VIral News: ಶೂಟ್‌ ಮಾಡಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!

ಮಕ್ಕಳಿಗೆ ವಿದ್ಯೆ ಕಲಿಯೋಕೆ ಕಷ್ಟ.. ಹೆತ್ತವರಿಗೆ ಮಕ್ಕಳು ಚನ್ನಾಗಿ ಓದಬೇಕು ಅನ್ನೋ ಇಷ್ಟ.. ಮನೆಯಲ್ಲಿ ಚನ್ನಾಗಿ ಓದಿಕೋ ಅಂದಿದ್ದೇ ತಪ್ಪಾಗಿಹೋಗಿತ್ತು.. ಅಮ್ಮಾ ಕರೆ ಮಾಡಿ ಕಾಲೇಜ್ ಗೆ ಹೋಗಲ್ಲ.. ತಪ್ಪು ಮಾಡಲ್ಲ.. ಸಾರಿ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..  

Written by - Savita M B | Last Updated : Jan 4, 2024, 05:28 PM IST
  • ಡಬಲ್‌ ಬ್ಯಾರಲ್‌ ಗನ್‌ನಿಂದ ಶೂಟ್‌ ಮಾಡಿಕೊಂಡು ಸೂಸೈಡ್‌
  • ಸಾವಿಗೂ ಮುನ್ನ ತನ್ನ ತಾಯಿಗೆ ಕರೆ ಮಾಡಿ ಕ್ಷಮೆ ಕೇಳಿದ್ದ ವಿಶು
  • ಗುಂಡು ಹಾರಿಸಿಕೊಂಡು ಮನೆಗೆ ಬಂದ ಹೆತ್ತವರಿಗೆ ಬಾಗಿಲು ತೆರೆದಿದ್ದ
VIral News: ಶೂಟ್‌ ಮಾಡಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!  title=

ಕೊಡಗು: ಈ ಯುವಕನ ಹೆಸರು ವಿಶು ಉತ್ತಪ್ಪ.. ಈ ಮುದ್ದು ಮುಖದ ಯುವಕನಿಗೆ ಇನ್ನೂ ಕೇವಲ 19 ವರ್ಷ ವಯಸ್ಸಾಗಿತ್ತು ಅಷ್ಟೆ..ಈತ ಮೂಲತಃ ಕೊಡಗು ಜಿಲ್ಲೆಯವನು.. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡ್ತಿದ್ದ.. ಹೆತ್ತವರ ಜೊತೆ ನೆಮ್ಮದಿಯಾಗಿದ್ದವನಿಗೆ ಓದಿನಲ್ಲಿ ಆಸಕ್ತಿ‌ ಕಡಿಮೆಯಾಗಿತ್ತು. ತನ್ನ ಮಗನ ಭವಿಷ್ಯ ಉತ್ತಮವಾಗಿರಬೇಕು ಎಂದು ಪೋಷಕರು ಮಗನಿಗೆ ಓದುವಂತೆ ಬುದ್ದಿ ಹೇಳಿದ್ದರು ಅಷ್ಟೇ.. ಆತನ ಮನಸ್ಸಿನಲ್ಲಿ ಅದ್ಯಾವ ವಿಚಾರ ಕಾಡಿತ್ತೋ ಏನೋ ಗೊತ್ತಿಲ್ಲ, ಮುಂದೆ ನಡೆದಿದ್ದೆಲ್ಲ ವಿಧಿಯಾಟ..

ವಿಶು ಉತ್ತಪ್ಪ ಮನೆಯಲ್ಲೇ ಮಲಗಿಕೊಂಡಿದ್ದ..ಈತನ ತಂದೆ ರವಿ ತಮ್ಮಯ್ಯ ಮತ್ತು ತಾಯಿ ಹೊರಗೆ ಹೋಗೋಣ ಬಾ ಎಂದು ಕರೆದಿದ್ದಾರೆ. ಆದರೆ ವಿಶು ತಾನು ಬರೋದಿಲ್ಲ ಎಂದು ಹೇಳಿದ್ದಾನೆ. ಆ ಬಳಿಕ ತಂದೆ ತಾಯಿ ಮನೆಗೆ ಬೇಕಾದ ಸಾಮಗ್ರಿ‌ ತರಲು ಹೋಗಿದ್ದಾರೆ..ಈ ವೇಳೆ ತಾಯಿಗೆ ಕರೆ ಮಾಡಿದ್ದ ವಿಶು ಉತ್ತಪ್ಪ ಅಮ್ಮ ಸಾರಿ, ನಾನು ಕಾಲೇಜಿಗೂ ಹೋಗಲ್ಲ , ತಪ್ಪು  ಮಾಡೋಲ್ಲ  ಸಾರಿ ಎಂದಿದ್ದಾನೆ.. ಆ ಬಳಿಕವೇ ತಾನು ಗುಂಡು ಹಾರಿಕೊಂಡಿದ್ದು ಮನೆಗೆ ವಾಪಸ್ಸಾದ ತಂದೆ ಬಾಗಿಲು ಬಡಿದಿದ್ದಾರೆ ಈ ವೇಳೆ ತೀವ್ರ ರಕ್ತ ಸ್ರಾವವಾಗಿದ್ದ ವಿಶು ಉತ್ತಪ್ಪನೇ ಬಾಗಿಲು ತೆರೆದಿದ್ದಾನೆ.

ಇದನ್ನೂ ಓದಿ-ಇನ್ಸ್ಪೆಕ್ಟರ್ ತಹಶಿಲ್ದಾರರನ್ನು ಯಾವುದೇ ಕಾರಣಕ್ಕೂ ಅಮಾನತ್ತು ಮಾಡುದಿಲ್ಲ; ಶಾಸಕ ಅಬ್ಬಯ್ಯ

ವಿಶು ಉತ್ತಪ್ಪ ತಂದೆ ರವಿ ತಮ್ಮಯ್ಯ ಮೂಲತಃ ಕೊಡಗಿನವರಾಗಿದ್ರಿಂದ ಡಬಲ್ ಬ್ಯಾರೇಲ್ ಗನ್ ಗೆ ಲೈಸನ್ಸ್ ಪಡೆದಿದ್ರು.‌ಕೆಲವು ಗನ್ ಮ್ಯಾನ್ ಆಗಿದ್ದು ಸದ್ಯ ನೈಸ್ ಕಂಪನಿಯಲ್ಲಿ‌ ಸೆಕ್ಯೂರಿಟಿಯಾಗಿದ್ದಾರೆ..

ಇದನ್ನೂ ಓದಿ-ಇನ್ಸ್ಪೆಕ್ಟರ್ ತಹಶಿಲ್ದಾರರನ್ನು ಯಾವುದೇ ಕಾರಣಕ್ಕೂ ಅಮಾನತ್ತು ಮಾಡುದಿಲ್ಲ; ಶಾಸಕ ಅಬ್ಬಯ್ಯ  

ಇನ್ನು ವಿಶು ಉತ್ತಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ ಆದರು ಪ್ರೀತಿ ಪ್ರೇಮದಿಂದ ಆತ್ಮಹತ್ಯೆಯನ್ನು‌ ಮಾಡಿಕೊಂಡನ ಎಂಬ ಅನುಮಾನ ಮೂಡಿದ್ದು ಮೊಬೈಲ್ ನಲ್ಲಿ ಸತ್ಯಾಂಶ ಅಡಗಿರುವ ಸಾಧ್ಯತೆಗಳಿವೆ. ಇನ್ನು ವಿಶು ಉತ್ತಪ್ಪನ‌ ಸ್ನೇಹಿತ ಆತ ಆತ್ಮಹತ್ಯೆ ಮಾಡುಕೊಳ್ಳುವಷ್ಟು ವೀಕ್ ಇರ್ಲಿಲ್ಲ.. ತಾನು ಫೋನ್ ಮಾಡಿದಾಗ ಹುಷಾರಿಲ್ಲ ಎಂದು ತಿಳಿಸಿದ್ದ ಎಂದಿದ್ದಾನೆ.

ಸದ್ಯ ಮಾದನಾಯಕನಹಳ್ಳಿ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕಿ ಮೃತನ ಮನೆ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರೋದ್ರಿಂದ ಕೇಸ್ ವರ್ಗಾಯಿಸಿದ್ದಾರೆ. ಅದೇನಾದ್ರು ವಯಸ್ಸಿಗೆ ಬಂದ ಮಕ್ಕಳು ಆತ್ಮಹತ್ಯೆಯ ದಾರಿ ಹಿಡಿದು ಹೆತ್ತವರನ್ನು ಜೀವನಪರ್ಯಂತ ನರಳುವಂತೆ ಮಾಡುತ್ತಿರೋದು ದುರಂತವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News