ಜಾಗಿಂಗ್ ವೇಳೆ ಹಾರ್ಟ್ ಅಟ್ಯಾಕ್:ಯುವಕ ಸಾವು

ಇಂದು ಬೆಳಗ್ಗೆ ಬಿಇಎಲ್ ಮೈದಾನದಲ್ಲಿ ಜಾಗಿಂಗ್ ಮಾಡುವಾಗ ಇದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ. ಸಾರ್ವಜನಿಕರು ಕೂಡಲೇ ಸಮೀಪದ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಯುವಕನ‌ ಪ್ರಾಣ ಪಕ್ಷಿ ಹಾರಿಹೋಗಿತ್ತು. 

Written by - VISHWANATH HARIHARA | Edited by - Yashaswini V | Last Updated : Oct 25, 2022, 11:04 AM IST
  • ಇಂದು ಬೆಳಗ್ಗೆ ಬಿಇಎಲ್ ಮೈದಾನದಲ್ಲಿ ಜಾಗಿಂಗ್ ಮಾಡುವಾಗ ಇದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ.
  • ಸಾರ್ವಜನಿಕರು ಕೂಡಲೇ ಸಮೀಪದ ಆಸ್ಪತ್ರೆ ಕರೆದೊಯ್ದಿದ್ದಾರೆ.
  • ಆದರೆ ಅಷ್ಟೊತ್ತಿಗಾಗಲೇ ಯುವಕನ‌ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಜಾಗಿಂಗ್ ವೇಳೆ ಹಾರ್ಟ್ ಅಟ್ಯಾಕ್:ಯುವಕ ಸಾವು  title=
Heart attack while jogging

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜಿಮ್ ನಲ್ಲಿ‌ ಕಸರತ್ತು ಮಾಡಬೇಕಾದರೆ‌‌ ಏಕಾಏಕಿ ಕುಸಿದುಬಿದ್ದು ಎಷ್ಟೋ ಮಂದಿ ಮೃತಪಟ್ಟಿರುವ ನಿದರ್ಶನ ಇದೆ. ಈಗ ಜಾಗಿಂಗ್ ಮಾಡುವಾಗ ಯುವಕನೋರ್ವ ಏಕಾಏಕಿ‌ ಕುಸಿದುಬಿದ್ದು ಸಾವನ್ನಪ್ಪಿರುವ ದುರ್ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದಿದೆ‌.

ಸಾವನ್ನಪ್ಪಿರುವ ಯುವಕನ ಹೆಸರು ತಿಳಿದುಬಂದಿಲ್ಲ. ಇಂದು ಬೆಳಗ್ಗೆ ಬಿಇಎಲ್ ಮೈದಾನದಲ್ಲಿ ಜಾಗಿಂಗ್ ಮಾಡುವಾಗ ಇದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ. ಸಾರ್ವಜನಿಕರು ಕೂಡಲೇ ಸಮೀಪದ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಯುವಕನ‌ ಪ್ರಾಣ ಪಕ್ಷಿ ಹಾರಿಹೋಗಿತ್ತು. 

ಇದನ್ನೂ ಓದಿ- Hypertension: ನಿಮಗೂ ಹೈ ಬಿಪಿ ಇದೆಯೇ? ಈ ಆಹಾರಗಳಿಂದ ದೂರವಿರಿ

ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ‌. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸದ್ಯ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ- High BP: ಅಧಿಕ ರಕ್ತದೊತ್ತಡಕ್ಕೆ ಆಹ್ವಾನ ನೀಡುವ ಈ 5 ಸಂಗತಿಗಳಿಂದ ಇಂದೇ ಅಂತರ ಕಾಯ್ದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News