ಬಿಜೆಪಿ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುತ್ತೇವೆ: ಕಾಂಗ್ರೆಸ್

ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯನವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

Written by - Zee Kannada News Desk | Last Updated : Sep 29, 2021, 12:50 PM IST
  • ಸಿದ್ದರಾಮಯ್ಯನವರ ಪಂಚೆ ಕಳಚಿದ ಪ್ರಸಂಗದ ಬಗ್ಗೆ ಟೀಕಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
  • ಮುಂದಿನ ನಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುತ್ತೇವೆ ಚಿಂತಿಸಬೇಡಿ
  • ಪಂಚೆ ಬಗ್ಗೆ ಮಾತನಾಡುವ ಮೊದಲು ಬಿಜೆಪಿ ನಾಯಕರು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ ಎಂದ ಕಾಂಗ್ರೆಸ್
ಬಿಜೆಪಿ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುತ್ತೇವೆ: ಕಾಂಗ್ರೆಸ್ title=
ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ (Photo Courtesy:@Zee News)

ಬೆಂಗಳೂರು: ಮುಂದೆ ನಮ್ಮ ಸರ್ಕಾರದಲ್ಲಿ ಬಿಜೆಪಿ(BJP) ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ. ಇತ್ತೀಚೆಗಷ್ಟೇ ಸದನದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್(Mysuru Gang Rape) ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ನವರು ಗಂಭೀರವಾಗಿ ಚರ್ಚೆ ಮಾಡುತ್ತಿರುವಾಗ ಅವರ ಪಂಚೆ ಕಳಚಿತ್ತು. ಈ ಪ್ರಸಂಗ ಇಡೀ ಸದನವನ್ನೇ ನಗೆಗಡಲಿನಲ್ಲಿ ತೇಲುವಂತೆ ಮಾಡಿತ್ತು. ಇದೇ ವಿಚಾರವಾಗಿ ಬಿಜೆಪಿ ನಾಯಕರು ಟೀಕಿಸಿದ್ದರು. ಇದಕ್ಕೆ ಬುಧವಾರ ಟ್ವೀಟ್ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ.

ಇದನ್ನೂ ಓದಿ: Benglauru: ಬೆಂಗಳೂರಿನ ಬೋರ್ಡಿಂಗ್ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್

‘ಸಿದ್ದರಾಮಯ್ಯನವರ ಪಂಚೆ(Siddaramaiah Dhoti) ಆಕಸ್ಮಿಕವಾಗಿ ಕಳಚಿಬೀಳುವುದು ಸಹಜ, ಆದರೆ ಬಿಜೆಪಿ ನಾಯಕರು ತಮ್ಮ ಪ್ಯಾಂಟ್‌ನ್ನು ತಾವೇ ಕಳಚುವುದು ಅಸಹ್ಯ. ಕಳಚಿದ ನಂತರ ವಿಡಿಯೋ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ.  ಮುಂದೆ ನಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುವೆವು ಚಿಂತಿಸಬೇಡಿ!’ ಎಂದು ಕಾಂಗ್ರೆಸ್ ಕುಟುಕಿದೆ.

‘ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು.ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿ(BJP) ನಾಯಕರಿಗೆ ಸಿದ್ದರಾಮಯ್ಯನವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೊದಲು ಅವರು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ’ ಅಂತಾ ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಈ ಬಾರಿ ದಸರಾ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆಯ್ಕೆ

#ತಾಲಿಬಾನಿಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್(Congress), ‘ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಅನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ ಎಂದಿದ್ದರು, ಆದರೆ ಸುರತ್ಕಲ್‌ನಲ್ಲಿ ಬಿಜೆಪಿಯ ಭಯೋತ್ಪಾದಕ ಪಡೆ ನಡೆಸಿದ ಅನೈತಿಕ ಪೊಲೀಸ್‌ಗಿರಿಯ ಬಗ್ಗೆ ತುಟಿ ಬಿಚ್ಚದೆ ಆರೋಪಿಗಳಿಗೆ ಸ್ಟೇಶನ್ ಬೇಲ್ ನೀಡಿ ತಕ್ಷಣವೇ ಬಿಟ್ಟು ಕಳಿಸಿದ್ದೇಕೆ. ರಾಜ್ಯವನ್ನು ತಾಲಿಬಾನಿಕರಣ ಮಾಡಲು ಬಿಜೆಪಿ ಮುಂದಾಗಿದೆ’ ಅಂತಾ ಕಾಂಗ್ರೆಸ್ ಆರೋಪಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News