"ವರುಷಕೊಂದು ಹೊಸತು ಜನ್ಮ, ವರುಷಕೊಂದು ಹೊಸತು ನೆಲೆಯು, ಅಖಿಲ ಜೀವಜಾತಕೆ"

Yugadi : ಭಾರತವು ವೈವಿಧ್ಯಮಯ ದೇಶವಾಗಿದ್ದು, ವಿವಿಧ ಸಾಂಸ್ಕೃತಿಕ ಹಿನ್ನೆಲೆಗೆ ಸೇರಿದ ಜನರು ವಾಸಿಸುತ್ತಾರೆ. ಆದ್ದರಿಂದ ವರುಷಪೂರ್ತಿ ಒಂದಲ್ಲ ಒಂದು ಹಬ್ಬವನ್ನು ಆಚರಿಸುತ್ತೇವೆ. ಯುಗಾದಿಯ ದಿನದಂದು ದೇಶಾದ್ಯಂತ ಪ್ರಾದೇಶಿಕ ಹೊಸ ವರ್ಷದ ಆಚರಣೆಗಳನ್ನು ಪ್ರಾರಂಭಿಸುತ್ತದೆ. ಜನರು ಉತ್ಸಾಹದಿಂದ ಆಚರಿಸುವ ಪ್ರಾದೇಶಿಕ ಹೊಸ ವರ್ಷದ ಹಬ್ಬಗಳಲ್ಲಿ ಯುಗಾದಿಯೂ ಒಂದು.  

Written by - Zee Kannada News Desk | Last Updated : Mar 22, 2023, 12:34 PM IST
  • ಯುಗಾದಿ ಹಬ್ಬ ಸಾಂಪ್ರದಾಯಿಕ ಆಚರಣೆಗಳನ್ನು ಒಳಗೊಂಡಿರುವ ಹಬ್ಬ.
  • ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು.
  • ಯುಗಾದಿ ಪಚಡಿ ಜೀವನದ ಸಾರವನ್ನು ಎತ್ತಿ ತೋರಿಸುತ್ತದೆ.
"ವರುಷಕೊಂದು ಹೊಸತು ಜನ್ಮ, ವರುಷಕೊಂದು ಹೊಸತು ನೆಲೆಯು, ಅಖಿಲ ಜೀವಜಾತಕೆ" title=

Yugadi Festival : ಯುಗಾದಿ ಹಬ್ಬ ಸಾಂಪ್ರದಾಯಿಕ ಆಚರಣೆಗಳನ್ನು ಒಳಗೊಂಡಿರುವ ಹಬ್ಬ. ಈ ದಿನದಂದು ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "ಬೇವು-ಬೆಲ್ಲ." ಜೀವನದಲ್ಲಿ ಕಹಿ ನೆನಪುಗಳು ಸಿಹಿ ಕನಸುಗಳು ಚಿಗುರಲಿ ಎಂಬ ಉದ್ದೇಶದಿಂದ ಬೇವು ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.

ಈ ಯುಗಾದಿಹಬ್ಬವನ್ನು ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ಹೆಸರಿನಿಂದ ವಿಭಿನ್ನವಾಗಿ ಆಚರಣೆಯನ್ನು ಮಾಡುತ್ತಾರೆ. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣದಲ್ಲಿ ಯುಗಾದಿ ಹೆಸರಿನಲ್ಲಿ ಆಚರಿಸಿದರೆ, ಮಹಾರಾಷ್ಟ್ರ, ಗೋವಾ ಮತ್ತು ಕೊಂಕಣ ಪ್ರದೇಶದಲ್ಲಿ ಗುಡಿ ಪಾಡ್ವಾ ಎಂಬ ಹೆಸರಿನಿಂದ ಈ ಹಬ್ಬವನ್ನು ಆಚರಿಸುತ್ತಾರೆ.  ಈ ಹಬ್ಬದ ಪ್ರಾರಂಭದೊಂದಿಗೆ ಜನರು ಬೇಗ ಎದ್ದು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ, ಹೂವುಗಳಿಂದ ಅಲಂಕರಿಸುತ್ತಾರೆ ಮತ್ತು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಮಾವಿನ ಎಲೆಗಳ ಹೂಗಳನ್ನು ಬಾಗಿಲುಗಳಿಗೆ ಕಟ್ಟಲಾಗುತ್ತದೆ.  

ದಿನವು ಎಣ್ಣೆ ಸ್ನಾನದೊಂದಿಗೆ ಪ್ರಾರಂಭವಾಗುತ್ತದೆ, ನಂತರ ಪ್ರಾರ್ಥನೆಗಳು. ಯುಗಾದಿ ಹಬ್ಬಕ್ಕೆ ಸಂಬಂಧಿಸಿದ ಅನೇಕ ಪದ್ಧತಿಗಳಿವೆ, ಅವುಗಳಲ್ಲಿ ಒಂದು ಯುಗಾದಿ ಪಚಡಿ, ಹಸಿ ಮಾವು, ಹೂವುಗಳು, ಉಪ್ಪು, ಬೇವಿನ ಸೊಪ್ಪು, ಬೆಲ್ಲ ಮತ್ತು ಹುಣಸೆಹಣ್ಣುಗಳಿಂದ ಮಾಡಿದ ವಿಶೇಷ ಪ್ರಸಾದವಾಗಿದೆ. ಯುಗಾದಿ ಪಚಡಿ ಜೀವನದ ಸಾರವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಒದಿ-Ugadi Horoscope : ಈ ರಾಶಿಯವರ ಜೀವನದಲ್ಲಿ ಕಹಿ ಅಳಿಸಿ ಸಿಹಿಯನ್ನೇ ತುಂಬಲಿದೆ ಯುಗಾದಿ!  

ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು - ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ: 

ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||

ಸಾಕಷ್ಟು ವಿಶೇಷತೆಯನ್ನು ಹೊಂದಿರುವ ಯುಗಾದಿ ಹಬ್ಬ ಹಿಂದುಗಳ ಪವಿತ್ರ ಹಬ್ಬ. ಎಲ್ಲರೂ ಬೇವು ಬೆಲ್ಲದ ರೀತಿಯಲ್ಲಿ ಜೀವನದ ಸಿಹಿಕಹಿಯನ್ನು ಸಮಾನವಾಗಿ ತೆಗೆದುಕೊಳ್ಳುತ್ತ ಖುಷಿಯಿಂದ ಬಾಲೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಷಯಗಳು. 

ಇದನ್ನೂ ಒದಿ-Happy Ugadi 2023: ನಿಮ್ಮ ಪ್ರೀತಿ-ಪಾತ್ರರಿಗೆ ಹಂಚಿಕೊಳ್ಳಲು ಯುಗಾದಿ ಹಬ್ಬದ ಶುಭಾಶಯಗಳು ಇಲ್ಲಿವೆ  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News