ಸಂವಿಧಾನವನ್ನು ಬದಲಾಯಿಸುವುದಗೊಸ್ಕರವೇ ನಾವು ಬಂದಿರೋದು- ಅನಂತಕುಮಾರ ಹೆಗಡೆ

     

Last Updated : Dec 24, 2017, 06:23 PM IST
  • ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ನಾವು ಬದಲಾವಣೆ ಮಾಡುತ್ತೇವೆ ಅದಕ್ಕೆ ನಾವು ಬಂದಿರೋದು ಎಂದು ಎಂದು ಭಾಷಣದ ಸಂದರ್ಭದಲ್ಲಿ ಹೇಳಿದ್ದಾರೆ.
  • ಜಾತ್ಯತೀತರು ಎಂದು ಹೇಳಿಕೊಳ್ಳುವವರ ಬಗ್ಗೆ ಅನುಮಾನ ಮೂಡುತ್ತದೆ. ಜಾತ್ಯತೀತರಿಗೆ, ವಿಚಾರವಾದಿಗಳಿಗೆ ತಮ್ಮ ಅಪ್ಪ–ಅಮ್ಮನ ಗುರುತೇ ಇಲ್ಲ’ ಎಂದು ವಿಚಾರವಾದಿಗಳು,ಜ್ಯಾತ್ಯಾತೀತವಾದಿಗಳ ಕುರಿತಾಗಿ ಟೀಕಿಸಿದ್ದಾರೆ.
ಸಂವಿಧಾನವನ್ನು ಬದಲಾಯಿಸುವುದಗೊಸ್ಕರವೇ ನಾವು ಬಂದಿರೋದು- ಅನಂತಕುಮಾರ ಹೆಗಡೆ  title=
ಸಂಗ್ರಹ ಚಿತ್ರ

ಬೆಂಗಳೂರು: ಸಂವಿಧಾನವನ್ನು ಬದಲಾಯಿಸುವುದಗೊಸ್ಕರವೇ  ನಾವು  ಬಂದಿರೋದು ಅದನ್ನು ನಾವು ಮಾಡಿಯೇ ತೀರುತ್ತೇವೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರಿನಲ್ಲಿ  ಬ್ರಾಹ್ಮಣ ಮಹಾಸಭಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹೆಗ್ಡೆ ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ, ಆದ್ದರಿಂದ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ನಾವು ಬದಲಾವಣೆ ಮಾಡುತ್ತೇವೆ ಅದಕ್ಕೆ ನಾವು ಬಂದಿರೋದು ಎಂದು  ಎಂದು ಭಾಷಣದ ಸಂದರ್ಭದಲ್ಲಿ  ಹೇಳಿದ್ದಾರೆ. ಈಗ ಭಾಷಣದ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಕೇಂದ್ರ ಮಂತ್ರಿಗಳ ಈ ಹೇಳಿಕೆಗೆ ರಾಜ್ಯದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೆಲವರು ಅವರನ್ನು ಕೇಂದ್ರ ಸಂಪುಟ ಸಚಿವ ಹುದ್ದೆಯಿಂದ ತೆಗೆದು ಹಾಕಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ಇತ್ತೀಚೆಗೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ  ಸಚಿವರು ಭಾಷಣದ ಮಧ್ಯದಲ್ಲಿಯೇ  ವಿಚಾರವಾದಿಗಳ ಬಗ್ಗೆ ಪ್ರಸ್ತಾಪಿಸುತ್ತಾ  ಯಾವನೇ ಒಬ್ಬ ಮುಸ್ಲಿಂ ಆಗಲಿ, ಬ್ರಾಹ್ಮಣ ಆಗಲಿ, ಕ್ರೈಸ್ತನಾಗಲಿ ತಾನು ಇಂತಹ ಜಾತಿಗೆ ಸೇರಿದವನು ಎಂದು ಹೇಳಿಕೊಂಡರೆ ಅಂಥವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಆದರೆ, ಜಾತ್ಯತೀತರು ಎಂದು ಹೇಳಿಕೊಳ್ಳುವವರ ಬಗ್ಗೆ ಅನುಮಾನ ಮೂಡುತ್ತದೆ. ಜಾತ್ಯತೀತರಿಗೆ, ವಿಚಾರವಾದಿಗಳಿಗೆ ತಮ್ಮ ಅಪ್ಪ–ಅಮ್ಮನ ಗುರುತೇ ಇಲ್ಲ’ ಎಂದು ವಿಚಾರವಾದಿಗಳು,ಜ್ಯಾತ್ಯಾತೀತವಾದಿಗಳ ಕುರಿತಾಗಿ ಟೀಕಿಸಿದ್ದಾರೆ ಎಂದು ಹೇಳಲಾಗಿದೆ.

Trending News