Valentine's Day: ಪ್ರೇಮಿಗಳ ದಿನಾಚರಣೆಗೆ ಕತ್ತೆಗಳ ಮದುವೆ ಮಾಡಿಸಿದ ವಾಟಾಳ್!

ಪ್ರತಿಬಾರಿಯಂತೆ, ಕತ್ತೆಗಳನ್ನು ಕಬ್ಬನ್ ಪಾರ್ಕ್ (Cubbon Park) ಬಳಿ ಕರೆತಂದು ಕೆಂಪ ಕತ್ತೆಗೆ ಹಳದಿ, ರಂಗಿ ಕತ್ತೆಗೆ ಬಿಳಿ ವಸ್ತ್ರವನ್ನು ಹಾಕಿ ಮಂಗಳ ವಾದ್ಯಗಳೊಂದಿಗೆ ತಾಳಿ ಕಟ್ಟಿಸಿ, ಮೆರವಣಿಗೆ ನಡೆಸಿದರು. 

Written by - Prashobh Devanahalli | Edited by - Yashaswini V | Last Updated : Feb 15, 2022, 06:41 AM IST
  • ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನಾಚರಣೆ ಆಚರಿಸಿದ ವಾಟಾಳ್ ನಾಗರಾಜ್
  • ಪ್ರತಿಬಾರಿಯಂತೆ, ಕತ್ತೆಗಳನ್ನು ಕಬ್ಬನ್ ಪಾರ್ಕ್ ಬಳಿ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್
  • ಪ್ರೇಮಿಗಳಿಗೆ ರಕ್ಷಣೆ ದೊರೆಯಬೇಕು ಎಂದ ವಾಟಾಳ್ ನಾಗರಾಜ್
Valentine's Day: ಪ್ರೇಮಿಗಳ ದಿನಾಚರಣೆಗೆ ಕತ್ತೆಗಳ ಮದುವೆ ಮಾಡಿಸಿದ ವಾಟಾಳ್! title=
Donkeys Marriage on Valentine's Day

ಬೆಂಗಳೂರು: ಪ್ರೇಮಿಗಳ ದಿನಾಚರಣೆ (Valentine's Day) ಹಿನ್ನಲೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನಾಚರಣೆ ಆಚರಿಸಿದರು.

ಪ್ರತಿಬಾರಿಯಂತೆ, ಕತ್ತೆಗಳನ್ನು ಕಬ್ಬನ್ ಪಾರ್ಕ್ (Cubbon Park) ಬಳಿ ಕರೆತಂದು ಕೆಂಪ ಕತ್ತೆಗೆ ಹಳದಿ, ರಂಗಿ ಕತ್ತೆಗೆ ಬಿಳಿ ವಸ್ತ್ರವನ್ನು ಹಾಕಿ ಮಂಗಳ ವಾದ್ಯಗಳೊಂದಿಗೆ ತಾಳಿ ಕಟ್ಟಿಸಿ, ಮೆರವಣಿಗೆ ನಡೆಸಿದರು. ನಂತರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ಅಲ್ಲಿ ಪಾಲ್ಗೊಂಡಿದ್ದ ಪ್ರೇಮಿಗಳಿಗೆ ಗುಲಾಬಿ ಹೂ ಕೊಟ್ಟು ಶುಭ ಹಾರೈಸಿದರು.

ಇದನ್ನೂ ಓದಿ- All colleges Reopen : ಫೆ.16ರಿಂದ ಪಿಯು ಮತ್ತು ಎಲ್ಲಾ ಡಿಗ್ರಿ ಕಾಲೇಜುಗಳು ಆರಂಭ : ಸರ್ಕಾರದಿಂದ ತೀರ್ಮಾನ

ಪ್ರೇಮಿಗಳಿಗೆ ರಕ್ಷಣೆ ದೊರೆಯಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಂತಹ ಒಂದು ಕಾನೂನನ್ನು ರಚಿಸಬೇಕು ಎಂದು ವಾಟಾಳ್ ನಾಗರಾಜ್ (Vatal Nagaraj) ಒತ್ತಾಯಿಸಿದರು.

ಇದನ್ನೂ ಓದಿ- Hijab Controversy: ಹಿಜಾಬ್ ವಿವಾದಕ್ಕೆ ಹೊಸ ತಿರುವು, ಸ್ಕೂಲ್ ಡ್ರೆಸ್ ಬಣ್ಣದ ಹೆಡ್ ಸ್ಕಾರ್ಫ್ ಧರಿಸಲು ಅನುಮತಿ ಕೋರಿದ ವಿದ್ಯಾರ್ಥಿನೀಯರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News