ಮಾವನ-ವನ್ಯಜೀವಿ ಸಂಘರ್ಷದ ಕುರಿತು ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಅರಣ್ಯ ಸಚಿವ

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವ ಹಾಗು ವನ್ಯಜೀವಿ ಸಂಘರ್ಷ ಕುರಿತು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್  ಅರಣ್ಯಧಿಕಾರಿಗಳಿಂದ ಮಾಹಿತಿ ಪಡೆದರು.

Written by - Manjunath N | Last Updated : Feb 21, 2024, 11:41 PM IST
  • ನೀಲಗಿರಿ ಅರಣ್ಯ ಶ್ರೇಣಿಯು ಕೇರಳ, ಕರ್ನಾಟಕ ಹಾಗೂ ತಮಿಳುನಾಡು‌ ಮೂರು ರಾಜ್ಯಗಳ ಅರಣ್ಯ ಗಡಿ ಹಂಚಿಕೊಂಡಿದೆ.
  • ಈ‌ ಕಾರಣದಿಂದ ಅರಣ್ಯದ ಜೊತೆಗೆ ‌ವನ್ಯಜೀವಿಗಳ ಸಂರಕ್ಷಣೆಯನ್ನು ಅಧಿಕಾರಿಗಳು ‌ಮಾಡಬೇಕು ಎಂದು ತಿಳಿಸಿದರು.
 ಮಾವನ-ವನ್ಯಜೀವಿ ಸಂಘರ್ಷದ ಕುರಿತು ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಅರಣ್ಯ ಸಚಿವ title=

ಚಾಮರಾಜನಗರ: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವ ಹಾಗು ವನ್ಯಜೀವಿ ಸಂಘರ್ಷ ಕುರಿತು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್  ಅರಣ್ಯಧಿಕಾರಿಗಳಿಂದ ಮಾಹಿತಿ ಪಡೆದರು.

ತಾಲ್ಲೂಕಿನ ಬಂಡೀಪುರ ಅರಣ್ಯ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾಹಿತಿ ಪಡೆದ ನಂತರ ಮಾತನಾಡಿ, ಅರಣ್ಯ ಸಚಿವರು, ಕಾಡು ಪ್ರಾಣಿಗಳಿಗೆ ಕರ್ನಾಟಕ, ಕೇರಳ, ತಮಿಳುನಾಡಿ ಎಂಬ ಎಲ್ಲೇ‌ ಇರುವುದಿಲ್ಲ. ಹಾಗಾಗಿ ಆನೆಗಳನ್ನು ‌ ಯಾವ ಪ್ರದೇಶದಲ್ಲಿ ಬಿಟ್ಟಿದ್ದೆವೆ ಎಂಬುದನ್ನು ಪರಿಗಣಿಸದೆ ವನ್ಯ ಪ್ರಾಣಿಗಳನ್ನು ಅರಣ್ಯಧಿಕಾರಿಗಳು ರಕ್ಷಿಸುವ ಕೆಲಸ ಮಾಡಬೇಕು. ಜೊತೆಗೆ ವನ್ಯಜೀವಿಗಳು ಅರಣ್ಯದಿಂದ ನಾಡಿನತ್ತ ಬರದಂತೆ ರೈಲ್ವೆ ‌ಬ್ಯಾರಿಕೇಡ್ ಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ:  ಸರ್ಫರಾಜ್, ಧ್ರುವ್ ಜುರೆಲ್ ಬೆನ್ನಲ್ಲೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಲು ಈ ವೇಗಿ ಸಿದ್ಧ

ನೀಲಗಿರಿ ಅರಣ್ಯ ಶ್ರೇಣಿಯು ಕೇರಳ, ಕರ್ನಾಟಕ ಹಾಗೂ ತಮಿಳುನಾಡು‌ ಮೂರು ರಾಜ್ಯಗಳ ಅರಣ್ಯ ಗಡಿ ಹಂಚಿಕೊಂಡಿದೆ. ಈ‌ ಕಾರಣದಿಂದ ಅರಣ್ಯದ ಜೊತೆಗೆ ‌ವನ್ಯಜೀವಿಗಳ ಸಂರಕ್ಷಣೆಯನ್ನು ಅಧಿಕಾರಿಗಳು ‌ಮಾಡಬೇಕು ಎಂದು ತಿಳಿಸಿದರು.

ಬಂಡೀಪುರ ಅರಣ್ಯಧಿಕಾರಿ ಡಾ.ಪಿ.ರಮೇಶ್ ಕುಮಾರ್ ಮಾತನಾಡಿ, ಬಂಡೀಪುರ ಅಭಯಾರಣ್ಯವು ಹುಲಿ ಸಂತತಿಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಆನೆ ಗಣತಿಯಲ್ಲಿ ಮೊದಲ ಸ್ಥಾನ ಲಭಿಸಿದೆ. ಜೊತೆಗೆ ಯುವಮಿತ್ರ, ರೈತ ಮಿತ್ರ ಸೇರಿದಂತೆ ಇನ್ನಿತರ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು ಈ ವೇಳೆ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವರು, ಅರಣ್ಯಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಪಿಸಿಸಿಎಫ್ ಸುಭಾಷ್ ಮಲ್ಕಡೆ, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿಪ್ರಿಯಾ, ಅರಣ್ಯ ಇಲಾಖೆಯ ಎಡಿಜಿಪಿ ಯಾದವ್, ಜಿತೇಂದ್ರ ಸಿಂಗ್ ಸೇರಿದಂತೆ ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News