“ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೇಂದ್ರದ ಪ್ರಭುತ್ವಕ್ಕೆ ಕಾಲ ಉತ್ತರಿಸಲಿದೆ”

ಚುನಾವಣೆಯಲ್ಲಿ ನಡೆದ ಸಾಲು ಸಾಲು ಅಕ್ರಮಗಳು,ಆಡಳಿತ ಯಂತ್ರದ ದುರ್ಬಳಕೆ,ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೇಂದ್ರದ ಪ್ರಭುತ್ವಕ್ಕೆ ಕಾಲ ಉತ್ತರಿಸಲಿದೆ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಅಭಿಪ್ರಾಯಪಟ್ಟಿದ್ದಾರೆ.

Written by - Zee Kannada News Desk | Last Updated : Dec 8, 2022, 05:06 PM IST
  • ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿದೆ,ಸತ್ತಿಲ್ಲ.
  • ನಮ್ಮ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರ ಜೊತೆಗೆ ಪಕ್ಷ ಬಲವಾಗಿ ನಿಲ್ಲಲಿದೆ.
  • ಕಾರ್ಯಕರ್ತರ ಕುಟುಂಬಗಳಿಗೆ ಹುಟ್ಟಿಸಿದ ಭಯದ ವಾತಾವರಣವನ್ನೂ ಮೀರಿಯೂ ಗುಜರಾತ್ ಜನತೆ ನಮಗೆ ಮತ ನೀಡಿದ್ದಾರೆ.
“ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೇಂದ್ರದ ಪ್ರಭುತ್ವಕ್ಕೆ ಕಾಲ ಉತ್ತರಿಸಲಿದೆ” title=
file photo

ಬೆಂಗಳೂರು: ಚುನಾವಣೆಯಲ್ಲಿ ನಡೆದ ಸಾಲು ಸಾಲು ಅಕ್ರಮಗಳು,ಆಡಳಿತ ಯಂತ್ರದ ದುರ್ಬಳಕೆ,ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೇಂದ್ರದ ಪ್ರಭುತ್ವಕ್ಕೆ ಕಾಲ ಉತ್ತರಿಸಲಿದೆ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು “ಚುನಾವಣಾ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪ್ರಜೆಗಳ ತೀರ್ಪಿಗೆ ತಲೆಬಾಗಬೇಕಿದೆ.ಗುಜರಾತ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಿರೀಕ್ಷೆ ಹುಸಿಯಾಗಿದೆ.ಜನತೆ ಮಾಡಿದ ನಿರ್ಧಾರವನ್ನ ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.

ವಿಪಕ್ಷಗಳ ಹಾಲಿ ಶಾಸಕ ಅಭ್ಯರ್ಥಿಗಳ ಮೇಲೆಯೇ ಬಿಜೆಪಿ ಪಕ್ಷದ ಕಾರ್ಯಕರ್ತರು ನಡೆಸಿದ ಹಲ್ಲೆ, ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯನ್ನೇ ಅಪಹರಣ ಮಾಡಿದ ಘಟನೆ, ಪ್ರಧಾನಿ ಮೋದಿಯವರ ಚುನಾವಣೆ ಯಾತ್ರೆಗೆ ಸಹಕಾರ, ಚುನಾವಣೆ ದಿನವೂ ರೋಡ್ ಶೋ ಸೇರಿದಂತೆ ಅನೇಕ ಘಟನೆಗಳಿಗೆ ಚುನಾವಣೆ ಆಯೋಗ ತೋರಿದ ಅಸಾಹಯಕತೆಯ ಸಾಕ್ಷಿಯೇ ಗುಜರಾತಿನ ಫಲಿತಾಂಶ ಎಂದು ಹೇಳಿದರು.

ಇದನ್ನೂ ಓದಿ : Muscle Pain in Winter Season : ಚಳಿಗಾಲದ ಬೆನ್ನು ಮತ್ತು ಹಿಮ್ಮಡಿ ನೋವಿಗೆ ಇಲ್ಲಿದೆ ಪರಿಹಾರ

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿದೆ,ಸತ್ತಿಲ್ಲ.ನಮ್ಮ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರ ಜೊತೆಗೆ ಪಕ್ಷ ಬಲವಾಗಿ ನಿಲ್ಲಲಿದೆ. ಕೋಮು ಅಜೆಂಡಾಗಳು,ಮತೀಯ ಭಾವನೆಗಳು,ಹುಸಿ ಭರವಸೆಗಳು, ಕಾರ್ಯಕರ್ತರ ಕುಟುಂಬಗಳಿಗೆ ಹುಟ್ಟಿಸಿದ ಭಯದ ವಾತಾವರಣವನ್ನೂ ಮೀರಿಯೂ ಗುಜರಾತ್ ಜನತೆ ನಮಗೆ ಮತ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು” ಎಂದು ಅವರು ಪ್ರತಿಕ್ರಿಯಿಸಿದರು.

ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಪ್ರಧಾನಿ ಮೋದಿಯ ವರ್ಚಸ್ಸಿನ ಬಗ್ಗೆ ಗೋದಿ ಮೀಡಿಯಾ ಭಜನೆ ಮಾಡುತ್ತಿದೆ. ಹದಿನೈದು ವರ್ಷದ ದೆಹಲಿಯ ಪಾಲಿಕೆ ಬಿಜೆಪಿ ಕೈ ತಪ್ಪಿದೆ, ಅಧಿಕಾರದಲ್ಲಿದ್ದರೂ ಹಿಮಾಚಲ ಪ್ರದೇಶದಲ್ಲಿ ಸೋತು ಸುಣ್ಣವಾಗಿದ್ದರೂ ಪ್ರಧಾನಿಯ ಸುನಾಮಿ ಯಾವ ದಿಕ್ಕಿನಲ್ಲಿ ಎದ್ದಿರುವುದನ್ನ ದುರ್ಭೀನ ಹಾಕಿ ನೋಡಬೇಕಿದೆ ಎಂದು ಅವರು ಕುಟುಕಿದ್ದಾರೆ.

ಗುಜರಾತ್ ಚುನಾವಣೆಯ ಫಲಿತಾಂಶ ಮಾತ್ರವೇ ಕರ್ನಾಟಕದ ಮೇಲೆ ಪ್ರಭಾವ ಬೀರುವುದಾದರೆ ಹಿಮಾಚಲ ಪ್ರದೇಶದ ಫಲಿತಾಂಶ ಯಾಕೆ ಪ್ರಭಾವ ಬೀರುವುದಿಲ್ಲ? ರಾಷ್ಟ್ರ ರಾಜಧಾನಿಯಲ್ಲೇ ಮತದಾರರು ಮಣ್ಣು‌ ಮುಕ್ಕಿಸಿರುವುದು ಅಧಿಕಾರದಲ್ಲಿದ್ದ ಯಾವ ಪಕ್ಷಕ್ಕೆ? ಪ್ರಧಾನಿಗಳ ಸುನಾಮಿ, ಬಿರುಗಾಳಿ ದೆಹಲಿ ಮತ್ತು ಹಿಮಾಚಲದ ಜನರತ್ತ ಬೀಸಲಿಲ್ವಾ? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ :"ನರೇಂದ್ರ ಮೋದಿ ಅವರು ವಾಸ ಮಾಡುವ ದೆಹಲಿಯಲ್ಲೇ ಅವರ ಹವಾ ಇಲ್ಲ"-ಸಿದ್ದರಾಮಯ್ಯ

ಕರ್ನಾಟಕದ ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಲು ಜನತೆ ನಿರ್ಧಾರ ಮಾಡಿಯಾಗಿದೆ. ಅದರಿಂದ ಪಾರಾಗಲು ಕರ್ನಾಟದ ಬಿಜೆಪಿ ಗುಜರಾತ್ ಫಲಿತಾಂಶದ ಬಿಲದಲ್ಲಿ ನುಸುಳುತ್ತಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಜನ ತೀರ್ಮಾನಿಸಿದ್ದಾರೆ. ಚುನಾವಣೆಯಿಂದ ಪಾಠ ಕಲಿತಿದ್ದೇವೆ.ನಾವು ಮತ್ತೆ ಅದುಮಿದಷ್ಟು ಎದ್ದು ಬರುತ್ತೇವೆ ಎನ್ನುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News