"ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಮತ್ತೊಮ್ಮೆ ರುಜುವಾತಾಗಿದೆ"

ಸಚಿವ MTB ನಾಗರಾಜ್ ಅವರು ಕೆ.ಆರ್ ಪುರ ಠಾಣೆಯ ಇನ್ಸ್ ಪೆಕ್ಟರ್ ನಂದೀಶ್ ಅವರ ಸಾವಿನ ಕುರಿತು, ' ಪೋಸ್ಟಿಂಗ್ ಗಾಗಿ 70-80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ ' ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Written by - Zee Kannada News Desk | Last Updated : Oct 30, 2022, 03:11 AM IST
  • 2019ರಿಂದ ಈಚೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ.
  • ಯಾವುದೇ ಮಿತಿ ಇಲ್ಲದೆ ಬೆಳಗಾದರೆ ಲೂಟಿಗೆ ಯೋಜನೆ ರೂಪಿಸುತ್ತಾರೆ.
  • ಯಾವುದೇ ಅಧಿಕಾರಿಯನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರಿಸುವುದಿಲ್ಲ
"ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಮತ್ತೊಮ್ಮೆ ರುಜುವಾತಾಗಿದೆ" title=
file photo

ಬೆಂಗಳೂರು: ಸಚಿವ MTB ನಾಗರಾಜ್ ಅವರು ಕೆ.ಆರ್ ಪುರ ಠಾಣೆಯ ಇನ್ಸ್ ಪೆಕ್ಟರ್ ನಂದೀಶ್ ಅವರ ಸಾವಿನ ಕುರಿತು, ' ಪೋಸ್ಟಿಂಗ್ ಗಾಗಿ 70-80 ಲಕ್ಷ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ ' ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು

ಪತ್ರಿಕಾಗೊಷ್ಟಿಯ ಮುಖ್ಯಾಂಶಗಳು... 

ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಕಳೆದ ಎರಡು ವರ್ಷಗಳಿಂದ ವಿರೋಧ ಪಕ್ಷಗಳು, ಮಾಧ್ಯಮಗಳು ಆರೋಪ ಮಾಡುತ್ತಲೇ ಇವೆ. ಆದರೆ ಈಗ ಸಚಿವ ಎಂಟಿಬಿ ನಾಗರಾಜ್ ಅವರ ಈ ಹೇಳಿಕೆ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸಾಬೀತಾಗಿದೆ.

ಸರ್ಕಾರದ ವಿರುದ್ಧ ಅವರದೇ ಪಕ್ಷದವರ ಆರೋಪ, ಮಾತುಗಳು ಹೊಸತೇನಲ್ಲ. ಈ ಹಿಂದೆ ಬಿಜೆಪಿ ಶಾಸಕರು ಹಾಗೂ ಪರಿಷತ್ ಸದಸ್ಯರು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದರು. ಈಗ ಈ ಸರದಿ ಸರ್ಕಾರದ ಸಚಿವರದ್ದಾಗಿದೆ. ನಾಗರಾಜ್ ಅವರು ತಮ್ಮ ಮನದಲ್ಲಿನ ಸತ್ಯವನ್ನು ಹೇಳಿದ್ದಾರೆ.

ಇದನ್ನೂ ಓದಿ: ʼಪುನೀತ್ ಉಪಗ್ರಹ ವರ್ಕ್ ಸ್ಟೇಷನ್‌ʼಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಮತ್ತೊಮ್ಮೆ ರುಜುವಾತಾಗಿದೆ. ಮುಖ್ಯಮಂತ್ರಿಗಳು ಅವರ ಕಾರ್ಯಕ್ರಮದಲ್ಲಿ ಧಮ್ಮು, ತಾಕತ್ತಿನ ಸವಾಲು ಹಾಕಿದ್ದರು. ಈಗ ಅವರಿಗೆ ಧಮ್ಮು, ತಾಕತ್ತು ಇದ್ದರೆ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಇನ್ಸ್ ಪೆಕ್ಟರ್ ಗೆ 70-80 ಲಕ್ಷ ಆದರೆ, ಡಿಸಿಪಿ ಐಪಿಎಸ್ ಅಧಿಕಾರಿಗಳಿಗೆ ಎಷ್ಟು ರೇಟ್ ನಿಗದಿ ಮಾಡಿದ್ದಾರೆ ಎಂದು ತಿಳಿಸಬೇಕು.ಸಚಿವರ ಮಾತು ನಿಜವಾಗಿದ್ದರೆ ಮುಖ್ಯಮಂತ್ರಿಗಳು ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇದು ಸುಳ್ಳಾಗಿದ್ದರೆ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು.

ನಿಮ್ಮ ಸಚಿವರೇ ಹೇಳಿದಂತೆ ಪೋಸ್ಟಿಂಗ್ ಗಾಗಿ ನೀಡಲಾಗಿರುವ 70-80 ಲಕ್ಷ ಹಣ ಯಾರಿಗೆ ಸೇರಿದೆ. ಮುಖ್ಯಮಂತ್ರಿಗಳಿಗೆ ಸೇರಿದೆಯಾ? ಅಥವಾ ಗೃಹಮಂತ್ರಿಗಳಿಗೆ ಸೇರಿದೆಯಾ? ಅಥವಾ ಬೇರೆಯವರಿಗೆ ಸೇರಿದೆಯಾ? ಎಂಬ ಸ್ಪಷ್ಟನೆ ನೀಡಬೇಕು.

ಈ ಹಿಂದೆ ನಿಮ್ಮ ವಿಧಾನ ಪರಿಷತ್ ಬಿಜೆಪಿ ಸದಸ್ಯ ವಿಶ್ವನಾಥ್ ಅವರು ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಬಿಜೆಪಿ ಶಾಸಕ ಯತ್ನಾಳ್ ಅವರು ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ಹೇಳಿದ್ದರು. ಮಾಧುಸ್ವಾಮಿ ಅವರು ಈ ಸರ್ಕಾರವನ್ನು ಸುಮ್ಮನೆ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿರುವುದಕ್ಕಿಂತ ಅವರದೇ ಪಕ್ಷದ ನಾಯಕರು ಹೆಚ್ಚಾಗಿ ಹೇಳುತ್ತಿದ್ದಾರೆ.

ಈ ಹಿಂದೆ ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪಿ ಎಸ್ ಐ ನೇಮಕ ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದಾಗ ಅವರಿಗೆ ನೊಟೀಸ್ ಕೊಟ್ಟಿದ್ದೀರಿ. ಈಗ ನಿಮ್ಮ ಸಚಿವರು ಈ ಮಾತು ಹೇಳಿದ್ದು, ಇವರಿಗೆ ನೊಟೀಸ್ ಯಾವಾಗ ನೀಡುತ್ತೀರಿ?ಕಾಂಗ್ರೆಸ್ ಪಕ್ಷ ಪೇ ಸಿಎಂ ಅಭಿಯಾನ ಮಾಡಿದಾಗ ಸಿಐಡಿ ಮೂಲಕ ಕೇಸು ದಾಖಲಿಸುತ್ತೀರಿ? ನಿಮ್ಮ ಸಚಿವರ ಹೇಳಿಕೆಯೂ ಪೇ ಸಿಎಂ ಆರೋಪದ ಭಾಗವಲ್ಲವೆ?

ಇತ್ತೀಚೆಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಅವರ ಕಾರ್ಯದರ್ಶಿ ಮಂಜುನಾಥ್ ಅವರು ಒಂದು ಸುತ್ತೋಲೆ ಹೊರಡಿಸಿ, ಸರ್ಕಾರಿ ಕಚೇರಿಗಳಲ್ಲಿ ನಾನು ಭ್ರಷ್ಟ ಅಧಿಕಾರಿಯಲ್ಲ, ಲಂಚ ಸ್ವೀಕರಿಸುವುದಿಲ್ಲ ಎಂಬ ಅಭಿಯಾನ ಮಾಡಿದ್ದರು. ಇಷ್ಟೆಲ್ಲಾ ಅಭಿಯಾನ ಮಾಡಿದರೂ ಇಷ್ಟೊಂದು ಭ್ರಷ್ಟಾಚಾರ ಮಾಡಿರುವ ಅಧಿಕಾರಿ ಹಾಗೂ ರಾಜಕಾರಣಿ ಯಾರು? ಎಂಬುದನ್ನು ಜನರಿಗೆ ಹೇಳಬೇಕಿದೆ.

2008ರಿಂದ 2013ರವರೆಗೆ ರಾಜ್ಯವನ್ನು ಗಣಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮೂಲಕ ಬಗೆದು ಬಗೆದು ಹಣ ಮಾಡಿಕೊಂಡರು. 2019ರಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಭ್ರಷ್ಟಾಚಾರದಿಂದ, ನಡೆಯುತ್ತಿರುವುದು ಭ್ರಷ್ಟಾಚಾರದಿಂದಲೇ,  ಮುಂದೆ ನಡೆಯುವುದು ಭ್ರಷ್ಟಾಚಾರಕ್ಕಾಗಿ. ಹೀಗಾಗಿ ಇವರಿಗೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡುತ್ತಿದೆ. ಬಿಡುವಿಲ್ಲದಂತೆ ಲೂಟಿ ಮಾಡುತ್ತಿದ್ದಾರೆ.

ಇನ್ನು ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಅವರ ಕುಟುಂಬದವರು 40% ಕಮಿಷನ್ ಆರೋಪ ಮಾಡಿದ್ದರೂ ಸರ್ಕಾರದ ಕೃಪಾಕಟಾಕ್ಷದಿಂದ ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ರಾಜ್ಯದಲ್ಲಿ ಇವರ ಭ್ರಷ್ಟಾಚಾರಕ್ಕೆ ಇನ್ನು ಎಷ್ಟು ಮಂದಿ ಅಮಾಯಕರು ಬಲಿಯಾಗಬೇಕು? ಇನ್ಸ್ ಪೆಕ್ಟರ್ ನಂದೀಶ್ ಅವರು ಕೂಡ ಲಕ್ಷಾಂತರ ಹಣ ನೀಡಿದ ಒತ್ತಡದಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹೀಗೆ ದುಡ್ಡು ಕೊಟ್ಟು ಬಂದವರು ಅದನ್ನು ಜನರಿಂದಲೇ ಪಡೆಯಲು ಮುಂದಾಗುತ್ತಾರೆ. ಹೀಗಾಗಿ ಈ ಪೊಲೀಸ್ ಅಧಿಕಾರಿ ಸಾವಿಗೆ ಸರ್ಕಾರವೇ ಹೊಣೆ.

ಇದನ್ನೂ ಓದಿ: ಅಪ್ಪು ಮುಡಿಗೆ ʼಕರ್ನಾಟಕ ರತ್ನʼ : ಗೆಳೆಯನ ಕಾರ್ಯಕ್ರಮದಲ್ಲಿ ಎನ್‌ಟಿಆರ್‌ ಭಾಗಿ..!

ಇಡಿ, ಸಿಬಿಐ, ಆದಾಯ ತೆರಿಗೆ ಸಂಸ್ಥೆಗಳು ಕೇವಲ ವಿರೋಧ ಪಕ್ಷಗಳ ಮೇಲೆ ಪ್ರಯೋಗಕ್ಕೆ ಸೀಮಿತವಾಗಿವೆ. ಈ ಹಿಂದೆ ಸಚಿವ ಅಶ್ವತ್ಥ್ ನಾರಾಯಣ ಅವರು ಶಾಸಕ ಶ್ರೀನಿವಾಸ್ ಅವರ ನಿವಾಸಕ್ಕೆ ಹೋಗಿ ಆಪರೇಷನ್ ಕಮಲದ ಭಾಗವಾಗಿ ಕೋಟ್ಯಂತರ ರೂ. ಹಣ ನೀಡಿದರೂ ಇಡಿ ಗಮನಕ್ಕೆ ಬರುವುದಿಲ್ಲ. 2019ರಲ್ಲಿ ಸರ್ಕಾರ ಬದಲಾವಣೆ ಆದಾಗ ಸಾವಿರಾರು ಕೋಟಿ ವ್ಯವಹಾರವಾಗಿತ್ತು ಇದೂ ಕೂಡ ಈ ಸಂಸ್ಥೆಗಳ ಗಮನಕ್ಕೆ ಬಾರಲೇ ಇಲ್ಲ.

ರಾಜ್ಯ ಸರ್ಕಾರದ ವ್ಯಾಪ್ತಿಯ ಸಂಸ್ಥೆಗಳಿಂದ ತನಿಖೆಯಾದರೆ ಸತ್ಯಾಂಶ ಹೊರ ಬರುವುದಿಲ್ಲ. ಈ ಎಲ್ಲ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕಾದರೆ ಸಿಒಡಿ ಹಾಗೂ ಇತರೆ ರಾಜ್ಯದ ಸಂಸ್ಥೆಗಳಿಂದ ತನಿಖೆ ಮಾಡಿಸದೇ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ಸತ್ಯಾಂಶ ಬೆಳಕಿಗೆ ಬರುತ್ತದೆ. ನಂದೀಶ್ ಅವರಿಂದ ಯಾರೇ ಹಣ ಪಡೆದಿದ್ದರೂ ಈ ಸಮಯದಲ್ಲಿ ಅವರು ಹಿಂದಿರುಗಿಸಬೇಕು.

ಬಿಜೆಪಿ ಅಂದರೆ ಭ್ರಷ್ಟ ಜನತಾ ಪಕ್ಷ, ಬುರುಡೆ ಜನತಾ ಪಕ್ಷ ಎಂದು ನಾನು ಐದು ವರ್ಷಗಳ ಹಿಂದೆ ಹೇಳಿದ್ದೆ, ಈಗ ಅವರು ಬಂಡ ಜನರ ಪಕ್ಷವಾಗಿದೆ. ಯಾರು ಏನೇ ಬೈಯಲ್ಲಿ ಅವರು ಮಾಡುತ್ತಿರುವ ಅನ್ಯಾಯ, ಅಕ್ರಮವನ್ನು ಬಿಡುವುದಿಲ್ಲ.

ಇದನ್ನೂ ಓದಿ:  ಅರಿವೇ ಗುರು ಪ್ರಶಸ್ತಿ: ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಕವಿವಿ

2019ರಿಂದ ಈಚೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ. ಯಾವುದೇ ಮಿತಿ ಇಲ್ಲದೆ ಬೆಳಗಾದರೆ ಲೂಟಿಗೆ ಯೋಜನೆ ರೂಪಿಸುತ್ತಾರೆ. ಯಾವುದೇ ಅಧಿಕಾರಿಯನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರಿಸುವುದಿಲ್ಲ. ಕೇವಲ ಇದೊಂದೇ ಇಲಾಖೆ ಮಾತ್ರವಲ್ಲ ಎಲ್ಲ ಇಲಾಖೆಗಳಲ್ಲೂ ಇದೇ ಪ್ರವೃತ್ತಿ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News