ಯುಐಡಿಎಐಯಿಂದ ಲಭ್ಯವಾಗುತ್ತೆ 4 ವಿಧದ ಆಧಾರ್ ಕಾರ್ಡ್‌ಗಳು: ಅದರ ಪ್ರಯೋಜನಗಳು ವಿಭಿನ್ನ

Aadhaar Card: ಯುಐಡಿಎಐ ಬಳಕೆದಾರರಿಗೆ ನಾಲ್ಕು ಬಗೆಯ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ. ಈ ನಾಲ್ಕು ರೀತಿಯ ಆಧಾರ್ ಕಾರ್ಡ್‌ಗಳು ಕೂಡ ವಿಭಿನ್ನವಾಗಿದ್ದು, ಈ ಎಲ್ಲಾ ಕಾರ್ಡ್‌ಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ ಎಂಬುದು ವಿಶೇಷವಾಗಿದೆ.   

Written by - Yashaswini V | Last Updated : Jun 17, 2024, 10:48 AM IST
  • ಇ-ಆಧಾರ್ ಅನ್ನು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ
  • ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
  • ಇದನ್ನು ಆಧಾರ್‌ನ ಭೌತಿಕ ನಕಲು ಎಂದು ಸಹ ಪರಿಗಣಿಸಲಾಗುತ್ತದೆ.
ಯುಐಡಿಎಐಯಿಂದ ಲಭ್ಯವಾಗುತ್ತೆ 4 ವಿಧದ ಆಧಾರ್ ಕಾರ್ಡ್‌ಗಳು: ಅದರ ಪ್ರಯೋಜನಗಳು ವಿಭಿನ್ನ  title=

Types Of Aadhaar Card: ಪ್ರತಿಯೊಬ್ಬ ಭಾರತೀಯರಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಭಾವಚಿತ್ರ ಮತ್ತು ಬಯೋಮೆಟ್ರಿಕ್ಸ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಹಾಗಾಗಿಯೇ, ಬ್ಯಾಂಕ್ ಖಾತೆ ತೆರೆಯುವುದರಿಂದ ಸಿಮ್ ಕಾರ್ಡ್ ಖರೀದಿಸುವವರೆಗೂ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡ್ ಒದಗಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) 4 ರೀತಿಯ ಆಧಾರ್ ಕಾರ್ಡ್‌ಗಳನ್ನು ನೀಡುತ್ತದೆ. ಈ ಕಾರ್ಡ್‌ಗಳ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು ವಿಭಿನ್ನವಾಗಿರುತ್ತವೆ. ಆದರೂ, ಈ ಎಲ್ಲಾ ಕಾರ್ಡ್‌ಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ ಎಂಬುದು ವಿಶೇಷ. 

ಯುಐಡಿಎಐ (UIDAI) ನೀಡುವ ನಾಲ್ಕು ಬಗೆಯ ಆಧಾರ್ ಕಾರ್ಡ್‌ಗಳು ಯಾವುವು? ಇದರ ವಿಶೇಷತೆ ಏನು ಎಂದು ತಿಳಿಯೋಣ... 

ಆಧಾರ್ ಪತ್ರ: 
ಯುಐಡಿಎಐ ಆಧಾರ್ ಪತ್ರ ನೀಡಿದ ದಿನಾಂಕ ಮತ್ತು ಮುದ್ರಣ ದಿನಾಂಕದೊಂದಿಗೆ ಸುರಕ್ಷಿತ QR ಕೋಡ್ ಹೊಂದಿರುವ ಕಾಗದ ಆಧಾರಿತ ಲ್ಯಾಮಿನೇಟೆಡ್ ಪತ್ರವಾಗಿರುತ್ತದೆ. ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನೀವು ಯುಐಡಿಎಐ ನಲ್ಲಿ ಆಧಾರ್ ಕಾರ್ಡ್‌ಗಾಗಿ ನೊಂದಾಯಿಸಿಕೊಂಡರೆ ಆಧಾರ್ ಪತ್ರವನ್ನು ಅಂಚೆ ಮೂಲಕ ನಿಮ್ಮ ಮನೆಗೆ ಕಳುಹಿಸಲಾಗುತ್ತದೆ. ನಿಮ್ಮ ಮೂಲ ಆಧಾರ್ ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ, ನೀವು ಹೊಸದನ್ನು ಪಡೆಯಬಹುದು. ಈ ಪರಿಸ್ಥಿತಿಯಲ್ಲಿ, UIDAI ನ ಅಧಿಕೃತ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಆಧಾರ್ ಪತ್ರವನ್ನು ಬದಲಾಯಿಸಬಹುದು. ಇದಕ್ಕಾಗಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ- Free Aadhaar Update: ಆಧಾರ್ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ ಬಿಗ್ ಅಪ್ಡೇಟ್

ಇ-ಆಧಾರ್: 
ಇ-ಆಧಾರ್ (E- Aadhaar) ಅನ್ನು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದ್ದು, ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದನ್ನು ಆಧಾರ್‌ನ ಭೌತಿಕ ನಕಲು ಎಂದು ಸಹ ಪರಿಗಣಿಸಲಾಗುತ್ತದೆ. ಇ-ಆಧಾರ್ ಆಧಾರ್ ಕಾರ್ಡ್‌ನ ಎಲೆಕ್ಟ್ರಾನಿಕ್ ಆವೃತ್ತಿಯಾಗಿದೆ. ಇ-ಆಧಾರ್  ಪಾಸ್ವರ್ಡ್ ರಕ್ಷಿತವಾಗಿದೆ.  ಇದು ಯುಐಡಿಎಐಯ ಡಿಜಿಟಲ್ ಸಹಿಯನ್ನು ಸಹ ಒಳಗೊಂಡಿರುತ್ತದೆ. ಇ-ಆಧಾರ್ ಕಾರ್ಡ್‌ನಲ್ಲಿ ಆಫ್‌ಲೈನ್ ಪರಿಶೀಲನೆಗಾಗಿ ಸುರಕ್ಷಿತ QR ಕೋಡ್ ಅನ್ನು ಸಹ ಹೊಂದಿಸಲಾಗಿರುತ್ತದೆ. 

ಪಿ‌ವಿ‌ಸಿ ಆಧಾರ್ ಕಾರ್ಡ್: 
ಪಿವಿಸಿ ಆಧಾರ್ ಕಾರ್ಡ್ (PVC Aadhaar Card) ಕಾಂಪ್ಯಾಕ್ಟ್ ಗಾತ್ರದ ಆಧಾರ್ ಕಾರ್ಡ್ ಆಗಿದೆ. ಇದರ ಗಾತ್ರವು ನೋಡಲು ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ನಂತೆಯೇ ಇರುತ್ತದೆ. ಇದನ್ನು ಪ್ಲಾಸ್ಟಿಕ್ ಆಧಾರ್ ಕಾರ್ಡ್ ಎಂತಲೂ ಕರೆಯುತ್ತಾರೆ. ಪಿವಿಸಿ ಆಧಾರ್ ಕಾರ್ಡ್ ಡಿಜಿಟಲ್ ಕ್ಯೂ‌ಆರ್ ಕೋಡ್, ಫೋಟೋ ಮತ್ತು ಜನಸಂಖ್ಯಾ ಮಾಹಿತಿಗಳನ್ನು ಒಳಗೊಂಡಿರುತ್ತದೆ. uidai.gov.in ಅಥವಾ Resident.uidai.gov.in ಗೆ ಭೇಟಿ ನೀಡುವ ಮೂಲಕ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಮೂಲಕ  ನೀವು ಅದನ್ನು ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ನೀವು 50 ರೂ. ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. 

ಇದನ್ನೂ ಓದಿ- ಎಟಿಎಂ ಕಾರ್ಡ್ ಬಳಕೆದಾರರಿಗೆ ಬಿಗ್‌ ಶಾಕ್;‌ ಇನ್ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕು!

mAadhaar:  
mAadhaar ಯುಐಡಿಎಐನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ. ಸಿಐಡಿಆರ್ (CIDR) ನಲ್ಲಿ ನೋಂದಾಯಿಸಲಾದ ತಮ್ಮ ಆಧಾರ್ ದಾಖಲೆಗಳನ್ನು ಸಾಗಿಸಲು ಇದು ಆಧಾರ್ ಹೊಂದಿರುವವರಿಗೆ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು ಆಫ್‌ಲೈನ್ ಪರಿಶೀಲನೆಗಾಗಿ ಸುರಕ್ಷಿತ QR ಕೋಡ್ ಅನ್ನು ಸಹ ಒಳಗೊಂಡಿದೆ. ಇದನ್ನು ಉಚಿತವಾಗಿ ಡೌನ್‌ಲೋಡ್ ಕೂಡ ಮಾಡಬಹುದು. ಇದನ್ನು ಸಹ ಮಾನ್ಯ ಐಡಿ ಎಂದು ಪರಿಗಣಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News