Tight Lockdown : ರಾಜ್ಯದಲ್ಲಿ ಇಂದಿನಿಂದ ಮತ್ತಷ್ಟು 'ಟೈಟ್ ಲಾಕ್ ಡೌನ್' ಜಾರಿ! 

 ರಸ್ತೆಗೆ ಇಳಿಯುತ್ತಿರುವಂತ ಜನರಿಗೆ ಲಾಠಿ ರುಚಿಯ ಜೊತೆ ಜೊತೆಗೆ, ವಾಹನವನ್ನು ಸೀಜ್

Last Updated : May 24, 2021, 12:01 PM IST
  • ರಾಜ್ಯದಲ್ಲಿ ಇಂದಿನಿಂದ ಜೂನ್ 7ರವರೆಗೆ ಲಾಕ್ ಡೌನ್ ವಿಸ್ತರಣೆ
  • ಲಾಕ್ ಡೌನ್ ನಿಯಮ ಮತ್ತಷ್ಟು ಕಠಿಣಗೊಳಿಸುವಂತೆಯೂ ಪೊಲೀಸರಿಗೆ ಸೂಚಿನೆ
  • ರಸ್ತೆಗೆ ಇಳಿಯುತ್ತಿರುವಂತ ಜನರಿಗೆ ಲಾಠಿ ರುಚಿಯ ಜೊತೆ ಜೊತೆಗೆ, ವಾಹನವನ್ನು ಸೀಜ್
Tight Lockdown : ರಾಜ್ಯದಲ್ಲಿ ಇಂದಿನಿಂದ ಮತ್ತಷ್ಟು 'ಟೈಟ್ ಲಾಕ್ ಡೌನ್' ಜಾರಿ!  title=

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಜೂನ್ 7ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಕೊರೋನಾ ನಿಯಂತ್ರಣಕ್ಕಾಗಿ ಜೂನ್ 7ರವರೆಗೆ ಲಾಕ್ ಡೌನ್ ವಿಸ್ತರಿಸೋದಾಗಿ ಘೋಷಣೆ ಮಾಡಿದ್ದರು. ಇದರ ಜೊತೆ ಜೊತೆಗೆ ಲಾಕ್ ಡೌನ್ ನಿಯಮ ಮತ್ತಷ್ಟು ಕಠಿಣಗೊಳಿಸುವಂತೆಯೂ ಪೊಲೀಸರಿಗೆ ಸೂಚಿಸಿದ್ದರು. ಹೀಗಾಗಿ ಇಂದಿನಿಂದ ಕಠಿಣ ಲಾಕ್ ಡೌನ್ ಜಾರಿ ಆಗಿದೆ. ಅನಗತ್ಯವಾಗಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ, ರಸ್ತೆಗೆ ಇಳಿದ ಜನರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಅಲ್ಲದೇ ವಾಹನಗಳನ್ನು ಕೂಡ ಸೀಜ್ ಮಾಡುತ್ತಿದ್ದಾರೆ.

ಈ ಮೊದಲಿಗಿಂತಲೂ ರಾಜ್ಯದಲ್ಲಿ ಲಾಕ್ ಡೌನ್(Tight Lockdown) ಮತ್ತಷ್ಟು ಕಠಿಣಗೊಳಿಸಲಾಗಿದೆ. ಕೊರೋನಾ ನಿಯಂತ್ರಣಕ್ಕಾಗಿ ಮೇ.24ರ ಇಂದಿನಿಂದ, ಜೂನ್ 7ರವರೆಗೆ ಕಠಿಣ ಲಾಕ್ ಡೌನ್ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಅನಗತ್ಯವಾಗಿ ರಸ್ತೆಗೆ ಇಳಿಯುವವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಿಎಂ ಯಡಿಯೂರಪ್ಪ ಪೊಲೀಸರಿಗೆ ಖಡಕ್ ಸೂಚನೆ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ : ಜುಲೈನಲ್ಲಿ PUC, ಆಗಸ್ಟ್ ನಲ್ಲಿ SSLC ಪರೀಕ್ಷೆ ನಡೆಸುವ ಸಾಧ್ಯತೆ!

ಈ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಪೊಲೀಸರು(Police) ಫೀಲ್ಡಿಗೆ ಇಳಿದಿದ್ದಾರೆ. ಲಾಕ್ ಡೌನ್ ಉಲ್ಲಂಘಿಸಿ, ರಸ್ತೆಗೆ ಇಳಿಯುತ್ತಿರುವಂತ ಜನರಿಗೆ ಲಾಠಿ ರುಚಿಯ ಜೊತೆ ಜೊತೆಗೆ, ವಾಹನವನ್ನು ಸೀಜ್ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಂತೂ ಕಠಿಣ ಲಾಕ್ ಡೌನ್ ಜಾರಿಗೆ ತರುತ್ತಿರುವಂತ ಪೊಲೀಸರು, ಈಗಾಗಲೇ ಅನೇಕ ಜನರನ್ನು, ವಾಹನಗಳನ್ನು ಸೀಜ್ ಮಾಡಿದ್ದಾರೆ. ಈ ಮೂಲಕ ಅನಗತ್ಯವಾಗಿ ರಸ್ತೆಗೆ ಇಳಿದವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಸೋ ನೀವು ಎಚ್ಚರ.. ಅನಗತ್ಯವಾಗಿ ರಸ್ತೆಗೆ ಇಳಿದ್ರೇ.. ನಿಮ್ಮನ್ನು ವಶಕ್ಕೆ ಪಡೆದು, ನಿಮ್ಮ ವಾಹನವನ್ನು ಸೀಜ್ ಮಾಡೋದು ಗ್ಯಾರಂಟಿ.

ಇದನ್ನೂ ಓದಿ : Southwest Monsoon : ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ನೈಋತ್ಯ ಮುಂಗಾರು ಮಳೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News