ಬಜೆಟ್ ಅಧಿವೇಶನದಲ್ಲಿ ಜೈನ್ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಜೈನ ಧರ್ಮಿಯರ ಪ್ರಮುಖ ಏಳು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಹಿಂದೆ ಬಿಜೆಪಿ ಸರ್ಕಾರ ಹಾಗೂ ಈಗಿರುವ ಕಾಂಗ್ರೆಸ್ ಸರ್ಕಾರ ಮುಂದೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಹಲವಾರು ಸಚಿವರಿಗೆ ನಮ್ಮ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಗಿದೆ.

Written by - Yashaswini V | Last Updated : Feb 13, 2024, 11:15 AM IST
  • ಒಂದು ವೇಳೆ ಸರ್ಕಾರ ಈ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳಿಗೆ ಈಡೇರಿಸದಿದ್ದರೆ ಜೈನ ಸಮುದಾಯ ಯಾವ ರೀತಿ ಕ್ರಮಗಳನ್ನು ಕೈಗೊತ್ತಿಕೊಳ್ಳುತ್ತಾರೋ ಅದಕ್ಕೆ ನಾವು ಬೆಂಬಲ ಸೂಚಿಸುತ್ತೇವೆ.
  • ಜೈನ ಸಮಾಜದಿಂದ ಯಾವುದೇ ಉಗ್ರ ಹೋರಾಟಗಳನ್ನು ನಡೆಸುವುದಿಲ್ಲ, ನಾವು ಅಹಿಂಸಾ ಪರಮೋಧರ್ಮ ಇರುವುದರಿಂದ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಶಾಂತಿಯುತವಾಗಿ ಬೇಡಿಕೆ ಸಲ್ಲಿಸಿ ನಾವು ಪಡೆದುಕೊಳ್ಳುತ್ತೇವೆ.
  • ಈ ದೃಷ್ಟಿಯಿಂದ ಸರ್ಕಾರ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು, ಈಡೇರಿಸುತ್ತದೆ ಎಂದು ವಿಶ್ವಾಸವಿದೆ
ಬಜೆಟ್ ಅಧಿವೇಶನದಲ್ಲಿ ಜೈನ್ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಒತ್ತಾಯ title=

ಚಿಕ್ಕೋಡಿ: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಜೈನ್ ಸಮುದಾಯದ ಪ್ರಮುಖ ಏಳು ಬೇಡಿಕೆಗಳನ್ನು ಸರ್ಕಾರ ತುರ್ತಾಗಿ ಈಡೇರಿಸಬೇಕು ಎಂದು ಜೈನ್ ಮುನಿ ಬಾಲಾಚಾರ್ಯ 1008 ಆಚಾರ್ಯ ಸಿದ್ದಸೇನ ಮುನಿ ಮಹಾರಾಜರು ಆಗ್ರಹಿಸಿದರು. 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ವಿಶ್ವ ಶಾಂತಿಗಾಗಿ ಆಯೋಜನೆ ಮಾಡಿರುವ ಪಂಚ ಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಕಾರ್ಯಕ್ರಮದ ರೂಪುರೇಷೆ ತಯಾರಿ ವೇದಿಕೆ ಪರಿಶೀಲಿಸಿ ನಂತರ ಮಾದ್ಯಮಗಳಿಗೆ ಜೊತೆ ಮಾತನಾಡಿದ ಬಾಲಾಚಾರ್ಯ 1008 ಆಚಾರ್ಯ ಸಿದ್ದಸೇನ ಮುನಿ ಮಹಾರಾಜರು, ಜೈನ ಧರ್ಮಿಯರ ಪ್ರಮುಖ ಏಳು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ಹಿಂದೆ ಬಿಜೆಪಿ ಸರ್ಕಾರ ಹಾಗೂ ಈಗಿರುವ ಕಾಂಗ್ರೆಸ್ ಸರ್ಕಾರ ಮುಂದೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಹಲವಾರು ಸಚಿವರಿಗೆ ನಮ್ಮ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಗಿದೆ. ಜೈನ ಧರ್ಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು, ಪ್ರತಿ ಜಿಲ್ಲೆಯಲ್ಲಿ ಜೈನ ವಸತಿಗೃಹ ನಿರ್ಮಿಸಬೇಕು. ಬಡವರಿಗೆ ಉಚಿತ ಚಿಕಿತ್ಸೆಗೆ ಆಸ್ಪತ್ರೆಗಳನ್ನು ನಿರ್ಮಿಸಬೇಕು, ಪ್ರತಿ ಹಳ್ಳಿಗಳಲ್ಲಿ ಮುನಿ ನಿವಾಸ, ಮಂಗಲ ಕಾರ್ಯಾಲಯ ನಿರ್ಮಿಸಬೇಕು. ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಜೈನ್ ಮುನಿಗಳ ರಕ್ಷಣೆ ಮಾಡಬೇಕು. ಬಡವರಿಗೆ ಶಿಖರಜಿಗೆ ಹೋಗಲು ಅನುದಾನ ನೀಡಬೇಕು ಎಂಬ ಬೇಡಿಕೆಗಳಿಗೆ ಸರ್ಕಾರ ಆದಷ್ಟೂ ಬೇಗ ಸ್ಪಂದಿಸಬೇಕು ಎಂದವರು ಹಕ್ಕೊತ್ತಾಯ ಮಂಡಿಸಿದರು.

ಇದನ್ನೂ ಓದಿ- ಸಿದ್ದರಾಮಯ್ಯ ಬಜೆಟ್ ಮೇಲೆ ಗಡಿಜಿಲ್ಲೆ ಜನರ ಬೆಟ್ಟದಷ್ಟು ನಿರೀಕ್ಷೆ !

ಒಂದು ವೇಳೆ ಸರ್ಕಾರ ಈ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳಿಗೆ ಈಡೇರಿಸದಿದ್ದರೆ ಜೈನ ಸಮುದಾಯ ಯಾವ ರೀತಿ ಕ್ರಮಗಳನ್ನು ಕೈಗೊತ್ತಿಕೊಳ್ಳುತ್ತಾರೋ ಅದಕ್ಕೆ ನಾವು ಬೆಂಬಲ ಸೂಚಿಸುತ್ತೇವೆ. ಜೈನ ಸಮಾಜದಿಂದ ಯಾವುದೇ ಉಗ್ರ ಹೋರಾಟಗಳನ್ನು ನಡೆಸುವುದಿಲ್ಲ, ನಾವು ಅಹಿಂಸಾ ಪರಮೋಧರ್ಮ ಇರುವುದರಿಂದ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಶಾಂತಿಯುತವಾಗಿ ಬೇಡಿಕೆ ಸಲ್ಲಿಸಿ ನಾವು ಪಡೆದುಕೊಳ್ಳುತ್ತೇವೆ. ಈ ದೃಷ್ಟಿಯಿಂದ ಸರ್ಕಾರ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು, ಈಡೇರಿಸುತ್ತದೆ ಎಂದು ವಿಶ್ವಾಸವಿದೆ ಎಂದು ಮಹಾರಾಜರು ತಿಳಿಸಿದರು. 

ಇದನ್ನೂ ಓದಿ- "ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವುದರಿಂದ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣವಾಗಿದೆ"

ಫೆಬ್ರವರಿ 14 ರಿಂದ 20 ವರಿಗೆ ವಿಶ್ವ ಶಾಂತಿಗಾಗಿ ನಂದಗಾಂವ್ ಗ್ರಾಮದಲ್ಲಿ ಪಂಚ ಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ನಂದಗಾಂವ ಗ್ರಾಮವು ಕೃಷ್ಣಾ ನದಿ ದಂಡೆ ಮೇಲೆ ಇರುವುದರಿಂದ ಈ ನೆಲವು ಸಾಧು ಸಂತರು ನೆಲೆಸಿರುವ ಪುಣ್ಯಭೂಮಿ ಇದಾಗಿದ್ದು ಈ ಗ್ರಾಮದಲ್ಲಿ ವಿಶ್ವಶಾಂತಿಗಾಗಿ,  ಪುಣ್ಯ ಪ್ರಾಪ್ತಿಗಾಗಿ, ಆತ್ಮ ಶಾಂತಿಗಾಗಿ ಪಂಚ ಕಲ್ಯಾಣ ಮಹಾ ಮಹೋತ್ಸವ ಆಚರಣೆ ಮಾಡಲಾಗುತ್ತಿದ್ದು ಶ್ರಾವಕ ಶ್ರಾವಕಿಯರು ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News