ಯಡಿಯೂರಪ್ಪಗೆ ಸೆ. 4ರವರೆಗೆ ರಿಲೀಫ್

ಡಾ.ಶಿವರಾಂ ಕಾರಂತ್ ಬಡಾವಣೆ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಸೆಪ್ಟೆಂಬರ್ 4ರವರೆಗೆ ಬಂಧಿಸದಂತೆ ಎಸಿಬಿ ತನಿಖಾಧಿಕಾರಿಗಳಿಗೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ.

Last Updated : Aug 31, 2017, 05:33 PM IST
  • ಸೆಪ್ಟೆಂಬರ್ 4ರವರೆಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸದಂತೆ ಎಸಿಬಿ ತನಿಖಾಧಿಕಾರಿಗಳಿಗೆ ರಾಜ್ಯ ಹೈಕೋರ್ಟ್ ಸೂಚನೆ
ಯಡಿಯೂರಪ್ಪಗೆ ಸೆ. 4ರವರೆಗೆ ರಿಲೀಫ್ title=

ಬೆಂಗಳೂರು, ಆ. 31: ಡಾ.ಶಿವರಾಂ ಕಾರಂತ್ ಬಡಾವಣೆ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಸೆಪ್ಟೆಂಬರ್ 4ರವರೆಗೆ ಬಂಧಿಸದಂತೆ ಎಸಿಬಿ ತನಿಖಾಧಿಕಾರಿಗಳಿಗೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ.

ಈ ಹಿಂದೆ ಕೂಡ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಆದೇಶಿದ್ದ ರಾಜ್ಯ ಹೈಕೋರ್ಟ್ ಈಗ ಇನ್ನೂ ನಾಲ್ಕು ದಿನ ವಿಸ್ತರಿಸಿದೆ.

ಯಡಿಯೂರಪ್ಪ ವಿರುದ್ದ ಭ್ರಷ್ಟಾಚಾರ ನಿರ್ಮೂಲನ ದಳ (ಎಸಿಬಿ) ಎರಡು ದೂರುಗಳನ್ನು ದಾಖಲಿಸಿತ್ತು. ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಯಡಿಯೂರಪ್ಪ ಮನವಿ ಮಾಡಿದ್ದರು. ಈ ವಿಚಾರಣೆ ಕೈಗೆತ್ತಿಕೊಂಡ ಹೈಕೀರ್ಟ್ ಸೆ. 4ರವರೆಗೆ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಎಸಿಬಿಗೆ ಸೂಚಿಸಿದೆ‌.

Trending News