ಬೆಳಗಾವಿ: ಕನ್ನಡ ರಾಜೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ನಸುಕಿನಜಾವ 3.30ಗಂಟೆಗೆ ಹೈಡ್ರಾಮಾ ನಡೆದಿದೆ. ಕರುನಾಡು ಕ್ರಾಂತಿ ಪಡೆ ಕಾರ್ಯಕರ್ತರು ಪ್ರಥಮ ಬಾರಿಗೆ ಪಾಲಿಕೆ ಎದುರು ಕನ್ನಡ ದ್ವಜ ಹಾರಿಸಿ ಭುವನೇಶ್ವರಿ ದೇವಿ ಪೋಟೋ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಪಾಲಿಕೆ ಸ್ಥಾಪನೆಯಾದ ನಂತರ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ಆಚರಣೆ ನಡೆಸಲಾಗಿದೆ.
ಬೆಳಗಾವಿ ನಗರ ಮುನಿಸಿಪಲ್ ಕಾರ್ಪೊರೇಶನ್ ಕಮಿಟಿಯನ್ನು 1851 ರ ಡಿಸೆಂಬರ್ 1 ರಂದು ಸ್ಥಾಪಿಸಲಾಯಿತು. ಈಗ ಅದೇ ನಗರವನ್ನು ಕರ್ನಾಟಕ ಮುನಿಸಿಪಲ್ ಕಾರ್ಪೊರೇಶನ್ಸ್ ಆಕ್ಟ್, 1976 ರ ಅಡಿಯಲ್ಲಿ ಬೆಲಾಗವಿ ನಗರ ನಿಗಮ ಎಂದು ಕರೆಯಲಾಗುತ್ತದೆ. ಬಾಂಬೆ ಕರ್ನಾಟಕದ ಮುನ್ಸಿಪಲ್ ಕಮಿಟಿಯಲ್ಲಿ ಬೆಳಗಾವಿ ನಗರ ಮುನ್ಸಿಪಲ್ ಕಾರ್ಪೋರೇಷನ್ ಮೊದಲ ಸಮಿತಿಯಾಗಿತ್ತು.
ಮಹಾನಗರ ಪಾಲಿಕೆ ಸ್ಥಾಪನೆಯಾದ ನಂತರ ಒಮ್ಮೆಯೂ ಪಾಲಿಕೆ ಎದುರು ಕನ್ನಡ ದ್ವಜ ಹಾರಿಸಿರಲಿಲ್ಲ. ಎಂಇಎಸ್ ಆಡಳಿತವಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಾರಿಸಿರುವ ಕನ್ನಡ ದ್ವಜ ತೆಗೆಯುವಂತೆ ಬೆಳಗಾವಿ ಮಾರ್ಕೇಟ್ ಠಾಣೆ ಪೋಲಿಸರು ಮನವೊಲಿಕೆಗೆ ಯತ್ನಿಸಿದ್ದಾರೆ. ಪ್ರಾಣಬಿಡುತ್ತೇವೆ ಹೊರತು ಯಾವುದೇ ಕಾರಣಕ್ಕೂ ಹಾರಿಸಿದ ಧ್ವಜ ತೆಗೆಯುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.ಅಲ್ಲದೆ, ಧ್ವಜ ತೆಗೆದರೆ ಗೇಟ್ ಕಂಬಕ್ಕೆ ನೇಣುಹಾಕಿಕೊಳ್ಳುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸಿದ್ದೇವೆ, ಮಹಾರಾಷ್ಟ್ರದಲ್ಲಿ ಅಲ್ಲ ಎಂದೂ ಸಹ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆಯಲ್ಲಿ ಮನವೋಲಿಕೆಗೆ ಒಪ್ಪದ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕಾರ್ಯಕರ್ತರ ಬಂಧನದ ನಂತರ ಪಾಲಿಕೆ ಮುಂದೆ ಹಾಕಿದ್ದ ಧ್ವಜವನ್ನು ತೆರವುಗೊಳಿಸಲಾಗಿದೆ. ಪಾಲಿಕೆ ಸೆಕ್ಯುರಟಿಗಳಿಂದ ದ್ವಜ ತೆರವುಗೊಳಿಸಿದ ಪೋಲಿಸರು ಧ್ವಜವನ್ನು ತೆರವುಗೊಲಿಸಿದ್ದಾರೆ.