುತ್ತದೆ.  

ಕೆಟ್ಟ ಸಮಯದ ಆರಂಭದ ಸೂಚನೆಗಳು :  
1. ವ್ಯಕ್ತಿಯ ಕೆಟ್ಟ ಸಮಯ ಪ್ರಾರಂಭವಾದಾಗ, ಅನೇಕ ಪ್ರಯತ್ನಗಳ ನಂತರವೂ ಸಣ್ಣ ಕೆಲಸ ಕೂಡಾ ಕೈಗೂಡುವುದಿಲ್ಲ. ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಬರುತ್ತವೆ. 
2. ಮನೆಯಲ್ಲಿ ಪದೇ ಪದೇ ಎಣ್ಣೆಗೆ (Oil) ಸಂಬಂಧಿಸಿದಂತೆ ನಷ್ಟವಾಗುತ್ತದೆ. ಅಂದರೆ ಆಗಾಗ ಎಣ್ಣೆ ಚೆಲ್ಲುತ್ತಿರುತ್ತದೆ.
3. ಸಾಕು ಪ್ರಾಣಿಗಳು ಅಂದರೆ ನಾಯಿ( dog), ಹಸು (cow) ಎಮ್ಮೆಗಳಂತಹ ಪ್ರಾಣಿಗಳು ಕಳೆದುಹೋಗುತ್ತವೆ ಅಥವಾ ಸಾಯುತ್ತವೆ.
4. ಮನೆಯ ಹೊರಗೆ, ಕಪ್ಪು ನಾಯಿ ಕುಳಿತು ತುರಿಸಿಕೊಳ್ಳುತ್ತಿರುವುದು ಕೂಡಾ ಉತ್ತಮ ಬೆಳವಣಿಗೆ ಅಲ್ಲ . ಅಥವಾ ನಾಯಿ ಇತರ ನಾಯಿಗಳೊಂದಿಗೆ ಜಗಳವಾಡುತ್ತಿರುವುದು ಕೂಡ ಕೆಟ್ಟ ಸಮಯ ಸಂಕೇತವಂತೆ. 

ಇದನ್ನೂ ಓದಿ:  Luckiest Nakshatra: ಈ ನಕ್ಷತ್ರದಲ್ಲಿ ಹುಟ್ಟಿದವರ ಮೇಲೆ ಶನಿ ಹಾಗೂ ಬೃಹಸ್ಪತಿಯ ವಿಶೇಷ ಕೃಪೆ ಇರುತ್ತದೆ

5. ಮನೆಯ  ಸದಸ್ಯರ ನಿದ್ರೆ ಇದ್ದಕ್ಕಿದ್ದಂತೆ (Sleeping habits) ಕಡಿಮೆಯಾಗುವುದು. ಅಂದರೆ ಸರಿಯಾಗಿ ನಿದ್ದೆ ಬಾರದೆ ಇರುವುದು . 
6. ಮನೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಗುವುದು. ಹತ್ತಿರದ ಸಂಬಂಧಿಗಳು ದೂರವಾಗುವುದು. 
7. ಅನಗತ್ಯವಾಗಿ ನ್ಯಾಯಾಲಯ-ನ್ಯಾಯಾಲಯದ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು.  ಗೌರವಕ್ಕ್ ಧಕ್ಕೆ ಬರುವುದು. 
8. ಶುಭ ಕಾರ್ಯಗಳು ಅಥವಾ ಹಬ್ಬಗಳ ಸಂದರ್ಭಗಳಲ್ಲಿ, ಕುಟುಂಬ ಸದಸ್ಯರಲ್ಲಿ ಜಗಳಗಳಾಗುವುದು  ಅಥವಾ ಯಾರಾದರೂ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯಕ್ಕೆ ಒಳಗಾಗುವುದು.

ಇದನ್ನೂ ಓದಿ:  ಅಂಗೈ ತುರಿಕೆ ಸೇರಿದಂತೆ ಈ ಲಕ್ಷಣಗಳು ನೀಡುತ್ತವೆ ನಷ್ಟದ ಮುನ್ಸೂಚನೆ

ಈ ಎಲ್ಲಾ ಸೂಚನೆಗಳು ಕೆಟ್ಟ ಸಮಯ ಆರಂಭವಾಯಿತು ಎನ್ನುವುದನ್ನು ತೋರಿಸುತ್ತದೆ. ಹಾಗಾಗಿ ಈ ಸೂಚನೆಗಳು ಸಿಕ್ಕಾಗ ಎಚ್ಚೆತ್ತುಕೊಂಡರೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಹಿರಿಯರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News