"ಭದ್ರಾ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸುವ ಕಾರ್ಯ ಶೀಘ್ರವೇ ಪೂರ್ಣ"- ಡಿಸಿಎಂ ಸಚಿವ ಡಿ.ಕೆ.ಶಿವಕುಮಾರ್

“ಭದ್ರಾ ಜಲಾಶಯದ ಏತ ನೀರಾವರಿ ಯೋಜನೆ ಅಡಿಯಲ್ಲಿ ತರೀಕೆರೆ, ಕಡೂರು, ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬುವ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. 

Written by - Prashobh Devanahalli | Edited by - Manjunath N | Last Updated : Dec 11, 2023, 09:20 PM IST
  • 2023 ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಇತರೆ ಕಾನೂನು ತಿದ್ದುಪಡಿ’ ವಿದೇಯಕವನ್ನು ಮಂಡಿಸಿದರು
  • ಉಪನಗರ ವರ್ತುಲ ರಸ್ತೆ ಪ್ರಾಧಿಕಾರದಿಂದ ಈ ಯೋಜನೆ ಅನುಷ್ಠಾನ ಸಾಧ್ಯವಿಲ್ಲ
  • ನಮ್ಮ ಅಧಿಕಾರಿಗಳ ಜತೆ ಸಾಧಕ ಬಾದಕಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು
"ಭದ್ರಾ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸುವ ಕಾರ್ಯ ಶೀಘ್ರವೇ ಪೂರ್ಣ"- ಡಿಸಿಎಂ ಸಚಿವ ಡಿ.ಕೆ.ಶಿವಕುಮಾರ್ title=

ಬೆಳಗಾವಿ: “ಭದ್ರಾ ಜಲಾಶಯದ ಏತ ನೀರಾವರಿ ಯೋಜನೆ ಅಡಿಯಲ್ಲಿ ತರೀಕೆರೆ, ಕಡೂರು, ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬುವ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. 

ವಿಧಾನಸಭೆ ಕಲಾಪದಲ್ಲಿ ಸೋಮವಾರ ಕಡೂರು ಶಾಸಕ ಕೆ.ಎಸ್.ಆನಂದ್ ಅವರು, ಭದ್ರಾ ಏತ ನೀರಾವರಿ ಯೋಜನೆ ಹಣದ ಕೊರತೆಯಿಂದಾಗಿ ಕುಂಠಿತಗೊಂಡಿದೆ.ಇದಕ್ಕೆ ನಬಾರ್ಡ್ 29ರ ಅಡಿಯಲ್ಲಿ ಹಣ ಬಿಡುಗಡೆಗೊಳಿಸಿ ಶೀಘ್ರವೇ ಕಾಮಗಾರಿ ಪೂರ್ಣಗಳಿಸಬೇಕು ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್ ಅವರು ಹೇಳಿದ್ದಿಷ್ಟು;

ಇದನ್ನೂ ಓದಿ: ಹಿಮೋಫಿಲಿಯಾ ಪತ್ತೆಗೆ ಎಲ್ಲಾ ಜಿಲ್ಲಾ ಆಸ್ಪತೆಗಳಿಗೆ ಉಪಕರಣ ನೀಡಲಾಗುವುದು : ಸಚಿವ ದಿನೇಶ್ ಗುಂಡೂರಾವ್

“ತರಿಕೆರೆ, ಕಡೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ 197 ಕೆರೆಗಳಿಗೆ ನೀರು ತುಂಬಿಸಲು ಕೇಳಿದ್ದಾರೆ.ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ, ರೂ. 1,281 ಕೋಟಿ ವೆಚ್ಚದಲ್ಲಿ 4 ಹಂತದಲ್ಲಿ ಯೋಜನೆ ಪೂರ್ಣಗೊಳಿಸಲು ಈಗಾಗಲೇ ಆಡಳಿತಾತ್ಮಕ ಅನುಮೊದನೆ ನೀಡಲಾಗಿದೆ.ಸದರಿ ಯೋಜನೆಯನ್ನ ಮೊದಲನೆ ಹಾಗೂ ಎರಡನೇ ಹಂತದ ಕಾಮಗಾರಿಯನ್ನ ಗುತ್ತಿಗೆ ನೀಡಲಾಗಿದ್ದು ವಿವಿಧ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ನಬಾರ್ಡ್ ಸಹಾಯ ಧನದ ಮೂಲಕ ಶೀಘ್ರವೇ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು.ಸದರಿ ಯೋಜನೆಯನ್ನ ಶೀಘ್ರವೇ ಅನುಷ್ಠಾನಗೊಳಿಸುವ ಹಿತ ದೃಷ್ಟಿಯಿಂದ ಮೊದಲನೇ ಹಂತದಲ್ಲಿ ರೂ. 464 ಕೋಟಿ ವೆಚ್ಚದ ಹಾಗೂ ರೂ. 382 ಕೋಟಿ ವೆಚ್ಚದ ಎರಡನೇ ಹಂತದ ಬಾಕಿ ಕಾಮಗಾರಿ ಸೇರಿದಂತೆ ಒಟ್ಟಾರೆಯಾಗಿ ಕಾಮಗಾರಿಗೆ ಅವಶ್ಯಕತೆ ಇರುವ ರೂ. 847 ಕೋಟಿ ಸಹಾಯ ಧನದ ಬಿಡುಗಡೆಯು ನಬಾರ್ಡ್ ಸಂಸ್ಥೆಯ ಪರಿಶೀಲನೆ ಹಂತದಲ್ಲಿದೆ. ಈ ಕಾಮಗಾರಿಗೆ ಹಣದ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ನಾವು ಇದನ್ನು ನಬಾರ್ಡ್ ಗೆ ನೀಡಲಾಗಿದ್ದು, ಆದಷ್ಟು ಬೇಗ ಇದನ್ನು ಪೂರ್ಣಗೊಳಿಸಲಾಗುವುದು” ಎಂದರು.

ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಅವರು, “2016ರಲ್ಲಿ 6 ತಾಲೂಕುಗಳ ಸ್ಥಳೀಯ ಪ್ರಾಧಿಕಾರದಿಂದ ಎಸ್ಟಿಆರ್ಆರ್ ಪ್ರಾಧಿಕಾರಕ್ಕೆ 2,24,292 ಎಕರೆ ಹಸ್ತಾಂತರವಾಗಿದ್ದು, ಈ ಭೂಮಿಯನ್ನು ಆ ತಾಲೂಕುಗಳ ಪ್ರಾಧಿಕಾರಕ್ಕೆ ಹಿಂದಿರುಗಿಸಬೇಕು” ಎಂದು ಉಪಮುಖ್ಯಮಂತ್ರಿಗಳ ಗಮನ ಸೆಳೆದರು.

ಇದನ್ನೂ ಓದಿ: ಬಗೆ ಬಗೆಯ ಕಡಲೆಕಾಯಿ..ಕೆಜಿಗೆ 80 ರೂಪಾಯಿ

ಇದಕ್ಕೆ ಉತ್ತರಿಸಿದ ಶಿವಕುಮಾರ್ ಅವರು,“ಎಸ್ ಟಿಆರ್ ಯೋಜನೆ ಪ್ರಾಧಿಕಾರದ ಬಗ್ಗೆ ಶಾಸಕರು ಗಮನ ಸೆಳೆದಿದ್ದು, ಈ ಉಪನಗರ ರಿಂಗ್ ರಸ್ತೆ 90 ಮೀ.ಅಗಲವಿದ್ದು ಪ್ರಮುಖ ನಗರಗಳಾದ ಡಾಬಸ್ ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಸೂಲಿಬೆಲೆ, ಸರ್ಜಾಪುರ, ಅತ್ತಿಬೆಲೆ, ಆನೆಕಲ್, ಕನಕಪುರ, ರಾಮನಗರ ಸಂಪರ್ಕಕ್ಕೆ ಉದ್ದೇಶಿಸಲಾಗಿದೆ. ಈ ಉಪನಗರ ವರ್ತುಲ ರಸ್ತೆಯ ಮೂಲ ಯೋಜನೆಯನ್ನು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂಪಿಸಿರುವುದರಿಂದ, ಉಪನಗರ ವರ್ತುಲ ರಸ್ತೆ ಪ್ರಾಧಿಕಾರದಿಂದ ಈ ಯೋಜನೆ ಅನುಷ್ಠಾನ ಸಾಧ್ಯವಿಲ್ಲ.ನಮ್ಮ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಿರುವುದರಿಂದ ನಾನು ಮತ್ತೆ ನಮ್ಮ ಅಧಿಕಾರಿಗಳ ಜತೆ ಸಾಧಕ ಬಾದಕಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು” ಎಂದು ತಿಳಿಸಿದರು.

ವಿಧೇಯಕ ಅಂಗೀಕಾರ:

ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ‘2023 ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು  ಇತರೆ ಕಾನೂನು ತಿದ್ದುಪಡಿ’ ವಿದೇಯಕವನ್ನು ಮಂಡಿಸಿದರು. ನಂತರ ಸ್ಪೀಕರ್ ಅವರು ಪ್ರಸ್ತಾವನೆಯನ್ನು ಅಂಗೀಕರಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News