ಈ ಬಾರಿಯ ಅಧಿವೇಶನ- ದುಬಾರಿ ಅಧಿವೇಶನ

                

Last Updated : Nov 13, 2017, 03:33 PM IST
ಈ ಬಾರಿಯ ಅಧಿವೇಶನ- ದುಬಾರಿ ಅಧಿವೇಶನ title=

ಇಂದಿನಿಂದ ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಹತ್ತು ದಿನಗಳ ಬೆಳಗಾವಿ ಅಧಿವೇಶನವು ಬಹಳ ದುಬಾರಿ ಅಧಿವೇಶನವಾಗಿದೆ. ಈ ಅಧಿವೇಶನಕ್ಕೆ ಬರೋಬ್ಬರಿ 22 ಕೋಟಿ ರೂ. ಹಣವನ್ನು ಖರ್ಚು ಮಾಡಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ GST ನೆಪ ಒಡ್ಡಿದ್ದಾರೆ. GST ಯಿಂದಾಗಿ ಎಲ್ಲಾ ಬೆಲೆಗಳು ಹೆಚ್ಚಾಗಿದ್ದು, ಅಧಿವೇಶನದ ವೆಚ್ಚವು ದುಬಾರಿಯಾಗಿದೆ ಎಂದು ತಿಳಿಸಿದ್ದಾರೆ.

ಅಧಿವೇಶನದಲ್ಲಿ ಪಾಲ್ಗೊಳ್ಳಲಿರುವ ಶಾಸಕರಿಗೆ ಊಟ-ಉಪಹಾರವಲ್ಲದೆ ಭತ್ಯೆಯೂ ದೊರೆಯಲಿದೆ. ಬೆಳಗಾವಿಯಲ್ಲಿ ತಂಗುವ ಶಾಸಕರಿಗೆ ರೂ. 2,500 ಹಾಗೂ ಹುಬ್ಬಳ್ಳಿಯಲ್ಲಿ ತಂಗುವ ಶಾಸಕರಿಗೆ ರೂ. 5,000 ಭತ್ಯೆಯನ್ನು ನೀಡಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ಎಂದಿನಂತೆ ಮೆನುವಿನಲ್ಲಿ ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳನ್ನು ನೀಡಲು ನಿರ್ಧರಿಸಿದೆ.

Trending News