ಸ್ಪೋಟಕ ಮಾಹಿತಿ : ಉಗ್ರ ಶಾರಿಕ್‌ನ ಟಾರ್ಗೆಟ್‌ ಈ ನಗರಗಳು..! 

ಮಂಗಳೂರು ಕುಕ್ಕರ್‌ ಬ್ಲ್ಯಾಸ್ಟ್‌ ಶಂಕಿತ ಉಗ್ರ ಶಾರಿಕ್‌ ಬಗ್ಗೆ ಒಂದೊದೇ ಸ್ಪೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಸದ್ಯ ಎನ್‌ಐಎ ತನಿಖೆ ವೇಳೆ ಭಯಾನಕ ಸಂಗತಿಗಳು ಹೊರಬಿದಿದ್ದು, ರಾಜ್ಯದ ಈ ನಗರಗಳು ಶಾರಿಕ್‌ ಟಾರ್ಗೆಟ್‌ ಆಗಿದ್ದವು ಎಂಬುದು ಗೊತ್ತಾಗಿದೆ. ಉಗ್ರ ಸಂಘಟನೆಗಳು   

Written by - VISHWANATH HARIHARA | Edited by - Krishna N K | Last Updated : Nov 27, 2022, 12:22 PM IST
  • ಉಗ್ರ ಶಾರಿಕ್‌ ಬಗ್ಗೆ ಒಂದೊದೇ ಸ್ಪೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ
  • ಎನ್‌ಐಎ ತನಿಖೆ ವೇಳೆ ಭಯಾನಕ ಸಂಗತಿಗಳು ಹೊರಬಿದಿದ್ದಿವೆ
  • ರಾಜ್ಯದ ಹಲವು ನಗರಗಳು ಶಾರಿಕ್‌ ಟಾರ್ಗೆಟ್‌ ಆಗಿದ್ದವು ಎಂಬುದು ಗೊತ್ತಾಗಿದೆ
ಸ್ಪೋಟಕ ಮಾಹಿತಿ : ಉಗ್ರ ಶಾರಿಕ್‌ನ ಟಾರ್ಗೆಟ್‌ ಈ ನಗರಗಳು..!  title=

ಬೆಂಗಳೂರು : ಮಂಗಳೂರು ಕುಕ್ಕರ್‌ ಬ್ಲ್ಯಾಸ್ಟ್‌ ಶಂಕಿತ ಉಗ್ರ ಶಾರಿಕ್‌ ಬಗ್ಗೆ ಒಂದೊದೇ ಸ್ಪೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಸದ್ಯ ಎನ್‌ಐಎ ತನಿಖೆ ವೇಳೆ ಭಯಾನಕ ಸಂಗತಿಗಳು ಹೊರಬಿದಿದ್ದು, ರಾಜ್ಯದ ಈ ನಗರಗಳು ಶಾರಿಕ್‌ ಟಾರ್ಗೆಟ್‌ ಆಗಿದ್ದವು ಎಂಬುದು ಗೊತ್ತಾಗಿದೆ. ಉಗ್ರ ಸಂಘಟನೆಗಳು   
ದೇಶದಲ್ಲಿ BAD ಎಂಬ ಟಾರ್ಗೆಟ್‌ ಇಟ್ಟುಕೊಳ್ಳುತ್ತಿದ್ದವು. 

ಅಂದರೆ ಬೆಂಗಳೂರು, ಅಹ್ಮದಾಬಾದ್, ದೆಹಲಿ ನಗರಳನ್ನು ಗುರಿಯಾಗಿರಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದವು. ಅದೇ ರೀತಿ ಶಾರಿಕ್‌ ಸಹ  MBH ಎಂಬ ಕೋಡ್‌ ರೆಡಿಮಾಡಿಕೊಂಡಿದ್ದ.  ಸದ್ಯ ಮಂಗಳೂರು ಬಾಂಬ್ ಬ್ಲಾಸ್ಟ್ ನ ಹಿಂದಿನ ಶಾರ್ಟ್ ಫಾರ್ಮ್ ಏನೂ ಅಂತಾ ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿದೆ. ಇದರಲ್ಲಿ ಸ್ಪೋಟಕ ಮಾಹಿತಿ ಗೊತ್ತಾಗಿದ್ದು, ಕರವಾಳಿಯ ಮಂಗಳೂರು, ವಿಶ್ವದ ಐಟಿ ಹಬ್‌ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ ಶಾರಿಕ್ ನ ಟಾರ್ಗೆಟ್ ಸ್ಪಾಟ್‌ಗಳು ಎಂಬುದು ಗೊತ್ತಾಗಿದೆ. 

ಇದನ್ನೂ ಓದಿ: Bengaluru's potholes: ಹಳೆ ಮುದುಕಿಗೆ ಶೃಂಗಾರ ಅಂದಂಗಾಯ್ತು ಬೆಂಗಳೂರಿನ ರಸ್ತೆಗಳ ಅವಸ್ಥೆ!

ಇನ್ನೂ ತನಿಖೆ ವೇಳೆ ಶಾರಿಕ್‌ ಐಸಿದ್‌ ಜೊತೆ ನಂಟು ಬೆಳಸಿ ಬಾಂಗ್ಲಾದೇಶದ ಗಡಿ ಭಾಗಕ್ಕೆ ತೆರಳಿ ಬಾಂಬ್ ತಯಾರಿಸೋದನ್ನೂ ಕಲಿತು ಬಂದಿದ್ದ ಎನ್ನಲಾಗಿದೆ. ಯಾವ್ಯಾವ ಕಚ್ಚಾ ಸಾಮಾಗ್ರಿಗಳನ್ನ‌ ಬಳಸಿದರೆ ಯಾವ ರೀತಿ ಸ್ಫೋಟ ಸಂಭವಿಸುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈತ ಕರಗತ ಮಾಡಿಕೊಂಡಿದ್ದ. ಇನ್ನೂ ಸ್ಟೋಟಕ್ಕೆ ಬೇಕಾದ ಕೆಲ ಕೆಮಿಕಲ್ ಗಳನ್ನ ಬೆಂಗಳೂರಿನಲ್ಲೇ ಕಲೆಕ್ಟ್ ಮಾಡಿದ್ದನಂತೆ. ಮಂಗಳೂರಿನಲ್ಲಿ ಈತ ರೂಪಿಸಿದ್ದ ಪ್ಲ್ಯಾನ್‌ ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತಂತೆ. ಬೆಂಗಳೂರಿನಲ್ಲಿ ಮೆಜೆಸ್ಟಿಕ್, ಬಸವನಗುಡಿ, ಎಂಜಿ ರಸ್ತೆ  ಭಾಗವನ್ನೇ ಈತ ಪ್ರಮುಖವಾಗಿ ಟಾರ್ಗೆಟ್ ಮಾಡಿಕೊಂಡಿದ್ದ ಎನ್ನಲಾಗಿದೆ.  

ಶಾರಿಕ್‌ ಬಾಂಬ್‌ ಬ್ಲಾಸ್ಟ್ ಮಾಡಿ ಅನೇಕರನ್ನು ಬಲಿ ಪಡೆದು ಐಸಿಸ್ ದೃಷ್ಟಿಯಲ್ಲಿ ತಾನೂ ಧರ್ಮದ ಪರ ಹೋರಾಟಗಾರ ಎಂದು ಬಿಂಬಿಸಿಕೊಳ್ಳಲು ಮುಂದಾಗಿದ್ದ. ತನ್ನ ಎಲ್ಲಾ ಟಾರ್ಗೆಟ್ ಮುಗಿಸಿ ಕತಾರ್‌ಗೆ ಎಸ್ಕೇಪ್ ಆಗಲು ಸ್ಕೆಚ್ ಸಹ ಹಾಕಿದ್ದ. ಕಾತರ್‌ಗೆ ತೆರಳಿ ವಿಧ್ವಂಸಕ ಕೃತ್ಯವೆಸಗಿದ ನಂತರ ಉಗ್ರಗಾಮಿ ಸಂಘಟನೆಗಳು ವಿಡಿಯೋ ಹರಿಬಿಟ್ಟು ಹೊಣೆ ಹೋರುವ ರೀತಿ ಬಾಂಬ್ ಸ್ಫೋಟದ ಹೊಣೆ ತಾನೇ ಹೊರಬೇಕು ಎಂದು ಪ್ಲ್ಯಾನ್‌ ರೂಪಿಸಿದ್ದ. ಸದ್ಯ ಅದೃಷ್ಟವಾಶತ್ ಕುಕ್ಕರ್‌ ಬಾಂಬ್‌ ಆಟೋದಲ್ಲೇ ಸ್ಪೋಟಗೊಂಡು ರಾಜ್ಯದಲ್ಲಿ ಸಂಭವಿಸಬೇಕಾಗಿದ್ದ ಸಾವು ನೋವುಗಳು ತಪ್ಪಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News