ಚಿತ್ತದುರ್ಗಕ್ಕೆ ಪ್ರವಾಸಿಗರ ಲಗ್ಗೆ.. ಏಳುಸುತ್ತಿನ ಕೋಟೆ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ!

Chittadurga: ಹೊಸ ವರ್ಷ ಅಂದ್ರೆನೇ ಹಾಗೇ, ಎಲ್ಲರಿಗೂ ಸಂಭ್ರಮ. ಬಾಯಲ್ಲಿ ಯುಗಾದಿ ನಮ್ಮ ಹೊಸ ವರ್ಷ ಅಂತಾ ಹೇಳಿದರೂ,  ಕೇಕ್ ಜೊತೆ, ಪಾರ್ಟಿಗೆ ಮಾಡಿದವರೇ ಹೆಚ್ಚು. ಸ್ನೇಹಿತರು, ಕುಟುಂಬದವರು, ಪ್ರೀತಿ ಪಾತ್ರರು ಒಟ್ಟಿಗೆ ಸೇರಿ ಸಂತೋಷಪಡಲು ಹೆಚ್ಚು ಪ್ರವಾಸಿ ತಾಣಗಳು ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರದುರ್ಗ ಕಲ್ಲಿನ ಕೋಟೆಗೆ ಹೊಸ ವರ್ಷದ ದಿನ ಮತ್ತು ಎರಡನೇ ದಿನವೂ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

Written by - Savita M B | Last Updated : Jan 2, 2024, 07:47 PM IST
  • ಈ ವರ್ಷದ ಹೊಸ ವರ್ಷವನ್ನು ಜನ ಭರ್ಜರಿ ಎಂಜಾಯ್ ಮಾಡಿದ್ದಾರೆ.
  • ಚಿತ್ರದುರ್ಗದ ಐತಿಹಾಸಿಕ ಕೋಟೆಗೆ ಒಂದೇ ದಿನ 7 ಸಾವಿರ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.
  • ಚಿತ್ರದುರ್ಗದ ಕೋಟೆಗೆ ಬಂದಿದ್ದ ಪ್ರವಾಸಿಗರಲ್ಲಿ ಶೇ.90 ರಷ್ಟು ಯುವಕ, ಯುವತಿಯರಿದ್ದರು.
ಚಿತ್ತದುರ್ಗಕ್ಕೆ ಪ್ರವಾಸಿಗರ ಲಗ್ಗೆ.. ಏಳುಸುತ್ತಿನ ಕೋಟೆ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ! title=

ಈ ವರ್ಷದ ಹೊಸ ವರ್ಷವನ್ನು ಜನ ಭರ್ಜರಿ ಎಂಜಾಯ್ ಮಾಡಿದ್ದಾರೆ. ತೋಟ, ಮನೆ, ಫಾರ್ಮ್ ಹೌಸ್, ಗೋವಾ, ಬೀಚ್, ರೆಸಾರ್ಟ್, ಹೋಂ ಸ್ಟೇಗಳಿಗೆ ಹೋಗಿ ಸಂಭ್ರಮಿಸಿದ್ದಾರೆ. ಚಿತ್ರದುರ್ಗದ ಐತಿಹಾಸಿಕ ಕೋಟೆಗೆ ಒಂದೇ ದಿನ 7 ಸಾವಿರ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. 

ಐತಿಹಾಸಿಕ ಕೋಟೆಗೆ ಸೋಮವಾರ ಒಂದೇ ದಿನ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಬರೋಬ್ಬರಿ 7 ಸಾವಿರ ದಾಟಿತ್ತು. ಇದರಿಂದ ಒಂದೇ ದಿನ ಕೋಟೆಯಿಂದ ಬಂದ ಆದಾಯ 1.75 ಲಕ್ಷ ರೂ. ದಾಟಿತ್ತು.ಎರಡನೇ ದಿನವೂ ಪ್ರವಾಸಿಗರು ಬರುತ್ತಿರುವುದು ನಿಜಕ್ಕೂ ಅಚ್ಚರಿ ತಂದಿದೆ. 

ಇದನ್ನೂ ಓದಿ-ಕಾಂಗ್ರೆಸ್ ಸರ್ಕಾರ ಗೂಂಡಾಗಳ ಪೋಷಣೆಗೆ ನಿಂತಂತಿದೆ: ವಿಜಯೇಂದ್ರ ಆಕ್ರೋಶ

ಕೋಟೆ ಪ್ರವೇಶಕ್ಕೆ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು, ಆನ್‍ಲೈನ್ ಮೂಲಕ ಮೊದಲೇ ಟಿಕೇಟ್ ಪಡೆಯುವುದು ಹಾಗೂ ಸ್ಥಳದಲ್ಲೇ ಟಿಕೇಟ್ ಪಡೆಯುವ ಆಫ್‍ಲೈನ್ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಕೋಟೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು ಎಂಬ ಮಾತುಗಳು ಬಂದರೂ ದೂರದೂರಿನ ಪ್ರವಾಸಿಗರು ಬರುತ್ತಿದ್ದಾರೆ.

ಇನ್ನೂ ನಗರದ ಪ್ರಮುಖ ಪ್ರವಾಸಿ ತಾಣಗಳಾದ ಕೋಟೆ, ಆಡುಮಲ್ಲೇಶ್ವರಕ್ಕೆ ಹೋಲಿಕೆ ಮಾಡಿದರೆ ಮುರುಘಾ ಮಠದಲ್ಲಿರುವ ಮುರುಘಾ ವನಕ್ಕೆ ಅತೀ ಹೆಚ್ಚು ಜನ ದಾಂಗುಡಿ ಇಟ್ಟಿದ್ದಾರೆ. ಈ ನಡುವೆ ಅನೇಕರು ಹೊಸ ವರ್ಷದ ದಿನದಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. 

ಇನ್ನೂ ಕೆಲವರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಹೊಸವರ್ಷದಂದು ಚಿತ್ರದುರ್ಗದ ಐತಿಹಾಸಿಕ ಕೋಟೆ, ಮುರುಘಾ ಮಠದ ಮುರುಘಾ ವನ, ಆಡುಮಲ್ಲೇಶ್ವರ, ವಾಣಿವಿಲಾಸ ಸಾಗರ ಜಲಾಶಯ, ನಾಯಕನಹಟ್ಟಿ, ವದ್ದಿಕೆರೆ ಸೇರಿದಂತೆ ಬಹುತೇಕ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು ಭರ್ತಿಯಾಗಿದ್ದವು. 

ಇದನ್ನೂ ಓದಿ-ಕೈ-ಕಮಲ ನಾಯಕರ ನಡುವೆ ರಾಮಮಂದಿರ ರಾಜಕೀಯ.. ಸಿದ್ದರಾಮಯ್ಯಗೆ ಆಹ್ವಾನ ಇಲ್ಲ ಯಾಕೆ..?

ಚಿತ್ರದುರ್ಗದ ಕೋಟೆಗೆ ಬಂದಿದ್ದ ಪ್ರವಾಸಿಗರಲ್ಲಿ ಶೇ.90 ರಷ್ಟು ಯುವಕ, ಯುವತಿಯರಿದ್ದರು. ಅನೇಕರು ಕೈಯಲ್ಲಿ ಕೇಕ್ ಹಿಡಿದು ಕೋಟೆಗೆ ತಂದು ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸುವ ಮೂಲಕ ಸಂಭ್ರಮ ಹಂಚಿಕೊಂಡರು. ಒನಕೆ ಓಬವ್ವನ ತವರೂರು ಗುಡೇಕೋಟೆಯಿಂದ ಅನೇಕ ಕುಟುಂಬದವರು ಬಂದಿದ್ದರು.

ಚಿತ್ರದುರ್ಗ ಜಿಲ್ಲೆಯ ಬೇರೆ ಬೇರೆ ತಾಲೂಕು, ಬೇರೆ ಜಿಲ್ಲೆಗಳಿಂದಲೂ ಪ್ರವಾಸಿಗರು ಬಂದು ಹೊಸ ವರ್ಷವನ್ನು ಕೋಟೆಯಲ್ಲಿ ಸ್ನೇಹಿತರು, ಗೆಳೆಯ, ಗೆಳತಿಯರು, ಪ್ರೀತಿ ಪಾತ್ರರ ಜೊತೆಗೆ ಕಳೆಯುವ ಮೂಲಕ ಸ್ಮರಣೀಯವಾಗಿಸಿಕೊಂಡರು. ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಆಡುಮಲ್ಲೇಶ್ವರ ಮೃಗಾಲಯಕ್ಕೆ ಪ್ರವಾಸಿಗರು ಭೇಟಿ ನೀಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News