ವಿಜಯಪುರ : ಹೌದು ಗುಮ್ಮಟ ನಗರಿ ವಿಜಯಪುರ ಜಿಲ್ಲೆ ಶಾಶ್ವತ ಬರ ಪೀಡಿತ ಜಿಲ್ಲೆ ಎಂದು ಹಣೆ ಪಟ್ಟಿ ಕಟ್ಟಿಕೊಂಡಿದೆ. ಇಂತಹ ಬರ ಪೀಡಿತ ಜಿಲ್ಲೆಯ ಬರಡು ಭೂಮಿಯಲ್ಲಿ ರೈತನೊರ್ವ ಪೇರು ಬೆಳೆದು ಉತ್ತಮಲಾಭ ಗಳಿಸುತ್ತಿದ್ದಾನೆ.
ಹೌದು.. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ತಾಂಡಾದ ರೈತ ತುಕಾರಾಮ ಪವ್ಹಾರ ಎಂಬಾತರು ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಪೇರು ಬೆಳೆದಿದ್ದಾರೆ. ಇನ್ನೂ ಇವರ ಭೂಮಿ ಸಂಪೂರ್ಣವಾಗಿ ಬರಡು ಭೂಮಿಯಾಗಿದೆ, ಸರ್ಕಾರದ ಯೋಜನೆಗಳಿಂದ ಅಂದರೆ ಗ್ರಾಮ ಪಂಚಾಯತಿಯಿಂದ ಉದ್ಯೋಗ ಖಾತ್ರೀ ಯೋಜನೆಯಡಿ ಬರಡು ಭೂಮಿಯನ್ನು ಸ್ವಚ್ಚಗೊಳಿಸಿಕೊಂಡು ಸಣ್ಣ ಹೊಂಡವನ್ನು ತೋಡಿ ಪೇರು ಬೆಳೆದಿದ್ದಾರೆ.
ಇನ್ನೂ ತೋಟಗಾರಿಕಾ ಇಲಾಖೆಯಿಂದ ಸದುಪಯೋಗ ಪಡೆದುಕೊಂಡು ಸಸಿಗಳನ್ನು ಹಾಗೂ ಡ್ರಿಪ್ ಗೆ ಅನುದಾನ ಪಡೆದು ಗಿಡಗಳನ್ನು ನೆಟ್ಟಿದ್ದಾರೆ. ಒಂದೇ ವರ್ಷದ ಒಳಗೆ ರೈತ ತುಕಾರಾಮ ಪವ್ಹಾರ ಅವರು ಬೆಳೆದ ಪೇರು ಈಗಫಲ ನೀಡುತ್ತಿದ್ದು, ಸೀಜನ್ ನಲ್ಲಿ ಪ್ರತಿದಿನ ಸುಮಾರ 20 ಟ್ರೇ ನಷ್ಟು ಪೇರು ತೆಗೆದು ಮಾರಿದರೆ ಈಗ ಎರಡು ದಿನಕ್ಕೊಮ್ಮೆ 20 ಟ್ರೇ ನಷ್ಟು ಪೇರು ತಗೆದು ಮಾರಾಟ ಮಾಡಿ ಉತ್ತಮ ಲಾಭ ಗಳಿಸಿ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ-ಆಡಳಿತದಲ್ಲಿ ಕನ್ನಡ ಜಾರಿಗೊಳಿಸುವ ಪ್ರಯತ್ನಕ್ಕೆ ವೇಗ: ಶಿವರಾಜ್ ತಂಗಡಗಿ
ಇನ್ನೂ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯಿಂದಾಗಿ ಇಟ್ಟಂಗಿಹಾಳ ಗ್ರಾಮದಲ್ಲಿ ತುಕಾರಾಮ ಪವಾರ, ಭೀಮಾಬಾಯಿ ರೈತ ದಂಪತಿ ಬಂಪರ್ ಪೇರಲೆ ಹಣ್ಣು ಬೆಳೆದು ಮಾರಾಟ ಮಾಡಿ ನಿತ್ಯ ಆದಾಯ ಗಳಿಸುತ್ತಿದ್ದಾರೆ. ಮೊದಲು ಒಣಬೇಸಾಯದಲ್ಲಿ ಹುರುಳಿ, ಮೂಕಣಿ ಕಾಳು, ಶೇಂಗಾ, ಸಜ್ಜೆ ಮತ್ತು ಜೋಳವನ್ನು ಮೊದಲು ಇವರು ಬೆಳೆಯುತ್ತಿದ್ದರು.
ಸಕಾಲಕ್ಕೆ ಮಳೆ ಇಲ್ಲದೇ, ಬೆಳೆದ ಬೆಳೆಗೆ ತಕ್ಕ ಬೆಲೆಯೂ ಸಿಗದೆ ನಷ್ಟ ಅನುಭವಿಸಿದ್ದರು. ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆ ಈ ಭಾಗದಲ್ಲಿ ಸಾಕಾರಗೊಂಡ ಪರಿಣಾಮ ರೈತರ ಆದಾಯ ದ್ವಿಗುಣ ಆಗುತ್ತಿದೆ. ಸಚಿವ ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿರೋ ಪರಿಣಾಮ ರೈತರ ಬದುಕು ಹಸನಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಪೇರಲ ಹಣ್ಣಿಗೆ ಪ್ರತಿ ಕೆ.ಜಿಗೆ 45 ರಿಂದ 50 ಬೆಲೆ ಇದೆ, ಪ್ರತಿ ದಿನವೂ ವಿಜಯಪುರ. ನಗರದ ವಿವಿಧೆಡೆ ಮಾರಾಟ ಮಾಡುತ್ತಾರೆ. ಹೀಗೆ ಕಳೆದ 5-6 ತಿಂಗಳಿನಿಂದ ಸುಮಾರು 1 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ.
ಕೈ ಲಾಗದು ಎಂದು ಕೈ ಕಟ್ಟು ಕುಳಿತರೆ ಸಾಗದು ಕೆಲಸ ಮುಂದೆ ಎಂಬ ಡಾ.ರಾಜಕುಮಾರ ಅವರ ಹಾಡಿನಂತೆ ಬರಡು ಭೂಮಿ ಇಲ್ಲಿ ಬರೀ ಕಲ್ಲಿದೆ ಎಂದು ಕೊಂಡಿದ್ದರೆ ಇಲ್ಲಿ ಏನೂ ಮಾಡಲು ಆಗುವದಿಲ್ಲ ಎಂದು ಸುಮ್ಮನೆ ಕುಳಿತಿದ್ದರೆ ರೈತ ತುಕಾರಾಮ ಕೂಡಾ ಎನೂ ಮಾಡಲಾಗುತ್ತಿರಲಿಲ್ಲ, ಪ್ರಯತ್ನಕ್ಕೆ ಫಲ ಕಟ್ಟಿಟ್ಟ ಬುತ್ತಿ ಎಂಬಂತೆ ಬರಡು ಭೂಮಿಯಲ್ಲಿ ಪೇರು ಬೆಳೆದು ಇತರೆ ರೈತರಿಗೆ ಮಾದರಿ ಆಗಿರುವ ತುಕಾರಾಮ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವೇ ಸರಿ.
ಇದನ್ನೂ ಓದಿ-ಸುಲಿಗೆ ಮನಸ್ಥಿತಿಗೂ ಸೂಕ್ತ ಚಿಕಿತ್ಸೆ ಬೇಡವೇ?: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಕಿಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.