ಪುಲಿಕೇಶಿನಗರದ ಕೊಳೆ ಪೊರಕೆಯಿಂದ ತೊಳೆಯಲಿದ್ದೇವೆ: ಅಭ್ಯರ್ಥಿ ಸುರೇಶ್ ರಾಥೋಡ್

 ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿರುವ ಸುರೇಶ್‌ ರಾಥೋಡ್‌ ಅವರು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಹಾಗೂ ದೇಶದ ಅತ್ಯುತ್ತಮ ಯುವ ರಾಜಕಾರಣಿ ಪ್ರಶಸ್ತಿಗೆ ಭಾಜನರಾಗಿರುವ ರಾಘವ್ ಚಡ್ಡಾ ಹಾಗೂ ನೂರಾರು ಕಾರ್ಯಕರ್ತರೊಟ್ಟಿಗೆ ಬೃಹತ್ ರ್ಯಾಲಿ ಹಾಗೂ ಮೆರವಣಿಗೆ ಮೂಲಕ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

Written by - Manjunath Hosahalli | Edited by - Manjunath N | Last Updated : Apr 19, 2023, 06:02 PM IST
  • ಪುಲಿಕೇಶಿ ನಗರದಲ್ಲಿ ಆಡಳಿತ ನಡೆಸಿರುವ ಶಾಸಕರು ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಿಲ್ಲ.
  • ಜನರಿಗೆ ಅವರ ಮೇಲೆ ಇಟ್ಟಿದ್ದ ನಂಬಿಕೆ ಹೋಗಿದೆ
  • ಈ ಮೂಲಕ ಪುಲಿಕೇಶಿ ನಗರದ ಕೊಳೆಯನ್ನ ಪೊರಕೆ ತೊಳೆದುಹೋಗಲಿದೆ ಎಂದು ಅಖಂಡಾಗೆ ಟಾಂಗ್ ಕೊಟ್ರು
ಪುಲಿಕೇಶಿನಗರದ ಕೊಳೆ ಪೊರಕೆಯಿಂದ ತೊಳೆಯಲಿದ್ದೇವೆ: ಅಭ್ಯರ್ಥಿ ಸುರೇಶ್ ರಾಥೋಡ್  title=

ಬೆಂಗಳೂರು: ಅಖಂಡ ಶ್ರೀನಿವಾಸ್ ಮೂರ್ತಿಯ ಅಖಾಡ ಅಂತಾನೇ ಹೆಸರಿರುವ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಲ್ಲಿ ಇಂದು ಅದ್ದೂರಿಯಾಗಿ ಮನಾಮಪತ್ರ ಸಲ್ಲಿಕೆ ಆಗಿದೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿರುವ ಸುರೇಶ್‌ ರಾಥೋಡ್‌ ಅವರು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಹಾಗೂ ದೇಶದ ಅತ್ಯುತ್ತಮ ಯುವ ರಾಜಕಾರಣಿ ಪ್ರಶಸ್ತಿಗೆ ಭಾಜನರಾಗಿರುವ ರಾಘವ್ ಚಡ್ಡಾ ಹಾಗೂ ನೂರಾರು ಕಾರ್ಯಕರ್ತರೊಟ್ಟಿಗೆ ಬೃಹತ್ ರ್ಯಾಲಿ ಹಾಗೂ ಮೆರವಣಿಗೆ ಮೂಲಕ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

ಇಂದು ಮಧ್ಯಾಹ್ನ 2 ಗಂಟೆಗೆ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್‌ ರಾಥೋಡ್‌ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಮುನೇಶ್ವರ ನಗರದಲ್ಲಿರುವ ಮುನೇಶ್ವರ ದೇವಸ್ಥಾನ, ಡಾ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮತ್ತು ಡಿಜೆ ಹಳ್ಳಿ ರಸ್ತೆಯಲ್ಲಿ ಇರುವ ಡಿಜೆ ಹಳ್ಳಿ ಮಹಸ್ರಿ ಮಹಾ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ: ಯಡಿಯೂರಪ್ಪನವರ ರಾಜಕೀಯ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆದಿತ್ತು ಸಿಕೆಆರ್ 454..! 

ಬಳಿಕ ಆಪ್ ಪಕ್ಷದ ಅಭ್ಯರ್ಥಿ ಸುರೇಶ್‌ ರಾಥೋಡ್‌ ಮತ್ತು  ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಡಿಜೆ ಹಳ್ಳಿ ಮಹಸ್ರಿ ಮಹಾ ದರ್ಗಾದಿಂದ ಫ್ರೇಸರ್ ಟೌನ್ ಅಶೋಕ ಥಿಯೇಟರ್‌ವರೆಗೆ ಬೃಹತ್ ರ್ಯಾಲಿ ಹಾಗೂ ಮೆರವಣಿಗೆ ಮೂಲಕ ತೆರಳಿ ಫ್ರೇಸರ್ ಟೌನ್ ನಲ್ಲಿರುವ ಆರ್ ವಿ ಕಾಲೇಜಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೀಟು ಮೀಸಲಿಟ್ಟ ಕಾಂಗ್ರೆಸ್...!

ಇನ್ನು ಈ ವೇಳೆ ಮಾತನಾಡಿದ ಸುರೇಶದ ರಾಥೋಡ್, ಪುಲಿಕೇಶಿ ನಗರದಲ್ಲಿ ಆಡಳಿತ ನಡೆಸಿರುವ ಶಾಸಕರು ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಿಲ್ಲ. ಜನರಿಗೆ ಅವರ ಮೇಲೆ ಇಟ್ಟಿದ್ದ ನಂಬಿಕೆ ಹೋಗಿದೆ. ಈ ಮೂಲಕ ಪುಲಿಕೇಶಿ ನಗರದ ಕೊಳೆಯನ್ನ ಪೊರಕೆ ತೊಳೆದುಹೋಗಲಿದೆ ಎಂದು ಅಖಂಡಾಗೆ ಟಾಂಗ್ ಕೊಟ್ರು. ಇನ್ನು  ನಮ್ಮ ಆಮ್ ಆದ್ಮಿ ಪಾರ್ಟಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಹೀಗಾಗಿ ನಾವು ಭರ್ಜರಿಯಾಗಿ ಗೆಲುವು ಸಾಧಿಸಿಲಿದ್ದೇವೆ ಎಂದು ರಾಥೋಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News